

16ನೇ ಆವೃತ್ತಿಯ ಐಪಿಎಲ್ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಎರಡನೇ ಬಾರಿಗೆ ಮುಖಾಮುಖಿಯಾಗುತ್ತಿವೆ. ಇದಕ್ಕೂ ಮುನ್ನ ಈ ಎರಡೂ ತಂಡಗಳು ಏಪ್ರಿಲ್ 2 ರಂದು ಹೈದರಾಬಾದ್‌ನಲ್ಲಿ ಮುಖಾಮುಖಿಯಾಗಿದ್ದು, ಇದರಲ್ಲಿ ರಾಜಸ್ಥಾನ 72 ರನ್‌ಗಳ ಅಂತರದಿಂದ ಜಯಗಳಿಸಿತ್ತು. ಆದರೆ ರಾಜಸ್ಥಾನ ತನ್ನ ಕೊನೆಯ ಎರಡು ಪಂದ್ಯಗಳಲ್ಲಿ ಸೋಲನ್ನು ಎದುರಿಸಿದೆ. ಇತ್ತ ಸನ್‌ರೈಸರ್ಸ್ ಕೂಡ ರಾಜಸ್ಥಾನ್ ಎದುರು ತನ್ನ ಹಳೆಯ ಸೋಲಿಗೆ ಸೇಡು ತೀರಿಸಿಕೊಳ್ಳಲು ಕಾಯುತ್ತಿದೆ.