

16ನೇ ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ ಈಗಾಗಲೇ 24 ಪಂದ್ಯಗಳು ನಡೆದಿವೆ. ರಾಜಸ್ಥಾನ್ ರಾಯಲ್ಸ್ ಈ ಸೀಸನ್ನಲ್ಲಿ (ಐಪಿಎಲ್ 2023) ಮೊದಲ ಬಾರಿಗೆ ತವರಿನಲ್ಲಿ ಆಡುತ್ತಿದೆ. ರಾಜಸ್ಥಾನ ಸತತ 3 ಪಂದ್ಯಗಳು ಸೇರಿದಂತೆ ಒಟ್ಟು 4 ಗೆಲುವಿನೊಂದಿಗೆ ಮೊದಲ ಸ್ಥಾನದಲ್ಲಿದೆ. ಇತ್ತ ಕೆಎಲ್ ರಾಹುಲ್ ನೇತೃತ್ವದ ಲಕ್ನೋ ಕೂಡ 5 ಪಂದ್ಯಗಳ ಪೈಕಿ ಮೂರರಲ್ಲಿ ಗೆದ್ದಿದ್ದು 2ನೇ ಸ್ಥಾನದಲ್ಲಿದೆ. ಇಂದಿನ ಪಂದ್ಯದಲ್ಲಿ ಲಕ್ನೋ ತಂಡ ಗೆಲುವು ಕಂಡರೆ ಪಾಯಿಂಟ್ ಪಟ್ಟಿಯಲ್ಲಿ ರಾಜಸ್ಥಾನದಿಂದ ಮೊದಲ ಸ್ಥಾನವನ್ನು ಕಸಿದುಕೊಳ್ಳಬಹುದಾಗಿದೆ.