“ಚಿತ್ರದುರ್ಗದಲ್ಲಿ ಶರನ್ನವರಾತ್ರಿ: ದೇವಿ ಭಾಗವತಪುರಾಣದ ಮಹತ್ವವನ್ನು ವಿವರಿಸಿದ ಶಿವಲಿಂಗಾನಂದ ಶ್ರೀಗಳು”

ಚಿತ್ರದುರ್ಗ ಸೆ. 23

ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್


ಹಿಂದೂ ಧರ್ಮದ ಎಲ್ಲ ಮುಖ್ಯ ಪುರಾಣಗಳು ದೇವಿಯನ್ನು ಹೆಸರಿಸಿ ಪೂಜಿಸುತ್ತಾವಾದರೂ, ಈ ಪಠ್ಯ ಪ್ರಧಾನ ದೈವಿಕತೆಯಾಗಿ ಅವಳ ಸುತ್ತ ಕೇಂದ್ರಿತವಾಗಿದೆ. ಅದ್ವೈತ ವೇದಾಂತ ಶೈಲಿಯ ಏಕತತ್ವವಾದದ ಜೊತೆಗೆ ಸೇರಿರುವ ಶಕ್ತಿಯ ಭಕ್ತಿ ಆರಾಧನೆ ಈ ಪಠ್ಯದ ಆಧಾರವಾಗಿರುವ ತತ್ತ್ವಶಾಸ್ತ್ರವಾಗಿದೆ ಎಂದು ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದ ಪೀಠಾಧ್ಯಕ್ಷರಾದ ಶ್ರೀ ಶಿವಲಿಂಗಾನಂದ ಶ್ರೀಗಳು ತಿಳಿಸಿದರು.


ನಗರದ ಕಬೀರಾನಂದ ನಗರದಲ್ಲಿನ ಶ್ರೀ ಸದ್ಗುರು ಕಬೀರಾನಂದಸ್ವಾಮಿ ಆಶ್ರಮದವತಿಯಿಂದ ಶ್ರೀ ಭಗವತಿ ಬಗಳಾಂಬಿಕಾದೇವಿ ದೇವಸ್ಥಾನದಲ್ಲಿ ಸೆ. 22 ರಿಂದ ಪ್ರಾರಂಭವಾದ ಶರನ್ನವರಾತ್ರಿ ಕಾರ್ಯಕ್ರಮದ ಪ್ರಥಮ ದಿನದ ದಿವ್ಯ ಸಾನಿಧ್ಯವಹಿಸಿ ಮಾತನಾಡಿದ ಶ್ರೀಗಳ ಶ್ರೀಮದ್ ದೇವಿ ಭಾಗವತಮ್ ಮತ್ತು ದೇವಿ ಭಾಗವತಮ್ ಎಂದೂ ಪರಿಚಿತವಿರುವ ದೇವಿ ಭಾಗವತಪುರಾಣ ಹಿಂದೂ ಸಾಹಿತ್ಯದ ಪುರಾಣ ಪ್ರಕಾರಕ್ಕೆ ಸೇರಿದ ಒಂದು ಸಂಸ್ಕೃತ ಪಠ್ಯ. ಈ ಪಠ್ಯವನ್ನು ಭಾರತದ ಕೆಲವು ಭಾಗಗಳಲ್ಲಿ ಮಹಾಪುರಾಣ ಎಂದು ಪರಿಗಣಿಸಲಾದರೆ, ಇತರರು ಅದನ್ನು ಉಪಪುರಾಣಗಳಲ್ಲಿ ಒಂದು ಎಂದು ಸೇರಿಸುತ್ತಾರೆ, ಆದರೆ ಎಲ್ಲ ಸಂಪ್ರದಾಯಗಳು ಅದನ್ನು ಒಂದು ಪ್ರಮುಖ ಪುರಾಣ ಎಂದು ಪರಿಗಣಿಸುತ್ತಾರೆ.


ಶಾಕ್ತ ಪಂಥವು ದೇವಿ ಅಥವಾ ಶಕ್ತಿಯನ್ನು ಬ್ರಹ್ಮಾಂಡದ ಆದಿಸ್ವರೂಪದ ಸೃಷ್ಟಿಕರ್ತೆ ಮತ್ತು ಬ್ರಹ್ಮನ್ ಆಗಿ ಪೂಜಿಸುವ ಹಿಂದೂ ಧರ್ಮದಲ್ಲಿನ ಒಂದು ಸಂಪ್ರದಾಯ. ಇದು ದೈವಿಕ ಸ್ತ್ರೀರೂಪವನ್ನು ಎಲ್ಲ ಅಸ್ತಿತ್ವದ ಮೂಲ, ಸೃಷ್ಟಿಕರ್ತೆ, ಸಂರಕ್ಷಕಿ ಮತ್ತು ಎಲ್ಲದರ ವಿನಾಶಕಿ, ಜೊತೆಗೆ ಅಧ್ಯಾತ್ಮಿಕ ವಿಮೋಚನೆಯನ್ನು ಸಬಲೀಕರಿಸುವವಳು ಎಂದು ಕೊಂಡಾಡುತ್ತದೆ.

ಹಿಂದೂ ಧರ್ಮದ ಎಲ್ಲ ಮುಖ್ಯ ಪುರಾಣಗಳು ದೇವಿ ಯನ್ನು ಹೆಸರಿಸಿ ಪೂಜಿಸುತ್ತಾವಾದರೂ, ಈ ಪಠ್ಯ ಪ್ರಧಾನ ದೈವಿಕತೆಯಾಗಿ ಅವಳ ಸುತ್ತ ಕೇಂದ್ರಿತವಾಗಿದೆ. ದೇವಿ ಭಾಗವತಪುರಾಣವು ದೈವಿಕ ಸ್ತ್ರೀರೂಪವನ್ನು ಕೊಂಡಾಡುವ ಅತ್ಯಂತ ಮುಂಚಿನ ಭಾರತೀಯ ಪಠ್ಯವಲ್ಲ, 6ನೇ ಶತಮಾನದ ದೇವಿ ಮಾಹಾತ್ಮ್ಯ ದೇವಿಯನ್ನು ಪರಮೋನ್ನತವೆಂದು ಪ್ರತಿಪಾದಿಸುತ್ತದೆ, ಮತ್ತು ದೈವಿಕ ಸ್ತ್ರೀರೂಪದ ಪರಿಕಲ್ಪನೆ ಕ್ರಿ.ಶ. 2ನೇ ಶತಮಾನದ ವೇಳೆಗೆ ಅಸ್ತಿತ್ವದಲ್ಲಿತ್ತೆಂದು ಭಾರತದ ವಿಭಿನ್ನ ಭಾಗಗಳಲ್ಲಿನ ಹಲವು ಪುರಾತತ್ವ ಸಾಕ್ಷ್ಯಾಧಾರಗಳು ಸೂಚಿಸುತ್ತವೆ ಎಂದರು.


ದೇವಿ ಭಾಗವತ ಪುರಾಣದ ಕಾಲಮಾನವನ್ನು ವೈವಿಧ್ಯಮಯವಾಗಿ ನಿರ್ಧರಿಸಲಾಗಿದೆ. ಕೆಲವು ವಿದ್ವಾಂಸರು ಒಂದು ಮುಂಚಿನ ಕಾಲಮಾನವನ್ನು ಸೂಚಿಸಿದ್ದಾರೆ, ಅಂದರೆ ಕ್ರಿ.ಶ. 6ನೇ ಶತಮಾನಕ್ಕಿಂತ ಮೊದಲು. ಆದರೆ, ಇದಕ್ಕೆ ಅಷ್ಟು ವ್ಯಾಪಕ ಬೆಂಬಲ ಸಿಕ್ಕಿಲ್ಲ, ಮತ್ತು ಬಹುತೇಕ ವಿದ್ವಾಂಸರು ಇದರ ಕಾಲಮಾನ 9 ರಿಂದ 14 ನೇ ಶತಮಾನದ ನಡುವೆ ಎಂದು ನಿರ್ಧರಿಸಿದ್ದಾರೆ ಎಂದು ತಿಳಿಸಿದರು.


ಸೆ. 22 ರಿಂದ ಅ.2ರ ವಿಜಯದಶಮಿಯವರೆಗೂ ಪ್ರತಿ ದಿನ ಸಂಜೆ 7 ರಿಂದ 9ರವರೆಗೆ ದೇವಿ ಚರಿತೆಯ ಪಾರಾಯಣ ನಡೆಯಲಿದೆ. ದೇವಿ ಚರಿತೆಯನ್ನು ಮಲ್ಲಾಪುರ ಗೊಲ್ಲರಹಟ್ಟಿಯ ಸಿ.ಈರಣ್ಣ ಪಠಿಸಿದರೆ ಸಾಹಿತಿಗಳು ಹಾಗೂ ಜಿಲ್ಲಾ ಶರಣ ಸಾಹಿತ್ಯ ಪರಿಷತ್‍ನ ಕಾರ್ಯದರ್ಶಿಗಳಾದ ಹುರಳಿ ಬಸವರಾಜು ಚರೊತೆಯನ್ನು ಪ್ರವಾಚಿಸಲಿದರು. ಇವರೊಂದಿಗೆ ಆಯಿತೋಳಿನ ಜಾನಪದ ಕಲಾವಿದರಾದ ಜಿ.ಎನ್.ವಿರೂಪಾಕ್ಷಪ್ಪರವರಿಂದ ಹಾರ್ಮೋನಿಯಂ ಹಾಗೂ ಯಶವಂತಕುಮಾರ್ ತಬಲ ನುಡಿಸಿದರು.


ಈ ಸಂದರ್ಭದಲ್ಲಿ ಗಣಪತಿ ಶಾಸ್ತ್ರಿ, ತಿಪ್ಪೇಸ್ವಾಮಿ, ನಿರಂಜನ ಮೂರ್ತಿ ಸೇರಿದಂತೆ ಭಕ್ತ ಸಮೂಹ ಭಾಗವಹಿಸಿದ್ದರು.

Views: 27

Leave a Reply

Your email address will not be published. Required fields are marked *