ಕೆಂಪು ಈರುಳ್ಳಿಗಿಂತಲೂ ಬಿಳಿ ಉಳ್ಳಾಗಡ್ಡಿಯಿಂದಲೇ ಹೆಚ್ಚು ಪ್ರಯೋಜನಗಳು ಲಭಿಸುತ್ತೆ: ಸಂಶೋಧನೆ

Health benefits of white onion: ಪ್ರತಿಯೊಬ್ಬರ ಮನೆಯಲ್ಲಿ ಕೆಂಪು ಈರುಳ್ಳಿ ಸೇವನೆ ಮಾಡುವುದು ಸಾಮಾನ್ಯವಾಗಿದೆ. ವಿವಿಧ ಅಡುಗೆಗಳಿಗೂ ಇದೇ ಕೆಂಪು ಈರುಳ್ಳಿಯನ್ನು ಬಳಕೆ ಮಾಡಲಾಗುತ್ತದೆ. ಆದರೆ, ಕೆಲವು ಜನರು ಕೆಂಪು ಈರುಳ್ಳಿಯೊಂದಿಗೆ ಬಿಳಿ ಈರುಳ್ಳಿಯನ್ನು ಅಡಿಗೆಗೆ ಬಳಕೆ ಮಾಡಲಾಗುತ್ತದೆ. ಈ ಬಿಳಿ ಕಡಿಮೆ ಪ್ರಮಾಣದಲ್ಲಿ ಬಳಕೆ ಮಾಡಲಾಗುತ್ತದೆ. ಬಿಳಿ ಈರುಳ್ಳಿಯಿಂದ ಆರೋಗ್ಯಕ್ಕೆ ಹಲವು ಲಾಭಗಳು ದೊರೆಯುತ್ತವೆ ಎಂದು ಆಹಾರ ತಜ್ಞೆ ಜಯಶ್ರೀ ಬಾನಿಕ್ ತಿಳಿಸುತ್ತಾರೆ.

ಬಿಳಿ ಈರುಳ್ಳಿಯ ಆರೋಗ್ಯದ ಲಾಭಗಳೇನು?:

ಹೃದಯದ ಆರೋಗ್ಯ: ನಿಮ್ಮ ದೈನಂದಿನ ಅಡುಗೆಯಲ್ಲಿ ಬಿಳಿ ಈರುಳ್ಳಿ ಬಳಕೆ ಮಾಡಿದರೆ ಉತ್ತಮ. ನಿಯಮಿತವಾಗಿ ಬಿಳಿ ಈರುಳ್ಳಿ ಸೇವಿಸುವುದರಿಂದ ಹೃದಯ ಸಂಬಂಧಿತ ಕಾಯಿಲೆಗಳು ತಡೆಯಬಹುದಾಗಿದೆ. ದೇಹಕ್ಕೆ ಹೆಚ್ಚಿನ ಪ್ರಮಾಣದ ಉತ್ಕರ್ಷಣ ನಿರೋಧಕಗಳು ದೊರೆಯುತ್ತದೆ. ಉರಿಯೂತ ಕಡಿಮೆಯಾಗುತ್ತದೆ, ಅಧಿಕ ರಕ್ತದೊತ್ತಡ ಹಾಗೂ ರಕ್ತ ಹೆಪ್ಪುಗಟ್ಟುವಿಕೆಯ ಸಮಸ್ಯೆಗಳನ್ನು ತಡೆಯುತ್ತದೆ ಎಂದು ತಜ್ಞರು ತಿಳಿಸುತ್ತಾರೆ.

ದೇಹ ತಂಪಾಗಿಡುತ್ತೆ: ಬಿಳಿ ಈರುಳ್ಳಿ ದೇಹವನ್ನು ತಂಪಾಗಿಡಲು ಸಹಾಯ ಮಾಡುತ್ತದೆ. ದೇಹಕ್ಕೆ ಕಾಡುವ ಹೆಚ್ಚಿನ ಉಷ್ಣಾಂಶದ ಸಮಸ್ಯೆ ಪರಿಹರಿಸುತ್ತದೆ. ಹಲವು ರೀತಿಯಲ್ಲಿ ದೇಹವನ್ನು ತಂಪಾಗಿಸುವಂತಹ ಏಜೆಂಟ್‌ ಆಗಿ ಕೆಲಸ ಮಾಡುತ್ತದೆ. ಜೊತೆಗೆ ಚರ್ಮದ ಟ್ಯಾನಿಂಗ್ ತೆಗೆದುಹಾಕಲು ಬಳಕೆ ಮಾಡಲಾಗುತ್ತದೆ. ನೀವು ಅದನ್ನು ಯಾವುದೇ ರೀತಿಯ ಸಲಾಡ್ ಅಥವಾ ತರಕಾರಿಗಳಲ್ಲಿ ಸೇರಿಸುವ ಮೂಲಕ ನಿಮ್ಮ ಆಹಾರದ ಭಾಗವನ್ನಾಗಿ ಮಾಡಿಕೊಳ್ಳಲು ತಜ್ಞರು ಸಲಹೆ ನೀಡುತ್ತಾರೆ.

ಜೀರ್ಣಕ್ರಿಯೆಗೆ ಪರಿಹಾರ: ಬಿಳಿ ಈರುಳ್ಳಿ ಸೇವಿಸುವುದರಿಂದ ನಿಮ್ಮ ಜೀರ್ಣಕ್ರಿಯೆ ಸಮಸ್ಯೆಯನ್ನು ನಿವಾರಿಸಲು ಬಹಳಷ್ಟು ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯ ಸುಧಾರಿಸುತ್ತದೆ ಹಾಗೂ ಜೀರ್ಣಕ್ರಿಯೆ ಪ್ರಕ್ರಿಯೆಯನ್ನು ಸುಧಾರಿಸುತ್ತದೆ. ಬಿಳಿ ಈರುಳ್ಳಿ ಸೇವನೆ ಮಾಡುವುದರಿಂದ ಹೊಟ್ಟೆಯಲ್ಲಿ ಒಳ್ಳೆಯ ಬ್ಯಾಕ್ಟೀರಿಯಾಗಳು ಹೆಚ್ಚಾಗುತ್ತವೆ. ಬಿಳ್ಳಿ ಈರುಳ್ಳಿಯಲ್ಲಿ ಫೈಬರ್ ಸಮೃದ್ಧವಾಗಿರುವುದರಿಂದ ನಿಮ್ಮ ಚಯಾಪಚಯ ಕ್ರಿಯೆ ಹೆಚ್ಚಾಗುತ್ತದೆ.

ಉತ್ತಮ ನಿದ್ರೆ ಬರುತ್ತೆ: ಬಿಳಿ ಈರುಳ್ಳಿಯಲ್ಲಿ ಎಲ್-ಟ್ರಿಪ್ಟೊಫಾನ್ ಕಂಡುಬರುತ್ತದೆ ಎಂದು ಹಲವು ಸಂಶೋಧನೆಗಳು ಬಹಿರಂಗಪಡಿಸಿವೆ. ಬಿಳಿ ಈರುಳ್ಳಿ ನಿಮ್ಮನ್ನು ಒತ್ತಡದಿಂದ ಮುಕ್ತಗೊಳಿಸುವುದಲ್ಲದೇ ನಿದ್ರೆಯ ಗುಣಮಟ್ಟ ಸುಧಾರಿಸುತ್ತದೆ. ನೀವು ಬಿಳಿ ಈರುಳ್ಳಿ ನಿಮ್ಮ ಆಹಾರದ ಭಾಗವಾಗಿಸಿದರೆ, ನಿದ್ರಾಹೀನತೆ ಸಮಸ್ಯೆ ದೂರವಾಗಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚುತ್ತೆ: ಬಿಳಿ ಈರುಳ್ಳಿ ತಿನ್ನುವುದರಿಂದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವಲ್ಲಿ ತುಂಬಾ ಉಪಯುಕ್ತವಾಗಿದೆ. ಬಿಳಿ ಈರುಳ್ಳಿ ಉರಿಯೂತ ನಿವಾರಕ, ಬ್ಯಾಕ್ಟೀರಿಯಾ ವಿರೋಧಿ ಮತ್ತು ವೈರಲ್ ನಿವಾರಕ ಗುಣಗಳನ್ನು ಹೊಂದಿದೆ. ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ, ಜೊತೆಗೆ ಹವಾಮಾನದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ ಎಂದು ಆಹಾರ ತಜ್ಞೆ ಜಯಶ್ರೀ ಬಾನಿಕ್ ತಿಳಿಸುತ್ತಾರೆ.

ಓದುಗರಿಗೆ ಮುಖ್ಯ ಸೂಚನೆ: ಇಲ್ಲಿ ನಿಮಗೆ ನೀಡಿರುವ ಎಲ್ಲ ಆರೋಗ್ಯ ಮಾಹಿತಿ ಮತ್ತು ಸಲಹೆಗಳು ನಿಮ್ಮ ತಿಳಿವಳಿಕೆಗಾಗಿ ಮಾತ್ರ. ವೈಜ್ಞಾನಿಕ ಸಂಶೋಧನೆ, ಅಧ್ಯಯನಗಳು, ವೈದ್ಯಕೀಯ ಮತ್ತು ಆರೋಗ್ಯ ವೃತ್ತಿಪರ ಸಲಹೆ ಆಧರಿಸಿ ನಾವು ಈ ಮಾಹಿತಿ ನಿಮಗೆ ನೀಡಿದ್ದೇವೆ. ಆದರೆ, ಇವುಗಳನ್ನು ಅನುಸರಿಸುವ ಮೊದಲು ವೈದ್ಯರ ಸಲಹೆಯನ್ನು ತೆಗೆದುಕೊಳ್ಳುವುದು ಉತ್ತಮ.

Source : https://www.etvbharat.com/kn/!health/white-onions-have-more-benefits-than-red-onions-research-kas25012501003

Leave a Reply

Your email address will not be published. Required fields are marked *