2000 ನೋಟುಗಳ ವಿನಿಮಯದ ಕುರಿತು SBI ಮಹತ್ವದ ಘೋಷಣೆ : ನಿಮ್ಮಲ್ಲಿರುವ ನೋಟು ಬದಲಾಯಿಸಲು ನೀವು ಏನು ಮಾಡಬೇಕು ? ಇಲ್ಲಿದೆ ಮಾಹಿತಿ..

RBI : ಭಾರತೀಯ ರಿಸರ್ವ್ ಬ್ಯಾಂಕ್ ಮೇ 23 ರಿಂದ ರೂ.2000 ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಿದೆ. ಈ ನಿಟ್ಟಿನಲ್ಲಿ ದೇಶದ ಅತಿ ದೊಡ್ಡ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮಹತ್ವದ ಘೋಷಣೆ ಮಾಡಿದೆ.

ದೇಶಾದ್ಯಂತ ಬ್ಯಾಂಕ್ ಶಾಖೆಗಳಲ್ಲಿ 2000 ರೂಪಾಯಿ ನೋಟುಗಳ ವಿನಿಮಯಕ್ಕೆ ಸಂಬಂಧಿಸಿದಂತೆ ನೋಟಿಸ್ ನೀಡಲಾಗಿದೆ. ಜನರು ದೊಡ್ಡ ನೋಟುಗಳನ್ನು ಬದಲಾಯಿಸಿಕೊಳ್ಳಲು ಯಾವುದೇ ಗುರುತಿನ ಪುರಾವೆಗಳನ್ನು ತೋರಿಸುವ ಅಗತ್ಯವಿಲ್ಲ ಮತ್ತು ಯಾವುದೇ ಅರ್ಜಿಯನ್ನು ಭರ್ತಿ ಮಾಡುವ ಅಗತ್ಯವಿಲ್ಲ.

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗೆ ರೂ.2000 ನೋಟು ನೀಡಿದರೆ ಬೇರೆ ನೋಟುಗಳನ್ನು ಕೊಡುತ್ತಾರೆ. ನಿಮ್ಮ ವಿವರಗಳನ್ನು ಬ್ಯಾಂಕ್‌ಗೆ ನೀಡುವ ಅಗತ್ಯವಿಲ್ಲ. ದಿನಕ್ಕೆ ರೂ.20,000 ದರದಲ್ಲಿ, ಯಾವುದೇ ಐಡಿ ಪ್ರೂಫ್ ನೀಡದೆ ಬದಲಾಯಿಸಲು ಸಾಧ್ಯವಿದೆ. ಸೆಪ್ಟೆಂಬರ್ 30 ರವರೆಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಗಳಿಗೆ ತೆರಳಿ ರೂ.2000 ನೋಟುಗಳನ್ನು ಬದಲಾಯಿಸಿಕೊಳ್ಳಲು ಅವಕಾಶ ಕಲ್ಪಿಸಲಾಗುತ್ತಿದೆ ಎಂದು ಹೇಳಿದೆ.

ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ((Reserve bank Of India)) ಕಳೆದ ಶುಕ್ರವಾರದಂದು ರೂ.2000 ನೋಟುಗಳನ್ನು
ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿದ್ದು ಗೊತ್ತೇ ಇದೆ. ಸ್ವಚ್ಛ ನೋಟು ನೀತಿಯ(CLEAN NOTE POLICY) ಭಾಗವಾಗಿ ಈ ನೋಟುಗಳನ್ನು ಚಲಾವಣೆಯಿಂದ ಹಿಂಪಡೆಯಲಾಗುತ್ತಿದೆ ಎಂದು RBI ಪ್ರಕಟಣೆಯಲ್ಲಿ ತಿಳಿಸಿತ್ತು.

2000 ನೋಟುಗಳನ್ನು ಸಾಮಾನ್ಯ ವಹಿವಾಟಿಗೆ ಬಳಸುವಂತಿಲ್ಲ ಎಂದು ತಿಳಿಸಿತ್ತು. ಇದಲ್ಲದೇ, ದೇಶೀಯ ಆರ್ಥಿಕ ಅಗತ್ಯಗಳಿಗಾಗಿ ಮಾರುಕಟ್ಟೆಯಲ್ಲಿ ಸಾಕಷ್ಟು ಇತರ ಕರೆನ್ಸಿ ನೋಟುಗಳು ಇರುವುದರಿಂದ ಈ ದೊಡ್ಡ ನೋಟುಗಳನ್ನು ಚಲಾವಣೆಯಿಂದ ತೆಗೆದುಹಾಕಲಾಗುತ್ತಿದೆ. ಬ್ಯಾಂಕ್ ನಲ್ಲಿ ಖಾತೆ ಇಲ್ಲದಿದ್ದರೂ ರೂ.2000 ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

ಯಾವುದೇ ಬ್ಯಾಂಕ್ ಶಾಖೆಗೆ ಹೋಗಿ ದಿನಕ್ಕೆ 20,000 ರೂ.ವರೆಗೆ ಎರಡು ಸಾವಿರ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ರಿಸರ್ವ್ ಬ್ಯಾಂಕ್ ಹೇಳಿದೆ.

ಬ್ಯಾಂಕ್ ಖಾತೆ ಹೊಂದಿರುವವರಿಗೆ ಮತ್ತೊಂದು ಆಯ್ಕೆ ಇದೆ. ಅವರು ನೋಟುಗಳನ್ನು ವಿನಿಮಯ ಮಾಡಿಕೊಳ್ಳಬಹುದು ಅಥವಾ ಖಾತೆಗೆ ಜಮಾ ಮಾಡಬಹುದು. ಹೀಗೆ ಬ್ಯಾಂಕ್ ಖಾತೆಗೆ ಠೇವಣಿ ಇಡುವವರಿಗೆ ರೂ.20000/- ಮಿತಿ ಇಲ್ಲ. ಯಾವುದೇ ಖಾತೆಗೆ ಜಮಾ ಮಾಡಬಹುದು. ಈ ಕ್ರಮದಲ್ಲಿ ಬ್ಯಾಂಕ್ ಗೆ ಹೋದರೆ ಐಡಿ ಪ್ರೂಫ್ ಕೇಳುತ್ತಾರೆ, ಹಲವು ಅರ್ಜಿ ನಮೂನೆಗಳನ್ನು ಭರ್ತಿ ಮಾಡಬೇಕಾಗುವುದು ಎಂಬ ಊಹಾಪೋಹಗಳ ಹಿನ್ನೆಲೆಯಲ್ಲಿ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಈ ಘೋಷಣೆ ಮಾಡಿರುವುದು ಗಮನಾರ್ಹ.

ಎಸ್‌ಬಿಐ ಸೂಚನೆ ಪ್ರಕಾರ, ಜನರು ತಮ್ಮ SBI ಬ್ಯಾಂಕ್ ಶಾಖೆಗಳಲ್ಲಿ ರೂ.20000/- ರೂ.2000 ಕರೆನ್ಸಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.

ಅದಕ್ಕೆ ಯಾವುದೇ ನಿಬಂಧನೆಗಳು ಇರುವುದಿಲ್ಲ.ಅಲ್ಲದೆ, ಗುರುತಿನ ಪುರಾವೆ ನೀಡುವ ಅಗತ್ಯವಿಲ್ಲ’ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಬಹಿರಂಗಪಡಿಸಿದೆ.

ಜನರು ಸ್ಟೇಟ್ ಬ್ಯಾಂಕ್ ಮತ್ತು ರಿಸರ್ವ್ ಬ್ಯಾಂಕ್ ನ 19 ಪ್ರಾದೇಶಿಕ ಕಚೇರಿಗಳು ಸೇರಿದಂತೆ ಇತರೆ ಬ್ಯಾಂಕ್ ಗಳಲ್ಲಿ ವಿನಿಮಯ ಸೌಲಭ್ಯ ಕಲ್ಪಿಸಲಾಗಿದೆ. ಈ ಪ್ರಕ್ರಿಯೆ ಮೇ 23ರಿಂದ ಆರಂಭವಾಗಲಿದ್ದು, ಸೆಪ್ಟೆಂಬರ್ 30ರವರೆಗೆ ನಡೆಯಲಿದೆ. ಅಲ್ಲಿಯವರೆಗೆ ಯಾರು ಬೇಕಾದರೂ ತಮ್ಮ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು ಎಂದು ತಿಳಿಸಿದೆ.

The post 2000 ನೋಟುಗಳ ವಿನಿಮಯದ ಕುರಿತು SBI ಮಹತ್ವದ ಘೋಷಣೆ : ನಿಮ್ಮಲ್ಲಿರುವ ನೋಟು ಬದಲಾಯಿಸಲು ನೀವು ಏನು ಮಾಡಬೇಕು ? ಇಲ್ಲಿದೆ ಮಾಹಿತಿ.. first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/m2C6yfr
via IFTTT

Views: 0

Leave a Reply

Your email address will not be published. Required fields are marked *