Hostel hudugaru bekagiddare : ಬಿಡುಗಡೆಗೆ ಕೇವಲ ಎರಡು ದಿನ ಬಾಕಿ ಇರುವಾಗಲೇ ಹೊಸ ಬರ ಬಹುನಿರೀಕ್ಷಿತ ಸಿನಿಮಾ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾಗೆ ವಿಘ್ನ ಎದುರಾಗಿದೆ. ಮೋಹಕ ತಾರೆ ನಟಿ, ಮಾಜಿ ಸಂಸದೆ ರಮ್ಯಾ ಚಿತ್ರತಂಡದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದು, 1 ಕೋಟಿ ರೂ. ಪರಿಹಾರಕ್ಕೆ ಬೇಡಿಕೆ ಇಟ್ಟಿದ್ದಾರೆ.

Ramya Hostel hudugaru bekagiddare : ಬಿಡುಗಡೆಗೆ ಸಿದ್ಧವಾಗಿರುವ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾಗೆ ವಿಘ್ನ ಎದುರಾಗಿದೆ. ಸಿನಿಮಾದಲ್ಲಿರುವ ತಮ್ಮ ದೃಶ್ಯಗಳನ್ನು ಡಿಲೀಟ್ ಮಾಡುವಂತೆ ಮತ್ತು 1 ಕೋಟಿ ರೂ. ಪರಿಹಾರ ನೀಡುವಂತೆ ಮೋಹಕ ತಾರೆ, ಮಾಜಿ ಸಂಸದೆ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದಾರೆ.
ಹೌದು.. ಕಳೆದ ಕೆಲವು ದಿನಗಳ ಹಿಂದೆ ಬಿಡುಗಡೆಯಾದ ʼಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆʼ ಸಿನಿಮಾದಲ್ಲಿ ನಟಿ ರಮ್ಯಾ ಕಾಣಿಸಿಕೊಂಡು ಕುತೂಹಲ ಮೂಡಿಸಿದ್ದರು. ಅಲ್ಲದೆ ಸೋಷಿಯಲ್ ಮೀಡಿಯಾದಲ್ಲಿ ರಮ್ಯಾ ನಟನೆಯ ದೃಶ್ಯಗಳು ಸಖತ್ ವೈರಲ್ ಆಗಿದ್ದವು. ಅಲ್ಲದೆ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿಸಿತ್ತು. ಇದೀಗ ರಿಲೀಸ್‌ಗೆ ಎರಡು ದಿನ ಬಾಕಿ ಇರುವಾಗ ಚಿತ್ರಕ್ಕೆ ವಿಘ್ನ ಎದುರಾಗಿದೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಟ್ರೈಲರ್ನಲ್ಲಿ ರಮ್ಯಾ ಅವರನ್ನು ಕಂಡು ಅಭಿಮಾನಿಗಳು ತುಂಬಾ ಖುಷಿ ಪಟ್ಟಿದ್ದರು. ಆದರೆ ರಮ್ಯಾ ಅನುಮತಿ ಇಲ್ಲದೆ ಟ್ರೈಲರ್ನಲ್ಲಿ ಅವರ ದೃಶ್ಯಗಳನ್ನು ಬಳಸಲಾಗಿದ್ದು, ಚಿತ್ರತಂಡದ ವಿರುದ್ಧ ರಮ್ಯಾ ಕೋರ್ಟ್ ಮೆಟ್ಟಿಲೇರಿದ್ದು, ತಮಗೆ ಆಗಿರುವ ನಷ್ಟವನ್ನು ತುಂಬಿಕೊಡಬೇಕು ಎಂದು ಮಾಜಿ ಸಂಸದೆ ರಮ್ಯಾ ಪಟ್ಟು ಹಿಡಿದಿದ್ದಾರೆ.
ಹಾಸ್ಟೆಲ್ ಹುಡುಗರು ಬೇಕಾಗಿದ್ದಾರೆ ಸಿನಿಮಾದಲ್ಲಿ ಕೇವಲ ಪ್ರೋಮೋದಲ್ಲಿ ಮಾತ್ರ ತಮ್ಮ ಫೋಟೋ ಮತ್ತು ವಿಡಿಯೋ ಬಳಸುವುದಾಗಿ ಚಿತ್ರ ನಿರ್ಮಾಪಕರು ಹೇಳಿದ್ದರಂತೆ. ಆದರೆ, ಈಗ ಸಿನಿಮಾದಲ್ಲೂ ತಮ್ಮ ದೃಶ್ಯಗಳನ್ನು ಬಳಿಸಿದ್ದಾರೆ ಎಂದು ರಮ್ಯಾ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ಸಿನಿಮಾದಲ್ಲಿರುವ ತಮ್ಮ ದೃಶ್ಯಗಳನ್ನು ತೆಗೆಯದಿದ್ದಲ್ಲಿ 1 ಕೋಟಿ ರೂ. ಪರಿಹಾರ ಕಟ್ಟಿಕೊಡಬೇಕೆಂದು ದೂರು ದಾಖಲಿಸಿದ್ದಾರೆ.