Sabudana Paratha Recipe : ಇಂದು ನಾವು ನಿಮಗೆ ಸಾಬುದಾನ ಪರಾಠ ಮಾಡುವ ವಿಧಾನವನ್ನು ಹೇಳಲಿದ್ದೇವೆ. ಶ್ರಾವಣ ಮಾಸದ ಉಪವಾಸದ ಸಮಯದಲ್ಲಿ ಸಾಬುದಾನ ಪರಾಠ ನಿಮಗೆ ಉತ್ತಮವಾದ ಆಹಾರ.

Sabudana Paratha Recipe In Kannada: ಸಾಬುದಾನದಲ್ಲಿ ಉತ್ತಮ ಪ್ರಮಾಣದ ನಾರಿನಂಶವಿದೆ. ಅದಕ್ಕಾಗಿಯೇ ತೂಕ ಇಳಿಸುವ ಸಮಯದಲ್ಲಿಯೂ ನೀವು ಯಾವುದೇ ಹಿಂಜರಿಕೆಯಿಲ್ಲದೆ ತಿನ್ನಬಹುದು. ಇದನ್ನು ಸೇವಿಸುವುದರಿಂದ ನಿಮ್ಮ ಹೊಟ್ಟೆಯು ದೀರ್ಘಕಾಲ ತುಂಬಿರುತ್ತದೆ. ಇದಲ್ಲದೇ ಉಪವಾಸದ ಸಮಯದಲ್ಲಿಯೂ ಖೀರ್ ಅಥವಾ ಖಿಚಡಿ ಮಾಡಿ ಸಾಬುದಾನವನ್ನು ಹೆಚ್ಚು ತಿನ್ನುತ್ತಾರೆ.
ನೀವು ಎಂದಾದರೂ ಸಾಬುದಾನ ಪರಾಠವನ್ನು ಪ್ರಯತ್ನಿಸಿದ್ದೀರಾ? ಇಲ್ಲದಿದ್ದರೆ, ಇಂದು ನಾವು ನಿಮಗೆ ಸಾಬುದಾನ ಪರಾಠ ಮಾಡುವ ವಿಧಾನವನ್ನು ಹೇಳಲಿದ್ದೇವೆ. ಶ್ರಾವಣ ಮಾಸದ ಉಪವಾಸದ ಸಮಯದಲ್ಲಿ ಸಾಬುದಾನ ಪರಾಠ ನಿಮಗೆ ಉತ್ತಮವಾದ ಆಹಾರ. ಇದರಿಂದ ನಿಮ್ಮ ಹೊಟ್ಟೆ ತುಂಬಾ ಹೊತ್ತು ತುಂಬಿರುವುದಲ್ಲದೆ ಸಾಕಷ್ಟು ಪೋಷಕಾಂಶವೂ ದೊರೆಯುತ್ತದೆ.
ಸಾಬುದಾನ ಪರಾಠ ಮಾಡಲು ಬೇಕಾಗುವ ಸಾಮಾಗ್ರಿಗಳು
1/2 ಕಪ್ ನೆನೆಸಿದ ಸಾಬುದಾನ
1/2 ಕಪ್ ಶೇಂಗಾ ಪುಡಿ
2 ಬೇಯಿಸಿದ ಆಲೂಗಡ್ಡೆ
1 ಟೀಸ್ಪೂನ್ ಕೊತ್ತಂಬರಿ ಸೊಪ್ಪು
ರುಚಿಗೆ ತಕ್ಕಂತೆ ಕಲ್ಲು ಉಪ್ಪು
2 ಸಣ್ಣದಾಗಿ ಹೆಚ್ಚಿದ ಹಸಿರು ಮೆಣಸಿನಕಾಯಿ
1/2 ಟೀಸ್ಪೂನ್ ಕರಿಮೆಣಸು ಪುಡಿ
ಸಾಬುದಾನ ಪರಾಠ ಮಾಡುವುದು ಹೇಗೆ?
ಸಾಬುದಾನ ಪರಾಠಾ ಮಾಡಲು, ಮೊದಲು ದೊಡ್ಡ ಬಟ್ಟಲನ್ನು ತೆಗೆದುಕೊಳ್ಳಿ. ನಂತರ ನೆನೆಸಿದ ಸಾಬುದಾನ, ಶೇಂಗಾ ಪುಡಿ, ಆಲೂಗಡ್ಡೆ, ಕೊತ್ತಂಬರಿ ಸೊಪ್ಪು, ಹಸಿರು ಮೆಣಸಿನಕಾಯಿ ಮತ್ತು ಉಪ್ಪು ಸೇರಿಸಿ. ಈ ಎಲ್ಲಾ ವಸ್ತುಗಳನ್ನು ಹಾಕಿದ ಮೇಲೆ ಚೆನ್ನಾಗಿ ಮಿಕ್ಸ್ ಮಾಡಿ.
ನಂತರ ಸ್ವಲ್ಪ ತುಪ್ಪ/ಎಣ್ಣೆಯನ್ನು ನಿಮ್ಮ ಕೈಗಳಿಗೆ ಹಚ್ಚಿಕೊಳ್ಳಿ. ನಿಧಾನವಾಗಿ ಪ್ರೆಸ್ ಮಾಡುತ್ತ ಪರಾಠಾ ಶೇಪ್ ಕೊಡಿ. ಈಗ ತುಪ್ಪ ಸವರಿದ ಬಾಣಲೆಯ ಮೇಲೆ ಹಾಕಿ ಮತ್ತು ಎರಡೂ ಕಡೆಯಿಂದ ಗೋಲ್ಡನ್ ಬ್ರೌನ್ ಆಗುವವರೆಗೆ ಬೇಯಿಸಿ. ಈಗ ರುಚಿಕರವಾದ ಸಾಬುದಾನ ಪರಾಠ ಸವಿಯಲು ಸಿದ್ಧವಾಗಿದೆ. ನಂತರ ನೀವು ಅದನ್ನು ತಣ್ಣನೆಯ ಮೊಸರಿನೊಂದಿಗೆ ಬಡಿಸಿ.
Source : https://zeenews.india.com/kannada/lifestyle/sabudana-paratha-recipe-for-shravan-month-fasting-147162