ಸಾಲು ಸಾಲು ಸಾಂಕ್ರಾಮಿಕ ರೋಗಗಳ ಬಗ್ಗೆ ವಿಶ್ವದಾದ್ಯಂತ ವಿಜ್ಞಾನಿಗಳು ಕಳವಳ!!

ಮನುಕುಲದ ವಿನಾಶಕ್ಕೆ ನಾಂದಿಯಾಗುತ್ತಿರುವ ಮಾರಕ ವೈರಸ್ ಗಳು.ಮಾನವರಲ್ಲಿ ಕಂಡುಬರುವ ಅತಿ ಹೆಚ್ಚು ವೈರಸ್ ಗಳು,ಅಧಿಕ ಪ್ರಮಾಣದಲ್ಲಿ ಸಾವು ಸೃಷ್ಟಿಸಬಲ್ಲವು.2050ರ ವೇಳೆಗೆ 12 ಪಟ್ಟು ಹೆಚ್ಚಾಗಲಿರುವ ಸಾವಿನ ಪ್ರಮಾಣಕ್ಕೆ ಕಾರಣವಾಗಲಿರುವ ವೈರಸ್ ಗಳ ಗುಣಲಕ್ಷಣಗಳ ಬಗ್ಗೆ ಮಾಹಿತಿ.

ನವದೆಹಲಿ: ಕರೋನ ನಂತರ ಹರಡಲಿರುವ ಸಾಲು ಸಾಲು ಸಾಂಕ್ರಾಮಿಕ ರೋಗಗಳ ಬಗ್ಗೆ ವಿಶ್ವದಾದ್ಯಂತ ವಿಜ್ಞಾನಿಗಳು ಕಳವಳ ವ್ಯಕ್ತ ಪಡಿಸಿದ್ದಾರೆ.ಕರೋನಾ ರೀತಿಯಲ್ಲೇ ಹರಡುವ ವೈರಸ್ಗಳ ಬಗ್ಗೆ ಸ್ಪಷ್ಟ ಮಾಹಿತಿ ಇಲ್ಲದಿದ್ದರೂ, ಮಾರಣಾಂತಿಕ ರೋಗ ಹರಡುವ ವೈರಸ್ ಗಳಾದ ನಿಪಾಹ್, ಮಾರ್ಬರ್ಗ್, ಎಬೋಲಾ, ಸಾರ್ಸ್ ವಿಶ್ವದಾದ್ಯಂತ ಹರಡುವ ವೈರಸ್ ಗಳಾಗಿವೆ ಎಂದು ಅಂದಾಜಿಸಲಾಗಿದೆ.

ಈ ವೈರಸ್ ಗಳ ಬಗ್ಗೆ ವಿಶ್ವ ಆರೋಗ್ಯ ಸಂಸ್ಥೆಯು, ಮುಂದಿನ ದಿನಗಳಲ್ಲಿ ಹರಡಲಿರುವ ಸಾಂಕ್ರಾಮಿಕ ರೋಗಗಳ ಮೂಲ ಎಂದು ಅನುಮಾನ ವ್ಯಕ್ತಪಡಿಸಿದೆ. ಅಲ್ಲದೇ ವೈರಸ್ ಗಳ ಬಗ್ಗೆ  ಅಧ್ಯಯದಲ್ಲಿರುವ ಲೇಖಕರು, ಎಬೋಲಾದಂತಹ ವೈರಸ್ ಮಾನವಕುಲಕ್ಕೆ ಹೆಚ್ಚು ಆತಂಕ ಸೃಷ್ಟಿಸಲಿವೆ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

2050 ರ ವೇಳೆಗೆ ಈ ವೇರಸ್ ಗಳಿಂದ ಸಾವಿನ ಪ್ರಮಾಣ 12 ಪಟ್ಟು ಹೆಚ್ಚಾಗಲಿದೆ, ಈ ವೈರಸ್ ಗಳಿಂದ ಸಾವು ಸಂಭವಿಸಬಹುದು, ಈ ವೈರಸ್ ಗಳು ಮಾನವರಲ್ಲೇ ಹರಡುತ್ತವೆ. ಎಂದು, ಬ್ರಿಟಿಷ್ ಮೆಡಿಕಲ್ ಜರ್ನಲ್ ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ತಿಳಿಸಿದ್ದಾರೆ.

ಎಬೋಲಾ ಮತ್ತು ಮಾರ್ಬರ್ಗ್:

ಎಬೋಲಾ ಮತ್ತು ಮಾರ್ಬರ್ಗ್ ಎರಡೂ ಬಾವಲಿಗಳಲ್ಲಿ ಕಂಡುಬರುವ 2 ಅತ್ಯಂತ ಸಾಂಕ್ರಾಮಿಕ ವೈರಸ್​ಗಳಾಗಿವೆ. ಆಫ್ರಿಕಾದಾದ್ಯಂತ ಈ ವೈರಸ್‌ಗಳು ಕಳೆದ ಕೆಲವು ವರ್ಷಗಳಲ್ಲಿ ಏಕಾಏಕಿ ಸಾವಿರಾರು ಜನರ ಸಾವಿಗೆ ಕಾರಣವಾಗಿವೆ. ಎಬೋಲಾ ಹೆಮರಾಜಿಕ್ ಜ್ವರವು ಅಪರೂಪದ ಆದರೆ ತೀವ್ರವಾದ ಮತ್ತು ಸಾಮಾನ್ಯವಾಗಿ ಮಾರಣಾಂತಿಕ ಕಾಯಿಲೆಯಾಗಿದ್ದು, ಇದು ಕಾಡು ಪ್ರಾಣಿಗಳಿಂದ ಹರಡುತ್ತದೆ ಮತ್ತು ಮನುಷ್ಯರಿಂದ ಮನುಷ್ಯನಿಗೆ ಹರಡುವ ಮೂಲಕ ವೇಗವಾಗಿ ಎಲ್ಲೆಡೆ ಕಾಣಿಸಿಕೊಳ್ಳುತ್ತದೆ. ಈ ವೈರಸ್​ನಿಂದ ಸರಾಸರಿ ಸಾವಿನ ಪ್ರಮಾಣವು ಸುಮಾರು ಶೇ. 50ರಷ್ಟು ಎಂದು ತಜ್ಞರು ಹೇಳುತ್ತಾರೆ.

ಎಬೋಲಾ ಮತ್ತು ಮಾರ್ಬರ್ಗ್ ಎರಡೂ ತೀವ್ರ ಜ್ವರ, ತೀವ್ರ ತಲೆನೋವು, ಅಸ್ವಸ್ಥತೆ ಮತ್ತು ಕಣ್ಣುಗಳು ಅಥವಾ ಆಂತರಿಕ ಅಂಗಗಳಿಂದ ರಕ್ತಸ್ರಾವ ಉಂಟಾಗುವ ಮೂಲಕ ಕಾಣಿಸಿಕೊಳ್ಳುತ್ತದೆ.

ತೀವ್ರತರವಾದ ಉಸಿರಾಟದ ಸಿಂಡ್ರೋಮ್ ಅಥವಾ SARS:

ತೀವ್ರವಾದ ಉಸಿರಾಟದ ಸಿಂಡ್ರೋಮ್ ಅಥವಾ SARS ಎಂಬುದು ಕೊರೊನಾವೈರಸ್‌ನಿಂದ ಉಂಟಾಗುವ ವೈರಲ್ ಉಸಿರಾಟದ ಸೋಂಕು. ಇದು COVID-19ಗೆ ಸಹ ಕಾರಣವಾಗುತ್ತದೆ. SARS ಶ್ವಾಸಕೋಶದಲ್ಲಿನ ವಾಯುಮಾರ್ಗಗಳ ಮೇಲೆ ತೀವ್ರವಾಗಿ ಪರಿಣಾಮ ಬೀರುತ್ತದೆ. ಹಾಗೇ, ತಲೆನೋವು, ಜ್ವರ, ಮೈಕೈ ನೋವು, ಕೆಮ್ಮು ಮತ್ತು ನ್ಯುಮೋನಿಯಾವನ್ನು ಒಳಗೊಂಡಿರುವ ಜ್ವರ ಮತ್ತು ನೆಗಡಿಯಂತಹ ರೋಗಲಕ್ಷಣಗಳನ್ನು ಇದು ಹೊಂದಿದೆ.

SARS ಹೆಚ್ಚು ಸಾಂಕ್ರಾಮಿಕವಾಗಿರುತ್ತದೆ. ಈ ವೈರಸ್ ಹೊಂದಿರುವ ವ್ಯಕ್ತಿಯು ಕೆಮ್ಮಿದಾಗ ಅಥವಾ ಸೀನಿದಾಗ ಅಥವಾ ವೈರಸ್ ಹೊಂದಿರುವ ವಸ್ತುಗಳು ಅಥವಾ ಮೇಲ್ಮೈಗಳ ಸಂಪರ್ಕದಿಂದ ಉತ್ಪತ್ತಿಯಾಗುವ ಉಸಿರಾಟದ ಹನಿಗಳ ಮೂಲಕ ಇದು ಹರಡುತ್ತದೆ.

ನಿಪಾಹ್:

ಅಧ್ಯಯನದ ಪ್ರಕಾರ, ಹಣ್ಣಿನ ಬಾವಲಿಗಳಿಂದ ಹರಡುವ ನಿಪಾಹ್ ಮುಂದಿನ ದೊಡ್ಡ ಸಾಂಕ್ರಾಮಿಕ ರೋಗವಾಗುವ ಲಕ್ಷಣಗಳಿವೆ. ಮೆದುಳಿನ ಮೇಲೆ ದಾಳಿ ಮಾಡುವ ಈ ವೈರಸ್ ಉರಿಯೂತವನ್ನು ಉಂಟುಮಾಡುತ್ತದೆ. ಶೇ. 75ರಷ್ಟು ಸಾವಿನ ಪ್ರಮಾಣವನ್ನು ಉಂಟುಮಾಡುತ್ತದೆ. ಈ ವರ್ಷ ಭಾರತದ ಕೇರಳದಲ್ಲಿ ನಿಪಾಹ್ ಸೋಂಕಿನಿಂದ ಹಲವು ಜನ ಸಾವನ್ನಪ್ಪಿದ್ದರು.

ಮಚುಪೋ:

ಕಪ್ಪು ಟೈಫಸ್ ಮತ್ತು ಬೊಲಿವಿಯನ್ ಹೆಮರಾಜಿಕ್ ಜ್ವರ ಎಂದೂ ಕರೆಯಲ್ಪಡುವ ಮಚುಪೋವನ್ನು ಮೊದಲು 50ರ ದಶಕದಲ್ಲಿ ದಕ್ಷಿಣ ಅಮೆರಿಕಾದ ಬೊಲಿವಿಯಾದಲ್ಲಿ ಕಂಡುಹಿಡಿಯಲಾಯಿತು. ಮಚುಪೋ ಇಲಿಗಳಿಂದ ಹರಡುತ್ತದೆ. ಇದು ಈಗ ಮುಂದಿನ ಸಾಂಕ್ರಾಮಿಕವಾಗಬಹುದು.

ಮಲೇರಿಯಾವನ್ನು ಹೋಲುವ ಜ್ವರ, ಅಸ್ವಸ್ಥತೆ, ತಲೆನೋವಿನಿಂದ ಈ ಸೋಂಕು ನಿಧಾನವಾಗಿ ಆರಂಭವಾಗುತ್ತದೆ. ಸುಮಾರು ಮೂರನೇ ಒಂದು ಭಾಗದಷ್ಟು ರೋಗಿಗಳಲ್ಲಿ ತೀವ್ರವಾದ ಹೆಮರಾಜಿಕ್ ಅಥವಾ ನರವೈಜ್ಞಾನಿಕ ಲಕ್ಷಣಗಳು ಕಂಡುಬರುತ್ತವೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharechat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *