ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಜು.05 : ರೇಣುಕಾಸ್ವಾಮಿ ಅಶ್ಲೀಲ ಸಂದೇಶದ ಬಗ್ಗೆ ದೂರು ನೀಡಬಹುದಿತ್ತು, ಪೊಲೀಸ್ ಗೆ ಹೇಳಿದ್ದರೆ ವಾರ್ನ್ ಮಾಡುತ್ತಿದ್ದರು. ದೊಡ್ಡ ಶಿಕ್ಷೆ ಕೊಡುವ ಅಪರಾಧ ಆಗಿರಲಿಲ್ಲ ಎಂದು ಮಾಜಿ ಕೃಷಿ ಸಚಿವ ಬಿಜೆಪಿ ಮುಖಂಡ ಬಿ.ಸಿ.ಪಾಟೀಲ್ ತಿಳಿಸಿದರು.

ನಟ ದರ್ಶನ್ & ಗ್ಯಾಂಗ್‍ನಿಂದ ರೇಣುಕಾಸ್ವಾಮಿ ಹತ್ಯೆಗೆ ಸಂಬಂಧಿಸಿದಂತೆ ಚಿತ್ರದುರ್ಗದ ವಿಆರ್ ಎಸ್ ಬಡಾವಣೆಯಲ್ಲಿರುವ ರೇಣುಕಾಸ್ವಾಮಿ ಮನೆಗೆ ಮಾಜಿ ಸಚಿವ ಬಿಸಿ ಪಾಟೀಲ್ ಭೇಟಿ ನೀಡಿ, ರೇಣುಕಾಸ್ವಾಮಿ ಕುಟುಂಬಸ್ಥರಾದ ರೇಣುಕಾಸ್ವಾಮಿ ತಂದೆ, ತಾಯಿ, ಪತ್ನಿ ಭೇಟಿಯಾಗಿ ಸಾಂತ್ವಾನ ಹೇಳಿದರು. ಬಿ ಸಿ ಪಾಟೀಲ್ ಸಣ್ಣ ವಿಚಾರಕ್ಕೆ ಕೊಲೆಯಂಥ ಕೃತ್ಯ ನಡೆಯಬಾರದಿತ್ತು, ಈ ವಯಸ್ಸಿನಲ್ಲಿ ನಿಮಗೆ ಈ ಸ್ಥಿತಿ ನಿರ್ಮಾಣ ಆಗಬಾರದಿತ್ತೆಂದ ಪಾಟೀಲ್ ರೇಣುಕಾಸ್ವಾಮಿ ಕುಟುಂಬಕ್ಕೆ 50 ಸಾವಿರ ರೂ. ನೆರವು ನೀಡಿದರು. ಬಿ.ಸಿ. ಪಾಟೀಲ್ ಸೆಷನ್‍ನಲ್ಲಿ ಬಿಜೆಪಿಯಿಂದ ಈ ವಿಚಾರದ ಬಗ್ಗೆ ಧ್ವನಿ ಎತ್ತುವ ಭರವಸೆ ನೀಡಿದರು.
ತದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಪಾಟೀಲ್, ರೇಣುಕಾಸ್ವಾಮಿ ಹತ್ಯೆ ಪ್ರಕರಣ ನಿಷ್ಪಕ್ಷಪಾತ ತನಿಖೆ ಆಗಲಿ ,ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಆರೋಪಿಗಳಿಗೆ ಶಿಕ್ಷೆ ಆಗಲಿ ಇದೊಂದು ಆಕಸ್ಮಿಕ ಘಟನೆ, ಮೃತನ ಪತ್ನಿಗೆ ಸರ್ಕಾರ ಉದ್ಯೋಗ ಕೊಡಬೇಕು. ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ತಪ್ಪಿತಸ್ಥರು , ತಪ್ಪಿತಸ್ಥರೇ .ರೇಣುಕಾಸ್ವಾಮಿ ಅಶ್ಲೀಲ ಸಂದೇಶದ ಬಗ್ಗೆ ದೂರು ನೀಡಬಹುದಿತ್ತು ಪೊಲೀಸ್ ಆಫೀಸರ್ಸ್ ಗೆ ಹೇಳಿದ್ದರೆ ವಾರ್ನ್ ಮಾಡುತ್ತಿದ್ದರು .ದೊಡ್ಡ ಶಿಕ್ಷೆ ಕೊಡುವ ಅಪರಾಧ ಆಗಿರಲಿಲ್ಲ ನಟ ದರ್ಶನ್ ಒಬ್ಬ ಒಳ್ಳೆ ವ್ಯಕ್ತಿ, ಒಳ್ಳೆಯ ನಟ. ರೇಣುಕಾಸ್ವಾಮಿ ಹತ್ಯೆ ಬಗ್ಗೆ ದರ್ಶನ್ ಮೇಲೆ ಆಪಾದನೆ ಇದೆ ಪ್ರಕರಣದ ತನಿಖೆ ಬಳಿಕ ಸತ್ಯಾಸತ್ಯತೆ ಗೊತ್ತಾಗಲಿದೆ . ನಟ ದರ್ಶನ್ ಬ್ಯಾನ್ ವಿಚಾರ ಫಿಲ್ಮ ಚೆಂಬರ್‍ಗೆ ಬಿಟ್ಟ ವಿಚಾರ ಎಂದು ಬಿ.ಸಿ ಪಾಟೀಲ್ ತಿಳಿಸಿದರು.