Health Tips: ಪ್ರತಿದಿನ ಒಂದು ಸೇಬು ತಿನ್ನುವುದರಿಂದ ಹಲವಾರು ರೀತಿಯ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ ಎಂದು ವೈದ್ಯರು ಹೇಳುತ್ತಾರೆ. ಆದರೆ ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಎರಡು ರೀತಿಯ ಸೇಬು ಹಣ್ಣುಗಳನ್ನು ನೋಡುತ್ತೇವೆ. ಹಾಗಾದರೆ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇವೆರಡು ಹಣ್ಣುಗಳ ನಡುವೆ ಇರುವ ವ್ಯತ್ಯಾಸವೇನು? ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.

ದಿನಕ್ಕೊಂದು ಸೇಬು (Apple) ತಿಂದರೆ ವೈದ್ಯರಿಂದ ದೂರವಿರಬಹುದು ಎಂಬ ಮಾತನ್ನು ನೀವು ಕೇಳಿರಬಹುದು. ಇದರರ್ಥ ಪ್ರತಿದಿನ ಒಂದು ಸೇಬು ತಿಂದರೆ ಹಲವಾರು ಆರೋಗ್ಯ (Health) ಸಮಸ್ಯೆಗಳು ಬರುವುದನ್ನು ತಡೆಯಬಹುದು. ಇದರಲ್ಲಿ ಪೋಷಕಾಂಶಗಳು ಮತ್ತು ನಾರಿನಂಶ ಅಧಿಕವಾಗಿದ್ದು ಜೀರ್ಣಕ್ರಿಯೆಯನ್ನು ಸುಧಾರಿಸಲು ಬಹಳ ಪ್ರಯೋಜನಕಾರಿಯಾಗಿದೆ. ಆದರೆ ಸಾಮಾನ್ಯವಾಗಿ ನಾವು ಮಾರುಕಟ್ಟೆಯಲ್ಲಿ ಎರಡು ರೀತಿಯ ಸೇಬು ಹಣ್ಣುಗಳನ್ನು ನೋಡುತ್ತೇವೆ. ಒಂದು ಕೆಂಪು ಮತ್ತೊಂದು ಹಸಿರು (Red vs Green Apples). ಹಾಗಾದರೆ ಇವೆರಡರಲ್ಲಿ ಆರೋಗ್ಯಕ್ಕೆ ಯಾವುದು ಒಳ್ಳೆಯದು? ಇವೆರಡು ಹಣ್ಣುಗಳ ನಡುವೆ ಇರುವ ವ್ಯತ್ಯಾಸವೇನು? ಕರುಳಿನ ಆರೋಗ್ಯಕ್ಕೆ ಯಾವುದು ಒಳ್ಳೆಯದು ಎಂಬುದನ್ನು ತಿಳಿದುಕೊಳ್ಳಿ.
ಹಸಿರು ಸೇಬುಹಣ್ಣು ಅಥವಾ ಗ್ರೀನ್ ಆಪಲ್ ಆರೋಗ್ಯಕ್ಕೆ ಹೇಗೆ ಉಪಯೋಗಕಾರಿ?
ಕೆಂಪಿರುವ ಸೇಬು ಹಣ್ಣುಗಳಿಗೆ ಹೋಲಿಸಿದರೆ ಹಸಿರು ಸೇಬುಗಳು ಸ್ವಲ್ಪ ಹುಳಿಯಾಗಿರುತ್ತದೆ. ನೈಸರ್ಗಿಕ ಸಕ್ಕರೆ ಅಂಶ ಕಡಿಮೆ ಇರುತ್ತದೆ. ಹಾಗಾಗಿ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಬಯಸುತ್ತಿರುವವರಿಗೆ ಈ ಹಣ್ಣು ಬಹಳ ಒಳ್ಳೆಯದು. ಅದಲ್ಲದೆ ಈ ಹಸಿರು ಬಣ್ಣದ ಸೇಬು ಹಣ್ಣುಗಳಲ್ಲಿ ನಾರಿನ ಅಂಶ ಅಧಿಕವಾಗಿರುವುದರಿಂದ ಕರುಳಿನ ಆರೋಗ್ಯ ಕಾಪಾಡಲು ಪ್ರಯೋಜನಕಾರಿಯಾಗಿದೆ. ಇದು ಒಳ್ಳೆಯ ಬ್ಯಾಕ್ಟೀರಿಯಾದ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ಜೀರ್ಣಕ್ರಿಯೆ ಸರಿಯಾಗಿ ಆಗಲು ಸಹಾಯ ಮಾಡುತ್ತದೆ. ಇನ್ನು, ಹಸಿರು ಸೇಬುಗಳಲ್ಲಿರುವ ಪಾಲಿಫಿನಾಲ್‌ಗಳು ಆಕ್ಸಿಡೇಟಿವ್ ಒತ್ತಡ ಮತ್ತು ಉರಿಯೂತವನ್ನು ತಡೆಯಲು ಸಹಾಯ ಮಾಡುವುದರಿಂದ ನಮ್ಮ ಕರುಳು ಆರೋಗ್ಯವಾಗಿ ಇರುತ್ತದೆ.
ಕೆಂಪು ಸೇಬು ಅಥವಾ ರೆಡ್ ಆಪಲ್ ತಿಂದರೆ ಯಾವ ರೀತಿಯ ಪ್ರಯೋಜನಗಳು ಸಿಗುತ್ತೆ!
ಎಲ್ಲಾ ಕಡೆಗಳಲ್ಲಿಯೂ ಸಿಗುವ ಕೆಂಪು ಸೇಬು ಸಾಮಾನ್ಯವಾಗಿ ಸಿಹಿಯಾಗಿರುತ್ತವೆ. ಅವು ಆಂಥೋಸಯಾನಿನ್‌ಗಳು ಎಂಬ ಪ್ರಬಲ ರೀತಿಯ ಉತ್ಕರ್ಷಣ ನಿರೋಧಕವನ್ನು ಹೊಂದಿರುತ್ತವೆ, ಇವು ಸೇಬಿನ ಸಿಪ್ಪೆಗಳಲ್ಲಿ ಕಂಡುಬರುತ್ತವೆ. ಇದು ಕರುಳನ್ನು ಆಕ್ಸಿಡೇಟಿವ್ ಹಾನಿಯಿಂದ ರಕ್ಷಿಸುತ್ತವೆ. ಜೊತೆಗೆ ಹೃದಯವನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ಉರಿಯೂತವನ್ನು ಕಡಿಮೆ ಮಾಡುವ ಮೂಲಕ ಕರುಳಿನ ಆರೋಗ್ಯವನ್ನು ಸುಧಾರಿಸುತ್ತದೆ. ಕೆಂಪು ಸೇಬುಗಳು ಹಸಿರು ಸೇಬುಗಳಿಗಿಂತ ಸ್ವಲ್ಪ ಕಡಿಮೆ ಫೈಬರ್ ಅನ್ನು ಹೊಂದಿರುತ್ತವೆ.
ಯಾವ ಸೇಬು ಆರೋಗ್ಯಕ್ಕೆ ಒಳ್ಳೆಯದು?
ಕೆಂಪು ಮತ್ತು ಹಸಿರು ಎರಡು ರೀತಿಯ ಸೇಬುಗಳು ಕರುಳಿನ ಆರೋಗ್ಯಕ್ಕೆ ಪ್ರಯೋಜನಕಾರಿ. ಆದರೆ ಹಸಿರು ಸೇಬುಗಳಲ್ಲಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿದ್ದು, ಫೈಬರ್ ಹೆಚ್ಚಿನ ಪ್ರಮಾಣದಲ್ಲಿ ಇರುವುದರಿಂದ ತೂಕ ಕಡಿಮೆ ಮಾಡಿಕೊಳ್ಳಲು ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಬೇಕಾದವರಿಗೆ ಹಸಿರು ಸೇಬುಗಳು ಒಳ್ಳೆಯದು. ಈ ಸೇಬು ಹಣ್ಣಿನ ಹೊರಭಾಗ ಅಂದರೆ ಸಿಪ್ಪೆಯಲ್ಲಿಯೇ ಹೆಚ್ಚಿನ ಪ್ರಯೋಜನಗಳಿರುತ್ತವೆ. ಅದಕ್ಕಾಗಿಯೇ ಸಿಪ್ಪೆ ತೆಗೆದು ಸೇಬು ಹಣ್ಣುಗಳ ಸೇವನೆ ಮಾಡಬೇಡಿ.
TV9Kannada
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1