ಶಂಕರ್ ನಾಗ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1954ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿರುವಾಗ ಮರಾಠಿ ನಾಟಕಗಳಿಂದ ಅವರು ಪ್ರಭಾವಕ್ಕೆ ಒಳಗಾಗಿದರು. ‘ಒಂದಾನೊಂದು ಕಾಲದಲ್ಲಿ’ ಅವರು ನಟಿಸಿದ ಮೊದಲ ಕನ್ನಡ ಸಿನಿಮಾ.
ಶಂಕರ್ ನಾಗ್ (Shankar Nag) ಅವರು ಇಂದು (ನವೆಂಬರ್ 9) ನಮ್ಮೊಂದಿಗೆ ಇದ್ದಿದ್ದರೆ 69ನೇ ವರ್ಷದ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದರು. ಅವರು ನಮ್ಮನ್ನು ಅಗಲಿ ಹಲವು ವರ್ಷಗಳು ಕಳೆದಿವೆ. ಆದರೆ, ಅವರ ನೆನಪು ಎಂದಿಗೂ ನಮ್ಮನ್ನು ಬಿಟ್ಟು ಹೋಗುವಂಥದ್ದಲ್ಲ. ಅವರು ಮಾಡಿದ ಸಿನಿಮಾಗಳು, ಕಂಡ ಕನಸುಗಳಿಂದ ಅವರು ನಮ್ಮೊಂದಿಗೆ ಸದಾ ಜೀವಂತ. ಸಣ್ಣ ವಯಸ್ಸಿಗೆ ಚಿತ್ರರಂಗದ ಜೊತೆ ನಂಟು ಬೆಳೆಸಿಕೊಂಡ ಶಂಕರ್ ನಾಗ್, ಬದುಕಿದ್ದ ಕೆಲವೇ ವರ್ಷಗಳಲ್ಲಿ ಹಲವು ಸಿನಿಮಾಗಳನ್ನು ನೀಡಿದರು. ನಿರ್ದೇಶನ, ನಟನೆಯ ಜೊತೆ ನಮ್ಮ ರಾಜ್ಯದ ಅಭಿವೃದ್ಧಿ ಬಗ್ಗೆ ಅವರು ಕನಸು ಕಂಡಿದ್ದರು. ಅವರನ್ನು ಇಂದು ನೆನಪಿಸಿಕೊಳ್ಳುವ ಕೆಲಸ ಆಗುತ್ತಿದೆ.
ಶಂಕರ್ ನಾಗ್ ಅವರು ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ 1954ರಲ್ಲಿ ಜನಿಸಿದರು. ಸಣ್ಣ ವಯಸ್ಸಿನಲ್ಲಿರುವಾಗ ಮರಾಠಿ ನಾಟಕಗಳಿಂದ ಅವರು ಪ್ರಭಾವಕ್ಕೆ ಒಳಗಾಗಿದರು. ‘ಒಂದಾನೊಂದು ಕಾಲದಲ್ಲಿ’ ಅವರು ನಟಿಸಿದ ಮೊದಲ ಕನ್ನಡ ಸಿನಿಮಾ. ಆ ಬಳಿಕ ಅವರು ಹಲವು ಪ್ರಯೋಗಗಳನ್ನು ಮಾಡಿದರು.
ಕೆಲವು ಸಿನಿಮಾಗಳಲ್ಲಿ ನಟಿಸಿದ ಬಳಿಕ ಅವರಿಗೆ ನಿರ್ದೇಶನದ ಕಡೆ ಒಲವು ಬಂತು. ‘ಮಿಂಚಿನ ಓಟ’ ಸಿನಿಮಾವನ್ನು ಅವರು ಮೊದಲ ಬಾರಿಗೆ ನಿರ್ದೇಶನ ಮಾಡಿದರು. ಅನಂತ್ ನಾಗ್ ಹಾಗೂ ಶಂಕರ್ ನಾಗ್ ಈ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಈ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡಿತು. ಆ ಬಳಿಕ ‘ಗೀತಾ’, ‘ಜನ್ಮ ಜನ್ಮದ ಅನುಬಂಧ’ ಚಿತ್ರಗಳನ್ನು ಅವರು ನಿರ್ದೇಶನ ಮಾಡಿದ್ದಾರೆ.
ರಾಜ್ಕುಮಾರ್ ನಟನೆಯ ‘ಒಂದು ಮುತ್ತಿನ ಕಥೆ’ ಚಿತ್ರ ಗಮನ ಸೆಳೆಯಿತು. ಈ ಚಿತ್ರದಲ್ಲಿ ಬರುವ ಅಂಡರ್ವಾಟರ್ ಶೂಟಿಂಗ್ಗಾಗಿ ಶಂಕರ್ ನಾಗ್ ಸಾಕಷ್ಟು ಶ್ರಮ ಹಾಕಿದ್ದರು. 90ರ ದಶಕದಲ್ಲಿ ವಿದೇಶಕ್ಕೆ ಹೋಗಿ ಅಲ್ಲಿನ ಸಿನಿಮಾಗಳನ್ನು ನೋಡಿದ್ದರು. ಆ ತಂತ್ರಜ್ಞಾನ ಕನ್ನಡ ಚಿತ್ರರಂಗಕ್ಕೆ ಬರಬೇಕು ಎಂದು ಶಂಕರ್ನಾಗ್ ಆಲೋಚಿಸಿದ್ದರು. ಈ ಕುರಿತು ಅವರು ಹಲವು ಆಲೋಚನೆಗಳನ್ನು ಮಾಡಿದ್ದರು. ಮೆಟ್ರೋ ಸಾರಿಗೆಯನ್ನು ರಾಜ್ಯಕ್ಕೆ ತರಬೇಕು ಎಂದು ಆಗಲೇ ಆಲೋಚಿಸಿದ್ದರು.
‘ಮಾಲ್ಗುಡಿ ಡೇಸ್’ ಟಿವಿ ಸೀರೀಸ್ ಶಂಕರ್ ನಾಗ್ ನಿರ್ದೇಶನದಲ್ಲಿ ಮೂಡಿಬಂತು. ನಾಲ್ಕು ಸೀಸನ್ಗಳ ಪೈಕಿ ಮೊದಲ ಮೂರು ಸೀಸನ್ಗೆ ಅವರೇ ನೇತೃತ್ವ ವಹಿಸಿದ್ದರು. ಈ ಸರಣಿ ಯಶಸ್ಸು ಪಡೆಯಿತು. ಇದು ಶಂಕರ್ ನಾಗ್ ಅವರ ನಿರ್ದೇಶನದಲ್ಲಿ ಮೂಡಿ ಬಂದ ಮೊದಲ ಹಾಗೂ ಕೊನೆಯ ಸೀರಿಸ್.
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1