
ಮಾಸ್ಕೊ: ಜಗತ್ತಿನ ಅತಿ ಬಲಿಷ್ಠ ನಾಯಕರಲ್ಲಿ ಒಬ್ಬರಾಗಿರುವ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಬಳಸುವ ಗರಿಷೃ ಸುರಕ್ಷತಾ ವ್ಯವಸ್ಥೆಯುಳ್ಳ ಲಿಮೋಸಿನ್ ಕಾರು ರಾಜಧಾನಿ ಮಾಸ್ಕೊದ ರಸ್ತೆಯಲ್ಲೇ ಸ್ಫೋಟಗೊಂಡಿದೆ. ಕೆಲವೇ ದಿನಗಳಲ್ಲಿ ಪುಟಿನ್ ಸಾವನ್ನಪ್ಪುತ್ತಾರೆ ಎಂದು ಇತ್ತೀಚೆಗಷ್ಟೇ ಉಕ್ರೇನ್ ಅಧ್ಯಕ್ಷ ಝೆಲೆನ್‌ಸ್ಕಿ ಹೇಳಿದ್ದರು.

ಹೀಗಾಗಿ ಪುಟಿನ್ ಹತ್ಯಾ ಯತ್ನ ನಡೆದಿದೆಯೇ ಎಂಬ ಅನುಮಾನ ಉಂಟಾಗಿದೆ.
ಮಾಸ್ಕೊ ನಗರದ ಫೈನಾನ್ಶಿಯಲ್ ಸ್ಟೆಬಿಲಿಟಿ ಬೋರ್ಡ್ ರಹಸ್ಯ ಸೇವಾ ಪ್ರಧಾನ ಕಚೇರಿಯ ಬಳಿ 2,75,000 ಪೌಂಡ್ (ಅಂದಾಜು 3.04 ಕೋಟಿ ರೂ.) ಮೌಲ್ಯದ ಔರಸ್ ಸೆನಾಟ್ ಕಂಪನಿಯ ಲಿಮೋಸಿನ್ ಕಾರು ಸ್ಫೋಟಗೊಂಡಿದೆ.ಸ್ಫೋಟಗೊಂಡ ಸಮಯದಲ್ಲಿ ಕಾರಿನಲ್ಲಿ ಯಾರು ಇದ್ದರು ಮತ್ತು ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಅಧಿಕಾರಿಗಳು ಬಹಿರಂಗಪಡಿಸಿಲ್ಲ.ಮೊದಲು ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮುಂಭಾಗದಿಂದ ದಟ್ಟವಾದ ಕಪ್ಪು ಹೊಗೆ ಬಂದಿದೆ.

ಬಳಿಕ ಕಾರು ದೊಡ್ಡ ಶಬದ್ದೊಂದಿಗೆ ಸ್ಫೋಟಿಸಿದೆ.72 ವರ್ಷದ ಪುಟಿನ್ ರಷ್ಯಾ ನಿರ್ಮಿತ ಲಿಮೋಸಿನ್‌ಗಳನ್ನು ಬಳಸುತ್ತಾರೆ. ಈ ಹಿಂದೆ ಉತ್ತರ ಕೊರಿಯಾದ ಕಿಮ್ ಜಾಂಗ್ ಉನ್‌ನಂತಹ ನಾಯಕರಿಗೆ ಇದೇ ರೀತಿಯ ವಾಹನಗಳನ್ನು ಉಡುಗೊರೆಯಾಗಿ ನೀಡಿದ್ದರು. ಲಿಮೋಸಿನ್ ಐಷಾರಾಮಿ, ಉದ್ದವಾದ ಚಕ್ರದ ಬೇಸ್ ಹೊಂದಿರುವ ವಾಹನವಾಗಿದ್ದು, ಹಲವು ದೇಶಗಳ ಅಧ್ಯಕ್ಷರು ಈ ರೀತಿಯ ಕಾರನ್ನು ಬಳಕೆ ಮಾಡುತ್ತಾರೆ.

ಆರಾಮದಾಯಕ ಮತ್ತು ಹೆಚ್ಚಾಗಿ ಐಷಾರಾಮಿ ಪ್ರಯಾಣಕ್ಕಾಗಿ ವಿನ್ಯಾಸ ಮಾಡಲಾಗುತ್ತದೆ. ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಅಥವಾ ಕಾರ್ಪೊರೇಟ್ ಕಾರ್ಯಕ್ರಮಗಳಿಗೆ ಮಾತ್ರ ಬಳಸಲಾಗುತ್ತದೆ. ಇದು ಗುಂಡು ನಿರೋಧಕ ವ್ಯವಸ್ಥೆ ಹೊಂದಿರುತ್ತದೆ.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1