
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ಇಂದು ಸಿಬಾರದ ಎಸ್ ನಿಜಲಿಂಗಪ್ಪ ಸ್ಮಾರಕಕ್ಕೆ ಮುಂಡಗೋಡ ಲಾಮ ಕ್ಯಾಂಪನಿಂದ ದಲಾಯಿಲಾಮಾ ಅವರ. ಪ್ರತಿನಿಧಿಗಳಾದ
ಟೈಮ್ ಜಿನ್ ಟಾಸಿ ಆಗಮಿಸಿ ಪ್ರಾರ್ಥನೆ ಸಲ್ಲಿಸಿದರು,
ಇದೇ ವೇಳೆ ರಾಜ್ಯದಲ್ಲಿರುವ. ಎಲ್ಲಾ ಲಾಮಕ್ಯಾಂಪಗಳಲ್ಲಿ ಎಸ್ ನಿಜಲಿಂಗಪ್ಪ ಅವರ ಆತ್ಮಕ್ಕೆ ಶಾಂತಿ ಕೋರಲಾಗುತ್ತಿದೆಯೆಂದು
ತಿಳಿಸಿ ಚೀನಾದಿಂದ ಭಾರತಕ್ಕೆ ರಾತೋರಾತ್ರಿ ನಮ್ಮ ಗುರುಗಳಾದ ದಲಾಯಿಲಾಮವರೊಂದಿಗೆ ಆಗಮಿಸಿದ್ದವರಿಗೆ ಎಲ್ಲರಿಗೂ
ವಾಸಿಸಲು ಪುನರ್ವಸತಿ ಕಲ್ಪಿಸಿದವರು, ಎಸ್ ನಿಜಲಿಂಗಪ್ಪ ಅವರನ್ನು ಸದಾ ಸ್ಮರಿಸುತ್ತೇವೆಂದು ತಿಳಿಸಿದರು.

ಮುಂಡಗೋಡನಲ್ಲಿ ಎರಡು ವಿ.ವಿ, ಬೈಲಕುಪ್ಪೆಯಲ್ಲಿ ಒಂದು ವಿ.ವಿ. ಇರುತ್ತವೆ, ನಾವುಗಳು ವ್ಯಾಸಂಗ ಮಾಡಲು ಅವಕಾಶ ಸಿಕ್ಕಿದ್ದು
1962ರಲ್ಲಿ ಕರ್ನಾಟಕದ ಮುಖ್ಯಮಂತ್ರಿ ಆಗಿದ್ದ ಎಸ್ ನಿಜಲಿಂಗಪ್ಪ ಅವರೇ ಕಾರಣ ಎಂದರು.
ಈ ವೇಳೆ ವಿಧಾನ ಪರಿಷತ್ ಮಾಜಿ ಸದಸ್ಯ ಮೋಹನ್ ಕೊಂಡಜ್ಜಿ, ಎಸ್ ಎನ್ ಅವರ ಮೊಮ್ಮಗ ಉದಯ.ಶಂಕರ್, ಪ್ರಕಾಶ್ ಜಿ.ಎಂ.
ಎಸ್ ಷಣ್ಮುಖಪ್ಪ ಉಪಸ್ಥಿತರಿದ್ದು ಲಾಮ ಪ್ರತಿನಿಧಿಗಳನ್ನು ಗೌರವಿಸಿದರು.