Curry Leaf: ಕರಿಬೇವಿನ ಸೊಪ್ಪು ನೈಸರ್ಗಿಕ ಆಹಾರ ಉತ್ಪನ್ನವಾಗಿದ್ದು, ಇದರ ಆಹಾರದ ಸ್ವಾದವನ್ನಷ್ಟೇ ಅಲ್ಲ ಹೆಚ್ಚಿಸುವುದಿಲ್ಲ, ಆರೋಗ್ಯವನ್ನೂ ವೃದ್ಧಿಸುತ್ತದೆ. ಕರಿಬೇವಿನ ಸೊಪ್ಪಿನ ಬಳಕೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ ಎಂದು ತಿಳಿದರೆ ನಿಜಕ್ಕೂ ಶಾಕ್ ಆಗ್ತೀರಾ..!

- ಪ್ರತಿ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಳಸುವ ಕರಿಬೇವಿನ ಸೊಪ್ಪು ಖನಿಜಗಳ ಆಗರ
- ಕರಿಬೇವಿನ ಸೊಪ್ಪು ವಿಟಮಿನ್ ಬಿ 1, ಬಿ 3, ಬಿ 9 ಮತ್ತು ಸಿ ಅಲ್ಲದೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಿಂದ ತುಂಬಿರುತ್ತದೆ.
- ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ.
Curry Leaves Benefits: ನಮ್ಮ ದೈನಂದಿನ ಜೀವನದಲ್ಲಿ ಆಹಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಆಹಾರದ ರುಚಿ ಹೆಚ್ಚಿಸಲು ಬಳಸಲಾಗುವ ಕೆಲವು ಪದಾರ್ಥಗಳು ನಮ್ಮ ಆರೋಗ್ಯಕ್ಕೂ ಲಾಭದಾಯಕವಾಗಿದ್ದು, ನಮ್ಮನ್ನು ಹಲವು ಕಾಯಿಲೆಗಳಿಂದ ದೂರ ಉಳಿಯುವಂತೆ ಮಾಡುತ್ತವೆ. ಅಂತಹ ಪದಾರ್ಥಗಳಲ್ಲಿ ಕರಿಬೇವಿನ ಸೊಪ್ಪು (Curry Leaf) ಕೂಡ ಒಂದು.
ಖನಿಜಗಳ ಆಗರ ಕರಿಬೇವು:
ಪ್ರತಿ ಮನೆಯಲ್ಲಿ ಸರ್ವೇ ಸಾಮಾನ್ಯವಾಗಿ ಬಳಸುವ ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಬಿ 1, ಬಿ 3, ಬಿ 9 ಮತ್ತು ಸಿ ಅಲ್ಲದೆ ಕಬ್ಬಿಣ, ಕ್ಯಾಲ್ಸಿಯಂ ಮತ್ತು ರಂಜಕದಿಂದ ತುಂಬಿರುತ್ತದೆ. ಇದರ ಬಳಕೆಯಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ. ಅವುಗಳೆಂದರೆ…
ಕಫದಿಂದ ಉಪಶಮನ:
ಕರಿಬೇವಿನ ಸೊಪ್ಪಿನ (Curry Leaves) ರಸದೊಂದಿಗೆ ಒಂದು ಚಮಚ ಜೇನುತುಪ್ಪ ಬೆರೆಸಿ ತಿನ್ನುವುದರಿಂದ ಇದು ಕಫ ಕರಗಿಸಲು ದಿವ್ಯೌಷಧಿಯಾಗಿ ಕಾರ್ಯನಿರ್ವಹಿಸುತ್ತದೆ.
ತೂಕ ಇಳಿಕೆ:
ನಿತ್ಯ ಖಾಲಿ ಹೊಟ್ಟೆಯಲ್ಲಿ ಒಂದೆರಡು ಕರಿಬೇವಿನ ಸೊಪ್ಪನ್ನು ಜಗಿದು ತಿನ್ನುವುದರಿಂದ ಇದು ದೇಹದಲ್ಲಿ ಅನಗತ್ಯವಾಗಿ ಶೇಖರವಾಗಿರುವ ಕೊಬ್ಬನ್ನು ಕರಗಿಸುತ್ತದೆ.
ಲಿವರ್/ಯಕೃತ್ತಿನ ರಕ್ಷಣೆ:
ಪ್ರತಿ ದಿನ ನಮ್ಮ ಆಹಾರದಲ್ಲಿ ಕರಿಬೇವನ್ನು ಬಳಸುವುದರಿಂದ ಇದು ಬ್ಯಾಕ್ಟೀರಿಯಾ ಮತ್ತು ವೈರಲ್ ಸೋಂಕುಗಳಿಂದ ಯಕೃತ್ತನ್ನು ರಕ್ಷಿಸುತ್ತದೆ.
ಕಣ್ಣುಗಳ ಆರೋಗ್ಯ:
ಕರಿಬೇವಿನ ಸೊಪ್ಪಿನಲ್ಲಿ ವಿಟಮಿನ್ ಎ ಹೇರಳವಾಗಿದ್ದು ಇದು ನಮ್ಮ ಕಣ್ಣುಗಳನ್ನು ಆರೋಗ್ಯವಾಗಿರಿಸಲು ತುಂಬಾ ಲಾಭದಾಯಕವೈದೇ.
ಡಯಾಬಿಟಿಸ್:
ಕರಿಬೇವಿನಲ್ಲಿರುವ ಅಂಶಗಳು ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡಿ, ಸರಿಯಾದ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.
ಕೂದಲು:
ಕರಿಬೇವಿನ ನಿಯಮಿತ ಬಳಕೆಯಿಂದ ಕೂದಲನ್ನು ಬುಡದಿಂದಲೂ ಗಟ್ಟಿಯಾಗಿಸಬಹುದು ಏನು ಹೇಳಲಾಗುತ್ತದೆ.
ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. Samagrasuddi.co.in ಇದನ್ನು ಖಚಿತಪಡಿಸುವುದಿಲ್ಲ.