
, ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಚಿತ್ರದುರ್ಗ ಜೂ. ೦8 ನನ್ನ ಮಗ ಕೊಲೆಯಾಗಿ ಇಂದಿಗೆ ಒಂದು ವರ್ಷ ಆಗಿದೆ. ಪುತ್ರ ಶೋಕ ನಿರಂತರ ಎಂದೂ ಮರೆಯಲಾಗಲ್ಲ. ಮೊಮ್ಮಗನ ಆರೈಕೆ ಆಟ ಪಾಟದಲ್ಲಿ ಮರೆಯುತ್ತಿದ್ದೇವೆ. ಸರ್ಕಾರ ಭರವಸೆ ಕೊಟ್ಟಂತೆ ನಡೆದಿಲ್ಲ ಕೇಸ್ ನ್ಯಾಯಾಲಯದಲ್ಲಿ ನಡೆಯುತ್ತಿದೆ. ಸರ್ಕಾರ ಪ್ರಕರಣವನ್ನು ಪಾಸ್ಟ್ ಟ್ರಾಕ್ ಮೂಲಕ ನಡೆಸಬೇಕು ಎಂದು ಸರ್ಕಾರವನ್ನು ರೇಣುಕಾಸ್ವಾಮಿಯವರ ತಂದೆಯಾದ ಕಾಶಿನಾಥ ಶಿವನ ಗೌಡ್ರು ಆಗ್ರಹಿಸಿದ್ದಾರೆ.
ಬೆಂಗಳೂರಲ್ಲಿ ಚಿತ್ರದುರ್ಗದ ರೇಣುಕಸ್ವಾಮಿ ಕೊಲೆಯಾಗಿ ಇಂದಿಗೆ ಒಂದು ವರ್ಷದ ಹಿನ್ನಲೆಯಲ್ಲಿ ರೇಣುಕಸ್ವಾಮಿ ತಂದೆ ಕಾಶಿನಾಥ ಶಿವನ ಗೌಡ್ರು ಮಾದ್ಯಮಗಳಿಗೆ ಚಿತ್ರದುರ್ಗದಲ್ಲಿ ತಮ್ಮ ನಿವಾಸದಲ್ಲಿ ಪ್ರತಿಕ್ರಿಯಿಸಿ ನಮಗೆ ಕಾನೂನು, ಸರ್ಕಾರ ಪೊಲಿಸ್ ವ್ಯವಸ್ಥೆಯಲ್ಲಿ ನಂಬಿಕೆ ಇದೆ. ದರ್ಶನ್ ಜೈಲಿಂದ ಹೊರ ಬಂದ ಮೇಲೆ ಯಾರೂ ನಮ್ಮನ್ನು ಸಂಪರ್ಕ ಮಾಡಿಲ್ಲ. ಒಂದು ವೇಳೆ ಸಂಪರ್ಕಕ್ಕೆ ಬಂದ್ರೆ ಆ ವಿಚಾರ ಬೇರೆ.ನಮ್ಮ ಹಿರಿಯರು ಅಂಥ ಪ್ರಸಂಗದಲ್ಲಿ ತೀರ್ಮಾನಮಾಡ್ತಾರೆ. ತಂದೆ ತಾಯಿಯಾಗಿ ನಾವು ಹೇಳೋದು ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು.ಕಣ್ಣೀರಿಡುತ್ತಲೆ ಮಾದ್ಯಮಗಳಿಗೆ ಪ್ರತಿಕ್ರಿಯಿಸಿದ ಶಿವನಗೌಡ್ರು. ಸೊಸೆಗೆ ನೌಕರಿ ಕೊಡಲು ಕಾನೂನು ಪ್ರಕಾರ ಬರಲ್ಲ ಅಂದಿಧ್ದಾರೆ. ಆದರೆ ಮಾನವೀಯ ನೆಲೆಗಟ್ಟಿನಲ್ಲಿ ಸೊಸೆಗೆ ನೌಕರಿ ವ್ಯವಸ್ಥೆ ಮಾಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ಮೃತ ರೇಣುಕಾಸ್ವಾಮಿ ತಾಯಿ ರತ್ನಪ್ರಭ ಮಾತನಾಡಿ, ಡಿ ಗ್ಯಾಂಗ್‌ನಿಂದ ಹತ್ಯೇಗೀಡಾದ ರೇಣುಕಾಸ್ವಾಮಿ ಕೊಲೆಯಾಗಿ ಒಂದು ವರ್ಷ ಮಗನನ್ನು ಕಳೆದುಕೊಂಡು ಒಂದು ವರ್ಷ, ದುಃಖದಲ್ಲಿದ್ದೇವೆ ಆ ನೋವನ್ನು ಮರೆಯಲು ಇಂದಿಗೂ ಆಗುತ್ತಿಲ್ಲ ಸರಕಾರ ನನ್ನ ಸೊಸೆಯ ಭವಿಷ್ಯಕ್ಕೆ ಒಂದು ಆಧಾರ ನೀಡಬೇಕು ಅಂತ ಸರ್ಕಾರಕ್ಕೆ ಮನವಿ ಮಾಡಿದರು.
ರೇಣುಕಾಸ್ವಾಮಿ ಚಿಕ್ಕಪ್ಪ ಷಡಕ್ಷರಯ್ಯ ಮಾತನಾಡಿ, ಮಾಧ್ಯಮಗಳಿಗೆ ನಮ್ಮ ಫ್ಯಾಮಿಲಿ ಬಗ್ಗೆ ಕಳಕಳಿ ಇದೆ ರೇಣುಕಾಸ್ವಾಮಿ ಕೊಲೆಯಾದ ನಕ್ಷತ್ರ ಪ್ರಕಾರ ಆತ್ಮಶಾಂತಿಗೆ ಪೂಜೆ ಮಾಡಲಾಗಿದೆ. ಸರಕಾರ ಒಳ್ಳೆಯ ನಿಟ್ಟಿನಲ್ಲಿ ಕೆಲಸ ಮಾಡ್ತಿದೆಸಹನಾ ೨೬ ವರ್ಷ, ಹಾಗಾಗಿ ನೌಕರಿ ಕೊಡಲು ಕಾನೂನಿನಲ್ಲಿ ಅವಕಾಶ ಇಲ್ಲ ಅಂದಿದ್ದಾರೆಮಾನವೀಯ ನೆಲೆಗಟ್ಟಿನಲ್ಲಿ ಅವಕಾಶ ನೀಡಬೇಕು ಮಗುವನ್ನು ನೊಡಿದ್ರೆ ನಮಗೆ ತುಂಬಾ ದುಃಖ ಅನಿಸುತ್ತೆ ರೇಣುಕಾಸ್ವಾಮಿ ಪತ್ನಿ ಸಹನ ಜೀವನಕ್ಕೆ ಒಂದು ದಾರಿ ಮಾಡಬೇಕುದೇಶದ ಕಾನೂನು ಇತಿಹಾಸದಲ್ಲಿ ಯಾರನ್ನೂ ಬಿಟ್ಟಿಲ್ಲಹಾಗಾಗಿ ತಪ್ಪಿತಸ್ಥರಿಗೆ ಶಿಕ್ಷೆ ಆಗುತ್ತೆ ಅನ್ನೋ ಭರವಸೆ ಇದೆ ಎಂದರು.
ರೇಣುಕಾಸ್ವಾಮಿ ಪತ್ನಿ ಸಹಾನ ಮಾತನಾಡಿ, ನಮ್ಮ ಮನೆಯವರು ತೀರಿ ಒಂದು ವರ್ಷ ಸಾಕಷ್ಟು ದುಃಖ ಅನುಭವಿಸಿದ್ದೀವಿ ಸರಕಾರ ನನ್ನ ಹಾಗೂ ಮಗುವಿನ ಭವಿಷ್ಯಕ್ಕೆ ಸರಕಾರ ನೆರವಾಗಬೇಕು ಸರಕಾರ ಕೊಟ್ಟ ಭರವಸೆಯಂತೆ ಸರಕಾರಿ ನೌಕರಿಗೆ ಆಗ್ರಹಿಸಿದರು.