ಸಾಮಾಜಿಕ ಜಾಲತಾಣದಲ್ಲಿ ವೀಡಿಯೊವನ್ನು ಚಿತ್ರೀಕರಿಸುವಾಗ ಚಲಿಸುವ ಕಾರಿನಲ್ಲಿ ಸೀಟ್‌ಬೆಲ್ಟ್ ಧರಿಸದಿದ್ದಕ್ಕಾಗಿ ಬ್ರಿಟಿಷ್ ಪ್ರಧಾನಿ ರಿಷಿ ಸುನಕ್ ಅವರಿಗೆ ದಂಡ ವಿಧಿಸಲಾಗಿದೆ.
| NEW: PM Rishi Sunak was NOT wearing a seatbelt in a video recorded in his Government car this morning pic.twitter.com/SOLn5YGnT7
— Politics UK
(@POLITlCSUK) January 19, 2023
ಲಂಕಾಶೈರ್ ಪೊಲೀಸರು, ಚಲಿಸುತ್ತಿರುವ ಕಾರಿನಲ್ಲಿ ಸೀಟ್‌ಬೆಲ್ಟ್ ಧರಿಸದಿದ್ದಕ್ಕಾಗಿ 100 ಪೌಂಡ್‌ಗಳ ದಂಡವನ್ನು ಪಾವತಿಸುವಂತೆ ರಿಷಿ ಸುನಕ್‌ಗೆ ನಿಗದಿತ ಪೆನಾಲ್ಟಿ ನೋಟಿಸ್ ಜಾರಿಗೊಳಿಸಿರುವುದನ್ನು ದೃಢಪಡಿಸಿದ್ದಾರೆ.
ಚಲಿಸುವ ಕಾರಿನಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಯೊಬ್ಬರು ಸೀಟ್ ಬೆಲ್ಟ್ ಧರಿಸದೆ ವಾಹನ ಚಲಾಯಿಸಿರುವ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಪ್ರಸಾರವಾದ ನಂತರ ನಾವು (ಶುಕ್ರವಾರ, ಜನವರಿ 20) 42 ವರ್ಷದ ಆ ವ್ಯಕ್ತಿಗೆ ಷರತ್ತುಬದ್ಧವಾಗಿ ದಂಡ ವಿಧಿಸಿದ್ದೇವೆ ಎಂದು ಲಂಕಾಶೈರ್ ಪೊಲೀಸರು ಹೇಳಿಕೆಯಲ್ಲಿ ತಿಳಿಸಿದ್ದಾರೆ.
ರಿಷಿಸುನಕ್ ಅವರು ಪ್ರಧಾನಿಯಾಗುವ ಮೂಲಕ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ನೆಟ್ಟಿಗರು ಟೀಕಿಸಿದ ಹಿನ್ನೆಲೆಯಲ್ಲಿ ರಿಷಿ ಸುನಕ್ ಬ್ರಿಟನ್ ಜನತೆಯಲ್ಲಿ ಕ್ಷಮೆಯಾಚಿಸಿದ್ದಾರೆ. ಸೀಟ್ ಬೆಲ್ಟ್ ಹಾಕದೇ ಪ್ರಯಾಣ ಮಾಡುವುದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಪ್ರತಿಯೊಬ್ಬರೂ ಸೀಟ್ ಬೆಲ್ಟ್ ಧರಿಸಲು ಮನವಿ ಮಾಡಿದ್ದಾರೆ.
The post ಸೀಟ್‌ಬೆಲ್ಟ್ ಧರಿಸದಿದ್ದಕ್ಕಾಗಿ ಬ್ರಿಟಿಷ್ ಪ್ರಧಾನಿಗೆ ದಂಡ : ಕ್ಷಮೆಯಾಚಿಸಿದ ರಿಷಿ ಸುನಕ್ first appeared on Kannada News | suddione.
from ರಾಷ್ಟ್ರೀಯ ಸುದ್ದಿ – Kannada News | suddione https://ift.tt/UMesyOq
via IFTTT