ಭಾರತೀಯ ಅಂಚೆ ಇಲಾಖೆಯಲ್ಲಿ (India Post) ಖಾಲಿ ಇರುವ ಗ್ರಾಮೀಣ ಡಾಕ್ ಸೇವಕ್ (GDS) ಹುದ್ದೆಗಳ ಭರ್ತಿಗೆ ಅಧಿಕೃತ ಅಧಿಸೂಚನೆ ಪ್ರಕಟವಾಗಿದೆ. ದೇಶಾದ್ಯಂತ ಒಟ್ಟು 23,757 ಹುದ್ದೆಗಳು ಲಭ್ಯವಿದ್ದು, ಅದರಲ್ಲಿ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ಒಟ್ಟು 1,116 ಹುದ್ದೆಗಳು ಖಾಲಿ ಇವೆ. 10ನೇ ತರಗತಿ ಪೂರ್ಣಗೊಳಿಸಿ ಸರ್ಕಾರಿ ಉದ್ಯೋಗ ಹುಡುಕುತ್ತಿರುವ ಆಕಾಂಕ್ಷಿಗಳಿಗೆ ಇದು ಅತ್ಯುತ್ತಮ ಅವಕಾಶವಾಗಿದೆ.
ಹುದ್ದೆಗಳ ವಿವರ
- ಹುದ್ದೆಯ ಹೆಸರು: ಬ್ರಾಂಚ್ ಪೋಸ್ಟ್ ಮಾಸ್ಟರ್ (BPM) ಮತ್ತು ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM) / ಗ್ರಾಮೀಣ ಡಾಕ್ ಸೇವಕ್
- ಕರ್ನಾಟಕದಲ್ಲಿರುವ ಖಾಲಿ ಹುದ್ದೆಗಳು: 1,116
- ದೇಶಾದ್ಯಂತ ಒಟ್ಟು ಹುದ್ದೆಗಳು: 23,757
ವಿದ್ಯಾರ್ಹತೆ ಮತ್ತು ವಯೋಮಿತಿ
- ವಿದ್ಯಾರ್ಹತೆ: ಮಾನ್ಯತೆ ಪಡೆದ ಬೋರ್ಡ್‌ನಿಂದ 10ನೇ ತರಗತಿ (SSLC) ತೇರ್ಗಡೆಯಾಗಿರಬೇಕು ಹಾಗೂ ಸ್ಥಳೀಯ ಭಾಷೆಯ (ಕನ್ನಡ) ಜ್ಞಾನ ಹೊಂದಿರಬೇಕು.
- ವಯೋಮಿತಿ: ಕನಿಷ್ಠ 18 ವರ್ಷ ಹಾಗೂ ಗರಿಷ್ಠ 40 ವರ್ಷ.
- ಒಬಿಸಿ (OBC) ಅಭ್ಯರ್ಥಿಗಳಿಗೆ: 3 ವರ್ಷ ಸಡಿಲಿಕೆ
- ಪರಿಶಿಷ್ಟ ಜಾತಿ / ಪರಿಶಿಷ್ಟ ಪಂಗಡ (SC/ST) ಅಭ್ಯರ್ಥಿಗಳಿಗೆ: 5 ವರ್ಷ ಸಡಿಲಿಕೆ
- ವಿಕಲಚೇತನ (PwD) ಅಭ್ಯರ್ಥಿಗಳಿಗೆ: 10 ವರ್ಷ ಸಡಿಲಿಕೆ
ಮಾಸಿಕ ವೇತನ ಶ್ರೇಣಿ
- ಬ್ರಾಂಚ್ ಪೋಸ್ಟ್ ಮಾಸ್ಟರ್ (BPM): ₹12,000 ರಿಂದ ₹29,380 ವರೆಗೆ
- ಅಸಿಸ್ಟೆಂಟ್ ಬ್ರಾಂಚ್ ಪೋಸ್ಟ್ ಮಾಸ್ಟರ್ (ABPM): ₹10,000 ರಿಂದ ₹24,470 ವರೆಗೆ
ಅರ್ಜಿ ಶುಲ್ಕ
- ಮಹಿಳೆಯರು, SC, ST, ವಿಕಲಚೇತನರು ಹಾಗೂ ತೃತೀಯ ಲಿಂಗಿ ಅಭ್ಯರ್ಥಿಗಳಿಗೆ: ಶುಲ್ಕ ವಿನಾಯಿತಿ (ಉಚಿತ)
- ಸಾಮಾನ್ಯ (General), OBC ಮತ್ತು EWS ಅಭ್ಯರ್ಥಿಗಳಿಗೆ: ₹100
ಆಯ್ಕೆ ಪ್ರಕ್ರಿಯೆ
ಅಭ್ಯರ್ಥಿಗಳು 10ನೇ ತರಗತಿಯಲ್ಲಿ ಪಡೆದ ಅಂಕಗಳ ಆಧಾರದ ಮೇಲೆ ಮೆರಿಟ್ ಪಟ್ಟಿ (Merit List) ಸಿದ್ಧಪಡಿಸಿ, ನಂತರ ಮೂಲ ದಾಖಲಾತಿಗಳ ಪರಿಶೀಲನೆ (Document Verification) ನಡೆಸಿ ನೇಮಕಾತಿ ಮಾಡಿಕೊಳ್ಳಲಾಗುತ್ತದೆ.
ಪ್ರಮುಖ ದಿನಾಂಕಗಳು
- ಅರ್ಜಿ ಸಲ್ಲಿಕೆ ಪ್ರಾರಂಭ ದಿನಾಂಕ: ಸೆಪ್ಟೆಂಬರ್ 2
- ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ: ಸೆಪ್ಟೆಂಬರ್ 21
- ಅರ್ಜಿ ತಿದ್ದುಪಡಿಗೆ ಕಾಲಾವಕಾಶ (Correction Window): ಸೆಪ್ಟೆಂಬರ್ 23 ರಿಂದ ಸೆಪ್ಟೆಂಬರ್ 24
ಅರ್ಜಿ ಸಲ್ಲಿಕೆ ಹೇಗೆ? ಅರ್ಹ ಆಸಕ್ತ ಅಭ್ಯರ್ಥಿಗಳು ಆನ್‌ಲೈನ್ ಮೂಲಕವೇ ಅರ್ಜಿ ಸಲ್ಲಿಸಬೇಕಿದ್ದು, ಹೆಚ್ಚಿನ ವಿವರಣೆ ಹಾಗೂ ಅಧಿಕೃತ ಅಧಿಸೂಚನೆಗಾಗಿ ಅಂಚೆ ಇಲಾಖೆಯ ಅಧಿಕೃತ ವೆಬ್‌ಸೈಟ್ indiapost.gov.in ಅಥವಾ indiapostgdsonline.gov.in ಗೆ ಭೇಟಿ ನೀಡಬಹುದು.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1
Whats App Channel: https://whatsapp.com/channel/0029VbDbOsBD8SE2H0L3d40j