Rohit Sharma: ರೋಚಕ ಗೆಲುವಿನ ಬಳಿಕ ನಾಯಕ ರೋಹಿತ್ ಶರ್ಮಾ ಆಡಿದ ಮಾತುಗಳೇನು ಕೇಳಿ

Shubman Gill and Rohit Sharrma

ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಬೊಂಬಾಟ್ ಆಗಿ ಆರಂಭಿಸಿರುವ ಭಾರತ (India vs New Zealand) ತಂಡ ಮೊದಲ ಪಂದ್ಯದಲ್ಲೇ 12 ರನ್​ಗಳ ರೋಚಕ ಗೆಲುವು ಸಾಧಿಸಿತು. ಹೈದರಾಬಾದ್​ನ ರಾಜೀವ್ ಗಾಂಧಿ ಅಂತರರಾಷ್ಟ್ರೀಯ ಸ್ಟೇಡಿಯಂನಲ್ಲಿ ನಡೆದ ಮೊದಲ ಏಕದಿನ ಪಂದ್ಯದಲ್ಲಿ ರನ್ ಮಳೆಯೇ ಸುರಿಯಿತು. ಶುಭ್​ಮನ್ ಗಿಲ್ (Shubman Gill) ಅವರ ಅಮೋಘ ದ್ವಿಶತಕದ ನೆರವಿನಿಂದ ಟೀಮ್ ಇಂಡಿಯಾ 349 ರನ್ ಸಿಡಿಸಿದರೆ, ಟಾರ್ಗೆಟ್ ಬೆನ್ನಟ್ಟಿದ ನ್ಯೂಜಿಲೆಂಡ್ ಮಿಚೆಲ್ ಬ್ರೆಸ್​ವೆಲ್ ಅವರ ಹೋರಾಟದ ನಡುವೆಯೂ 337 ರನ್ ಗಳಿಸಲು ಶಕ್ತವಾಗಿ ಸೋಲುಂಡಿತು. ಪಂದ್ಯ ಮುಗಿದ ಬಳಿಕ ಭಾರತ ತಂಡದ ನಾಯಕ ರೋಹಿತ್ ಶರ್ಮಾ (Rohit Sharma) ಮಾತನಾಡಿದ್ದು ಏನು ಹೇಳಿದ್ದಾರೆ ಕೇಳಿ.

”ನಿಜ ಹೇಳಬೇಕೆಂದರೆ ಮಿಚೆಲ್ ಬ್ರೆಸ್​ವೆಲ್ ಅವರ ಬ್ಯಾಟಿಂಗ್ ಅದ್ಭುತವಾಗಿತ್ತು. ಕ್ರೀಸ್​ಗೆ ಬಂದಾಗಿನಿಂದ ಅವರ ಸ್ಟ್ರೈಕ್ ಅತ್ಯುತ್ತಮವಾಗಿತ್ತು. ನಾವು ಕೊನೆಯ ವರೆಗೆ ಚೆನ್ನಾಗಿ ಬೌಲಿಂಗ್ ಮಾಡಿದರೆ ಗೆಲುವು ನಮ್ಮದಾಗುತ್ತದೆ ಎಂಬುದು ನಮಗೆ ತಿಳಿದಿತ್ತು. ಅಂತಿಮವಾಗಿ ಅದೇ ನಡೆಯಿತು. ನಾವು ಚಾಲೆಂಜ್ ಅನ್ನು ಸ್ವೀಕರಿಸುತ್ತೇವೆ ಎಂದು ನಾನು ಟಾಸ್ ಸಂದರ್ಭದಲ್ಲೇ ಹೇಳಿದ್ದೆ. ಅದರಂತೆ ಕಠಿಣ ಸಂದರ್ಭದಲ್ಲಿ ಪರಿಸ್ಥಿತಿಯನ್ನು ಅರಿತು ಚೆನ್ನಾಗಿ ಆಡಿದೆವು,” ಎಂದು ಪಂದ್ಯದ ಬಗ್ಗೆ ರೋಹಿತ್ ಹೇಳಿದರು.

ಶುಭ್​ಮನ್ ಗಿಲ್ ಬ್ಯಾಟಿಂಗ್ ವೈಖರಿ ಬಗ್ಗೆ ಮಾತನಾಡಿದ ರೋಹಿತ್, ”ಗಿಲ್ ಬ್ಯಾಟಿಂಗ್ ಉತ್ತಮವಾಗಿ ಮೂಡಿಬರುತ್ತಿದೆ. ಅವರು ಫಾರ್ಮ್​ನಲ್ಲಿದ್ದರೆ ಅದನ್ನು ಅತ್ಯುತ್ತಮವಾಗಿ ಉಪಯೋಗಿಸುತ್ತಾರೆ. ಅದಕ್ಕಾಗಿಯೇ ಅವರನ್ನು ಶ್ರೀಲಂಕಾ ಸರಣಿಗೂ ಆಯ್ಕೆ ಮಾಡಿದೆವು. ಅಂಥಹ ಬ್ಯಾಟಿಂಗ್ ವೈಭವವನ್ನು ನೋಡಲು ಖುಷಿ ಆಗುತ್ತದೆ. ಮೊಹಮ್ಮದ್ ಸಿರಾಜ್ ಕೂಡ ಅದ್ಭುತವಾಗಿ ಬೌಲಿಂಗ್ ಮಾಡಿದ್ದಾರೆ. ಕೇವಲ ಈ ಪಂದ್ಯದಲ್ಲಿ ಮಾತ್ರವಲ್ಲ, ಅವರು ರೆಡ್ ಬಾಲ್​ನಲ್ಲಿ, ಟಿ20 ಕ್ರಿಕೆಟ್​ನಲ್ಲೂ ತಂಡಕ್ಕೆ ನೆರವಾಗುತ್ತಿದ್ದಾರೆ. ಅವರ ಕೊಡುಗೆಯನ್ನು ನೋಡಲು ಸಂತಸವಾಗುತ್ತದೆ. ಸಿರಾಜ್​ಗೆ ತನ್ನ ಯೋಜನೆ ಬಗ್ಗೆ ಸ್ಪಷ್ಟತೆ ಇದೆ. ಅದಕ್ಕಾಗಿ ಯಶಸ್ಸು ಸಾಧಿಸುತ್ತಿದ್ದಾರೆ,” ಎಂಬುದು ಹಿಟ್​ಮ್ಯಾನ್ ಮಾತು.

Rafael Nadal: ಎರಡನೇ ಸುತ್ತಿನಲ್ಲೇ ಸೋತು ಆಸ್ಟ್ರೇಲಿಯನ್ ಓಪನ್​ನಿಂದ ಹೊರಬಿದ್ದ ಹಾಲಿ ಚಾಂಪಿಯನ್ ರಾಫೆಲ್ ನಡಾಲ್!

ಇದೇವೇಳೆ ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದುಕೊಂಡ ಶುಭ್​ಮಬ್ ಗಿಲ್ ಮಾತನಾಡಿ, ”ನಾನು ಏನು ಮಾಡಬಲ್ಲೆ ಎಂಬುದನ್ನು ಸಾಭೀತು ಪಡಿಸಲು ಸಾಕಷ್ಟು ಸಮಯ ಕಾದಿದ್ದೆ. ಒಂದುಕಡೆ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದರೆ ಅತ್ತ ತಂಡಕ್ಕಾಗಿ ಕೊನೆಯ ವರೆಗೂ ಕೊಡುಗೆ ನೀಡುವುದು ನನ್ನ ಕರ್ತವ್ಯವಾಗಿತ್ತು. ಬೌಲರ್​ಗಳು ನಿರಾಳವಾಗಿದ್ದರೆ ಅವರನ್ನು ಒತ್ತಡಕ್ಕೆ ಸಿಲುಕಿಸುವುದು ನನ್ನ ಯೋಜನೆ. ಡಾಟ್ ಬಾಲ್ ಮಾಡುವುದು ಬಿಟ್ಟು ಜಾಗ ಹುಡುಕಿ ರನ್ ಕಲೆಹಾಕಬೇಕು. ನಾನು ಅದನ್ನು ಮಾಡಿದೆ. ನಾನು 200 ರನ್ ಗಳಿಸುವ ಬಗ್ಗೆ ಯೋಚನೆ ಕೂಡ ಮಾಡಿರಲಿಲ್ಲ. ಆದರೆ, 47ನೇ ಓವರ್​ನಲ್ಲಿ ಸಿಕ್ಸ್ ಬಾರಿಸಿದಾಗ ಇದು ನನ್ನಿಂದ ಸಾಧ್ಯ ಎಂಬುದು ತಿಳಿಯಿತು”, ಎಂದು ಗಿಲ್ ಹೇಳಿದ್ದಾರೆ.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

source https://tv9kannada.com/sports/cricket-news/rohit-sharma-in-the-post-match-presentation-afetr-india-won-against-new-zealand-kannada-cricket-news-vb-au48-503971.html

Leave a Reply

Your email address will not be published. Required fields are marked *