health benefits of Kiwi Fruit : ಈ ಹಣ್ಣು ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ವರ್ಷವಿಡಿ ಸಿಗುವ ಈ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಪೊರೆ ಮತ್ತು ಅನೇಕ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ.

ಈ ಹಣ್ಣು ಕಣ್ಣುಗಳ ಆರೋಗ್ಯವನ್ನು ವೃದ್ಧಿಸುತ್ತದೆ. ವರ್ಷವಿಡಿ ಸಿಗುವ ಈ ಹಣ್ಣನ್ನು ತಿನ್ನುವುದರಿಂದ ಕಣ್ಣಿನ ಪೊರೆ ಮತ್ತು ಅನೇಕ ಕಣ್ಣಿನ ಸಮಸ್ಯೆಗಳು ದೂರವಾಗುತ್ತದೆ.
ಕಿವಿ ಹಣ್ಣು ಪೋಷಕಾಂಶಗಳ ಗಣಿಯಾಗಿದೆ. ಕಿವಿ ಹಣ್ಣು ತಿನ್ನುವುದರಿಂದ ದೇಹದ ರೋಗ ನಿರೋಧಕ ಶಕ್ತಿ ಹೆಚ್ಚಾಗುತ್ತದೆ. ಕಿವಿ ಅಗತ್ಯವಾದ ಜೀವಸತ್ವಗಳನ್ನು ದೇಹಕ್ಕೆ ಒದಗಿಸುತ್ತದೆ. ಪ್ರತಿದಿನ 1 ಕಿವಿ ಹಣ್ಣು ತಿನ್ನುವುದರಿಂದ ಅನೇಕ ಕಣ್ಣಿನ ಸಮಸ್ಯೆ ನಿವಾರಣೆಯಾಗುತ್ತವೆ.
ಕಿವಿ ನೋಟದಲ್ಲಿ ಚಿಕ್ಕ ಹಣ್ಣು. ಆದರೆ ಇದು ಪೋಷಕಾಂಶಗಳ ಖಜಾನೆ. ವಿಟಮಿನ್ ಕೆ, ವಿಟಮಿನ್ ಸಿ, ವಿಟಮಿನ್ ಇ, ಫೋಲೇಟ್, ಪೊಟ್ಯಾಸಿಯಮ್ ಇದರಲ್ಲಿ ಹೇರಳವಾಗಿದೆ. ಕಿವಿಯಲ್ಲಿ ಹೆಚ್ಚಿನ ಪ್ರಮಾಣದ ಆಂಟಿ-ಆಕ್ಸಿಡೆಂಟ್‌ಗಳಿವೆ.
ಕಿವಿ ಹಣ್ಣು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಕಿವಿಯಲ್ಲಿ ಮೆಗ್ನೀಸಿಯಮ್ ಮತ್ತು ಪೊಟ್ಯಾಸಿಯಮ್ ಕಂಡುಬರುತ್ತದೆ. ಇದು ಅಧಿಕ ರಕ್ತದೊತ್ತಡದ ಸಮಸ್ಯೆಯನ್ನು ಕಡಿಮೆ ಮಾಡಲು ಬಹಳ ಸಹಾಯಕವಾಗಿದೆ. ರಕ್ತದೊತ್ತಡ ರೋಗಿಗಳು ಪ್ರತಿದಿನ ಕಿವಿ ಹಣ್ಣು ಸೇವಿಸಬೇಕು.
ಸತತವಾಗಿ ಕಂಪ್ಯೂಟರ್, ಲ್ಯಾಪ್‌ಟಾಪ್, ಮೊಬೈಲ್ ಬಳಕೆಯಿಂದ ಕಣ್ಣುಗಳ ಮೇಲೆ ಹೆಚ್ಚು ಒತ್ತಡ ಬೀಳುತ್ತದೆ. ಕಣ್ಣಿನ ದೃಷ್ಟಿ ಹದಗೆಡುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಕಿವಿ ಹಣ್ಣು ಸೇವನೆ ಕಣ್ಣುಗಳಿಗೆ ತುಂಬಾ ಪ್ರಯೋಜನಕಾರಿಯಾಗಿದೆ.
ಕಿವಿ ಹಣ್ಣಿನಲ್ಲಿ ಕಂಡುಬರುವ ಜೀವಸತ್ವಗಳು ಮತ್ತು ಖನಿಜಗಳು ರಕ್ತ ಪರಿಚಲನೆಯನು ಸುಧಾರಿಸುತ್ತವೆ. ಇದರಿಂದ ಕಣ್ಣುಗಳಿಗೆ ಸರಿಯಾಗಿ ರಕ್ತ ಸಂಚಾರ ಆಗುತ್ತದೆ. ಇದರಿಂದ ಕಣ್ಣಿನ ನರಗಳು ಬಲಗೊಳ್ಳುತ್ತವೆ. ಕಣ್ಣಿನ ದೃಷ್ಟಿ ಸುಧಾರಿಸುತ್ತದೆ.
ಕಿವಿ ಹಣ್ಣಿನಲ್ಲಿ ವಿಟಮಿನ್ ಎ ಹೇರಳವಾಗಿ ಕಂಡುಬರುತ್ತದೆ. ಇದು ಕಣ್ಣು ಮಂದಾಗುವುದನ್ನು ತಡೆಯುತ್ತದೆ. ಕಿವಿಯಲ್ಲಿ ತಾಮ್ರ ಹೇರಳವಾಗಿ ಕಂಡುಬರುತ್ತದೆ. ಇದು ಕಣ್ಣಿನ ನರಗಳು ಆರೋಗ್ಯಕ್ಕೆ ಬೇಕಾದ ಪೋಷಕಾಂಶ. ಪೊರೆ ಬರದಂತೆ ನೋಡಿಕೊಳ್ಳುತ್ತದೆ.
ಕಿವಿ ಹಣ್ಣು ವಿಟಮಿನ್ ಸಿ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿದೆ. ಕಣ್ಣುಗಳಲ್ಲಿನ ಕಿರಿಕಿರಿ, ಊತ ಮತ್ತು ಕಣ್ಣು ಕೆಂಪಾಗುವುದನ್ನು ಇದು ತಡೆಯುತ್ತದೆ. ಕಿವಿ ತಿನ್ನುವುದರಿಂದ ಮಧುಮೇಹಿಗಳಲ್ಲೂ ದೃಷ್ಟಿ ದೋಷ ಕಾಡುವುದಿಲ್ಲ.
Zee Kannada News
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1