ಐಪಿಎಲ್ 2024 ಸೀಸನ್‌ನ ಕ್ವಾಲಿಫೈಯರ್ 2 ಪಂದ್ಯ ಚೆನ್ನೈನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಭಾನುವಾರ ಚೆಪಾಕ್ ಮೈದಾನದಲ್ಲೇ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪೈಪೋಟಿ ನಡೆಸಲಿದೆ.

ಐಪಿಎಲ್ 2024 ಸೀಸನ್‌ನ ಕ್ವಾಲಿಫೈಯರ್ 2 ಪಂದ್ಯ ಚೆನ್ನೈನ ಚೆಪಾಕ್ ಮೈದಾನದಲ್ಲಿ ಶುಕ್ರವಾರ ನಡೆಯಲಿದೆ. ರಾಜಸ್ಥಾನ್ ರಾಯಲ್ಸ್ ತಂಡ ಸನ್‌ರೈಸರ್ಸ್ ಹೈದರಾಬಾದ್ ಎದುರಿಸಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಭಾನುವಾರ ಚೆಪಾಕ್ ಮೈದಾನದಲ್ಲೇ ನಡೆಯಲಿರುವ ಪ್ರಶಸ್ತಿ ಹೋರಾಟದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧ ಪೈಪೋಟಿ ನಡೆಸಲಿದೆ.
ಮಂಗಳವಾರ ಅಹಮದಾಬಾದ್‌ನಲ್ಲಿ ನಡೆದ ಕ್ವಾಲಿಫೈಯರ್-1 ರಲ್ಲಿ ಕೆಕೆಆರ್ ವಿರುದ್ಧ ಸೋತಿರುವ ಸನ್‌ರೈಸರ್ಸ್ ಹೈದರಾಬಾದ್ ಮತ್ತೊಮ್ಮೆ ಅದೃಷ್ಟ ಪರೀಕ್ಷೆಗೆ ಸಿದ್ಧವಾಗಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಚೆಪಾಕ್ ಮೈದಾನದಲ್ಲಿ ಸನ್ ರೈಸರ್ಸ್ ಹೈದರಾಬಾದ್ನ ದಾಖಲೆ ಆ ತಂಡದ ಅಭಿಮಾನಿಗಳನ್ನು ಕಾಡುತ್ತಿದೆ.
ಸನ್‌ರೈಸರ್ಸ್ ಹೈದರಾಬಾದ್ ಈ ಮೈದಾನದಲ್ಲಿ ಇದುವರೆಗೆ 10 ಪಂದ್ಯಗಳನ್ನು ಆಡಿದೆದ್ದು, ಕೇವಲ ಒಂದು ಪಂದ್ಯವನ್ನು ಗೆದ್ದಿದೆ. 8 ಪಂದ್ಯಗಳಲ್ಲಿ ಸೋತಿರುವ ಸನ್ ರೈಸರ್ಸ್ ಹೈದರಾಬಾದ್ ಒಂದು ಪಂದ್ಯವನ್ನು ಟೈ ಮಾಡಿಕೊಂಡಿದೆ. ಈ ದಾಖಲೆಗಳನ್ನು ನೋಡಿದ ಸನ್ ರೈಸರ್ಸ್ ಹೈದರಾಬಾದ್ ಅಭಿಮಾನಿಗಳು ಈ ಪಂದ್ಯ ಗೆದ್ದಂಗೇ… ಎಂದು ಈಗಲೇ ಚಿಂತಿಸುತ್ತಿದ್ದಾರೆ.
ಚೆಪಾಕ್ ವಿಕೆಟ್ ನಿಧಾನಗತಿಯಾಗಿದ್ದು, ಸ್ಪಿನ್ನರ್‌ಗಳಿಗೆ ಅನುಕೂಲಕರವಾಗಿದೆ. ಆದರೆ, ಸನ್‌ರೈಸರ್ಸ್ ಹೈದರಾಬಾದ್ ತಂಡದಲ್ಲಿ ಯಾವೊಬ್ಬ ಟಾಪ್ ಸ್ಪಿನ್ನರ್ ಇಲ್ಲದಿರುವುದು ಆತಂಕ ಮೂಡಿಸುತ್ತಿದೆ. ವನಿಂದು ಹಸರಂಗ ಅವರ ಸ್ಥಾನಕ್ಕೆ ಬಂದಿರುವ ಶ್ರೀಲಂಕಾದ ವಿಜಯಕಾಂತ್ ವ್ಯಾಸಕಾಂತ್ ಹೆಚ್ಚು ಪ್ರಭಾವ ಬೀರಲು ಸಾಧ್ಯವಾಗುತ್ತಿಲ್ಲ. ಈ ಕ್ರಮದಲ್ಲಿ ಅವರ ಸ್ಥಾನದಲ್ಲಿ ಏಡೆನ್ ಮಾರ್ಕ್ರಂ ಅಥವಾ ಗ್ಲೆನ್ ಫಿಲಿಪ್ಸ್ ಆಡುವ ಅವಕಾಶವಿದೆ. ಅಂತಿಮ ತಂಡದಲ್ಲಿ ಲೋಕಲ್ ಬಾಯ್ ವಾಷಿಂಗ್ಟನ್ ಸುಂದರ್ ಕಣಕ್ಕಿಳಿದರೂ ಅಚ್ಚರಿಯಿಲ್ಲ.
ಮತ್ತೊಂದೆಡೆ ರಾಜಸ್ಥಾನ್ ರಾಯಲ್ಸ್ ಸೂಪರ್ ಫಾರ್ಮ್‌ನಲ್ಲಿರುವ ಸ್ಪಿನ್ನರ್‌ಗಳನ್ನು ಹೊಂದಿದೆ. ಲೋಕಲ್ ಬಾಯ್ ಹಾಗೂ ಸೀನಿಯರ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಮತ್ತು ಯುಜ್ವೇಂದ್ರ ಚಹಾಲ್ ಅವರನ್ನು ಎದುರಿಸುವುದು ಸನ್‌ರೈಸರ್ಸ್ ಬ್ಯಾಟ್ಸ್‌ಮನ್‌ಗಳಿಗೆ ಸವಾಲಿನ ಕೆಲಸವಾಗಿದೆ.
ಅದರಲ್ಲೂ ಅಶ್ವಿನ್ ಸೂಪರ್ ಫಾರ್ಮ್ ನಲ್ಲಿದ್ದಾರೆ. ಎಲಿಮಿನೇಟರ್‌ನಲ್ಲಿ ಆರ್‌ಸಿಬಿ ಪತನಕ್ಕೆ ಮಾಸ್ಟರ್‌ಮೈಂಡ್ ಆಗಿದ್ದು ಇವರೇ. ಕಳೆದ 4 ಪಂದ್ಯಗಳಲ್ಲಿ ಅಶ್ವಿನ್ 6.81 ಎಕಾನಮಿ ರೇಟ್‌ನೊಂದಿಗೆ 7 ವಿಕೆಟ್ ಪಡೆದಿರುವುದು ಹೈದರಾಬಾದ್ ತಂಡದ ನಿದ್ದೆಗೆಡಿಸುತ್ತಿದೆ.
ಇನ್ನೂ ಈ ಪಂದ್ಯಕ್ಕೆ ಮಳೆಯಾಗುವ ಮುನ್ಸೂಚನೆ ಇದೆ. ಜತೆಗೆ ಶೀತ ವಾತಾವರಣವಿರುವ ಈ ಪ್ರದೇಶದಲ್ಲಿ ಭಾರಿ ಇಬ್ಬನಿ ಬರಲಿದೆ. ಇದರೊಂದಿಗೆ ಟಾಸ್ ಗೆದ್ದ ತಂಡಗಳು ಚೇಸಿಂಗ್‌ಗೆ ಒಲವು ತೋರಲಿವೆ. ಇಲ್ಲಿ ಆಡಿದ ಕಳೆದ 7 ಪಂದ್ಯಗಳಲ್ಲಿ ಚೇಸಿಂಗ್ ತಂಡಗಳು ಐದು ಬಾರಿ ಗೆದ್ದಿದ್ದಿರುವುದರಿಂದ ಟಾಸ್ ನಿರ್ಣಾಯಕವಾಗಿದೆ.