ರಾಜಕೀಯದಲ್ಲಿ ಸೋತ ಸ್ಯಾಂಡಲ್‌ವುಡ್‌ ನಟ ನಟಿಯರಿವರು..!

Sandalwood : ಇತ್ತೀಚ್ಚೆಗೆ ಸಿನಿಮಾ ನಟ-ನಟಿಯರು ಹೆಚ್ಚಾಗಿ ರಾಜಕೀಯ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ನಟ ನಟಿಯರ ಲಿಸ್ಟ್‌ನಲ್ಲಿ ರಾಜಕೀಯದಲ್ಲಿ ಗೆದ್ವರಿಗಿಂತ ಸೋತವರೇ ಹೆಚ್ಚು. ಇನ್ನೂ ಕೆಲವು ಸಿನಿ ನಟ ನಟಿಯರು ರಾಜಕೀಯ ರಂಗದಲ್ಲಿ ಸೋತು ಮತ್ತೆ ಚಿತ್ರರಂಗಕ್ಕೆ ತೆರಳಿರುವ ನಿದರ್ಶನಗಳು ಇವೆ.  

Sandalwood Politics : ಕೆಲವು ನಟಿ ನಟಿಯರು ತಾವು ರಾಜಕೀಯದಲ್ಲಿ ತೊಡಗಿ ಜನಸೇವೆಯಲ್ಲಿ ನಿರತರಾಗಿದ್ದಾರೆ. ರಾಜಕೀಯದಲ್ಲಿ ಸೋತ ಕನ್ನಡದ ನಟ ನಟಿಯರ ಪಟ್ಟಿ ಇಲ್ಲಿದೆ ನೋಡಿ.

ಅನಂತ್‌ ನಾಗ್‌ 
ಕನ್ನಡ ಚಿತ್ರ ರಂಗದ ನಟ ಅನಂತ್‌ ನಾಗ್‌ ಅವರು ಪ್ರಧಾನಿ ಮೋದಿ ಅವರ ಅಪ್ಪಟ ಅಭಿಮಾನಿ. ಇವರು ಕೆಲವು ದಿನಗಳ ಹಿಂದೆ ಬಿಜೆಪಿ ಸೇರಿಕೊಳ್ಳುತ್ತಾರೆ ಎಂಬ ವದಂತಿಗಳು ಗರಿದಾಡುತ್ತಿದ್ದವು. ಆದರೆ ಅನಂತ್‌ ನಾಗ್‌ ಅವರಿಗೆ ರಾಜಕೀಯ ಹೊಸದೇನಲ್ಲ. ಇವರು ಜೆ. ಹೆಚ್‌ ಅವರ ಸಂಪುಟದಲ್ಲಿ ಸಚಿವರಾಗಿ ಮತ್ತು ವಿಧಾನ ಪರಿಷತ್‌ನ ಸದಸ್ಯರಾಗಿಯೂ ಕಾರ್ಯನಿರ್ವಹಿಸದ್ದಾರೆ. 

ಕಳೆದ ಒಳದು ದಶಕದಿಂದ ಅವರು ರಾಜಕೀಯದಿಂದ ದೂರ ಉಳಿದಿದ್ದಾರೆ. ಕಾರಣ ಅವರು ಸಿನಿಮಾಗಳಲ್ಲಿ ತಮ್ಮ ನಟನೆಯ ಮೂಲಕ ಸೈ ಎನಿಸಿಕೊಂಡರು ರಾಜಕೀಯದಲ್ಲಿ ಯಶಸ್ಸು ಕಾಣಲಿಲ್ಲ.

ರಮ್ಯಾ 
ಸ್ಯಾಂಡಲ್ ವುಡ್‌ನ ಟಾಪ್‌ ನಟಿ ರಮ್ಯಾ ಅವರು 2012ರಲ್ಲಿ ರಾಷ್ಟೀಯ ಕಾಂಗ್ರೆಸ್‌ ಪಕ್ಷವನ್ನು ಸೇರಿದರು. ಇವರು 2013ರಲ್ಲಿ ಲೋಕಸಭೆಯ ಬೈ-ಎಲೆಕ್ಷನ್‌ನಲ್ಲಿ ಗೆದ್ದರು. ಇದಲ್ಲದೇ ಕನ್ನಡದ ಮೋಹಕತಾರೆ 2014ರಲ್ಲಿ ಮರಳಿ ಮಂಡ್ಯ ಲೋಕಸಭೆಗೆ ಸ್ಪರ್ಧಿಸಿ ಸಿ.ಎಸ್.‌ಪುಟ್ಟರಾಜು ವಿರುದ್ಧ ಸೋಲನ್ನು ಅನಭವಿಸಿದರು. ಇದಲ್ಲದೇ 2017ರಲ್ಲಿ ಕಾಂಗ್ರೆಸ್‌ ಐಟಿ ಸೆಲ್‌ ಮುಖ್ಯಸ್ಥರಾದರು. 

2019ರ ಲೋಕಸಭಾ ಚುನಾವಣೆಯಲ್ಲಿ ಸೋಲನ್ನು ಕಂಡ ನಂತರ ಅವರು ಕಾಂಗ್ರೆಸ್‌ ಪಕ್ಷದಿಂದ ಬಹಿರಂಗವಾಗಿ ಹೊರನಡೆದರು. ಮತ್ತೆ ಸಿನಿರಂಗಕ್ಕೆ ಪ್ರವೇಶ ಮಾಡಿಜದರು. 

ನಿಖಿಲ್‌ ಕುಮಾರಸ್ವಾಮಿ
ರಾಜಕೀಯ ಹಿನ್ನೆಲೆಯುಳ್ಳ ನಟ ನಿಖಿಲ್‌ ಕುಮಾರಸ್ವಾಮಿ. ಇವರ ಕುಟುಂಬವೇ ರಾಜಕೀಯದಲ್ಲಿ ಇದೆ. ಆದರೆ ಇವರು ಮೊದಲು ಗುರುತಿಸಿಕೊಂಡಿದ್ದು, ಸಿರಂಗದಲ್ಲಿ.  ಚಿತ್ರರಂಗದ ಜೊತೆಗೆ ಜೆಡಿಎಸ್‌ ಪಕ್ಷದ ಸಕ್ರಿಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಿರುವ ನಿಖಿಲ್‌ ಜೆಡಿಎಸ್‌ ರಾಜ್ಯ ಯುವ ಘಟಕ ಮುಖ್ಯಸ್ಥರು ಹೌದು. 

ಲೋಕಸಭೆಚುನಾವಣೆಯಲ್ಲಿ ಜಿದ್ದಾಜಿದ್ದಿನ ಕಣವಾಗಿದ್ದ ಮಂಡ್ಯದಲ್ಲಿ ಇವರು ಸುಮಲತಾ ಅವರ ವಿರುದ್ಧವಾಗಿ ಸೋಲನುಭವಿಸಿದರು. ಮುಂಬರುವ ದಿನಗಳಲ್ಲಿ ಇವರೇ ಜೆಡಿಎಸ್‌ ಪಕ್ಷದ ಆಧಾರ ಸ್ತಂಭವಾಗುವ ಭರವಸೆಯನ್ನು ಈ ನಟ ನೀಡಿದ್ದಾರೆ. 

Source: https://zeenews.india.com/kannada/entertainment/sandalwood-actors-and-actresses-who-lost-in-politics-135217

Leave a Reply

Your email address will not be published. Required fields are marked *