ಸ್ವಂತ ಮನೆಯ ಕನಸು ನನಸಾಗುವುದು ! ಮಾರುಕಟ್ಟೆ ಬೆಲೆಗಿಂತ ಕಡಿಮೆ ದರದಲ್ಲಿ ಮನೆಗಳನ್ನು ಮಾರಾಟ ಮಾಡುತ್ತಿದೆ PNB!

ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಮೂಲಕ ಕಡಿಮೆ ದರದಲ್ಲಿ ಮನೆಯನ್ನು ಖರೀದಿಸಬಹುದು. ಈ ಅವಕಾಶ ಇಂದು ಮಾತ್ರ. ಇದು ವಸತಿ ಆಸ್ತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಮತ್ತು ಕೃಷಿ ಆಸ್ತಿಯನ್ನು ಒಳಗೊಂಡಿದೆ. 

Punjab National Bank : ಈ ವರ್ಷ ಮನೆ ಖರೀದಿಸುವ ಯೋಚನೆಯಲ್ಲಿದ್ದರೆ ದೇಶದ ಸರ್ಕಾರಿ ಬ್ಯಾಂಕ್ PNB ನಿಮಗೆ ಈ ಅವಕಾಶವನ್ನು ನೀಡುತ್ತಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಈ ಬಗ್ಗೆ ಟ್ವೀಟ್ ಮಾಡಿದ್ದು, ಅಗ್ಗದ ದರದಲ್ಲಿ ಮನೆ ಖರೀದಿಸುವುದು ಸಾಧ್ಯವಾಗುತ್ತದೆ. PNB ವಸತಿ ಆಸ್ತಿ, ವಾಣಿಜ್ಯ ಆಸ್ತಿ, ಕೈಗಾರಿಕಾ ಆಸ್ತಿ ಮತ್ತು ಕೃಷಿ ಆಸ್ತಿಯನ್ನು ಮಾರಾಟ ಮಾಡುತ್ತಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ PNB : 
PNB ಮೆಗಾ ಇ-ಹರಾಜ  ಮೂಲಕ ನಿಮ್ಮ ಕನಸಿನ ಆಸ್ತಿಯನ್ನು  ಖರೀಸುವ ಅವಕಾಶವಿದೆ ಎಂದು ಪಂಜಾಬ್ ನ್ಯಾಷನಲ್ ಬ್ಯಾಂಕ್ ಅಧಿಕೃತ ಟ್ವೀಟ್‌ನಲ್ಲಿ ಬರೆದಿದೆ. ಇಂದು ಅಂದರೆ ಜುಲೈ 20 ರಂದು ಅಗ್ಗದ ದರದಲ್ಲಿ ಮನೆ ಖರೀದಿಸಲು ಬಿಡ್ ಮಾಡಬಹುದಾಗಿದೆ. 

12,022 ಮನೆಗಳಿಗೆ ಬಿಡ್ ಮಾಡಬಹುದು : 
12022 ಮನೆಗಳು, 2313 ಅಂಗಡಿಗಳು, 1171 ಕೈಗಾರಿಕಾ ಆಸ್ತಿಗಳು ಮತ್ತು 103 ಕೃಷಿ ಭೂಮಿಯನ್ನು ಮಾರಾಟ ಮಾಡುತ್ತಿದೆ ಎಂದು ಪಿಎನ್ ಬಿ ಹೇಳಿದೆ. ಈ ಹರಾಜಿನ ಕುರಿತು ಹೆಚ್ಚಿನ ಮಾಹಿತಿಗಾಗಿ, ನೀವು ಅಧಿಕೃತ ಲಿಂಕ್ https://ibapi.in/ ಗೆ ಭೇಟಿ ನೀಡಬಹುದು

ಯಾವ ರೀತಿಯ ಆಸ್ತಿಯನ್ನು ಹರಾಜು ಮಾಡಲಾಗುತ್ತದೆ? : 
ಅನೇಕ ಜನರು ಬ್ಯಾಂಕ್‌ನಿಂದ ಆಸ್ತಿಗಾಗಿ ಸಾಲವನ್ನು ತೆಗೆದುಕೊಳ್ಳುತ್ತಾರೆ. ಆದರೆ ಕೆಲವು ಕಾರಣಗಳಿಂದ ಅವರು ತಮ್ಮ ಸಾಲವನ್ನು ಮರುಪಾವತಿಸಲು ಸಾಧ್ಯವಾಗುವುದಿಲ್ಲ. ನಂತರ ಅವರೆಲ್ಲರ  ಜಮೀನು ಅಥವಾ ನಿವೇಶನವನ್ನು ಬ್ಯಾಂಕ್ ಸ್ವಾಧೀನಪಡಿಸಿಕೊಳ್ಳುತ್ತದೆ. ಈ ರೀತಿಯ ಆಸ್ತಿಯನ್ನು ಬ್ಯಾಂಕ್‌ಗಳು ಕಾಲಕಾಲಕ್ಕೆ ಹರಾಜು ಮಾಡುತ್ತವೆ.  ಈ ಹರಾಜಿನಲ್ಲಿ, ಆಸ್ತಿಯನ್ನು ಮಾರಾಟ ಮಾಡುವ ಮೂಲಕ ಬ್ಯಾಂಕ್ ತನ್ನ ಬಾಕಿ ಮೊತ್ತವನ್ನು ಮರುಪಡೆಯುತ್ತದೆ.

SARFAESI ಕಾಯಿದೆಯಡಿಯಲ್ಲಿ ನಡೆಯಲಿದೆ ಹರಾಜು :  
ಈ ಹರಾಜು ಸಂಪೂರ್ಣವಾಗಿ ಪಾರದರ್ಶಕವಾಗಿರುತ್ತದೆ. ಈ ಮೆಗಾ ಇ-ಹರಾಜನ್ನು SARFAESI ಕಾಯಿದೆ ಅಡಿಯಲ್ಲಿ ಮಾಡಲಾಗುತ್ತಿದೆ.  ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು, ಯಾವುದೋ ಕಾರಣದಿಂದ ಸಾಲ ಮರು ಪಾವತಿ ಮಾಡಲು ಸಾಧ್ಯವಾಗದಿದ್ದಲ್ಲಿ ಅಂಥಹ ಆಸ್ತಿಯನ್ನು ಹರಾಜಿನಲ್ಲಿ ಇಡಲಾಗುತ್ತದೆ. 

Source : https://zeenews.india.com/kannada/business/punjab-national-bank-mega-e-auction-buy-property-at-reasonable-price-146987

Leave a Reply

Your email address will not be published. Required fields are marked *