Shivarajkumar Birthday: ಕರುನಾಡ ಚಕ್ರವರ್ತಿ ಡಾ.ಶಿವರಾಜಕುಮಾರ್ ಗೆ ಹುಟ್ಟುಹಬ್ಬದ ಸಂಭ್ರಮ

Happy Birthday Shivarajkumar: ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ (ಜುಲೈ 12) ಹುಟ್ಟುಹಬ್ಬ ಸಂಭ್ರಮ. 61 ವಸಂತಗಳನ್ನು ಪೂರೈಸಿದ ಕರುನಾಡ ಚಕ್ರವರ್ತಿ 62ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. 

ಬೆಂಗಳೂರು: ಸ್ಯಾಂಡಲ್‍ವುಡ್‍ನ ಹ್ಯಾಟ್ರಿಕ್ ಹೀರೋ, ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಗೆ (ಜುಲೈ 12) ಹುಟ್ಟುಹಬ್ಬ ಸಂಭ್ರಮ. 61 ವಸಂತಗಳನ್ನು ಪೂರೈಸಿದ ಕರುನಾಡ ಚಕ್ರವರ್ತಿ 62ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಸ್ಯಾಂಡಲ್‍ವುಡ್‍ ನಟ-ನಟಿಯರು ಮತ್ತು ಲಕ್ಷಾಂತರ ಅಭಿಮಾಗಳು ಸೋಷಿಯಲ್ ಮೀಡಿಯಾದಲ್ಲಿ ಶಿವಣ್ಣನಿಗೆ ಜನ್ಮದಿನದ ಶುಭಾಶಯ ಕೋರಿದ್ದಾರೆ.

ಪವರ್ ಸ್ಟಾರ್ ಪುನೀತ್ ರಾಜಕುಮಾರ್ ನಿಧನದಿಂದ ಕಳೆದ 3 ವರ್ಷ ಅದ್ದೂರಿಯಾಗಿ ಹುಟ್ಟುಹಬ್ಬ ಆಚರಿಸದಿದ್ದ ಶಿವಣ್ಣ ಈ ಬಾರಿ ಅಭಿಮಾನಿಗಳ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮಪಟ್ಟಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಸಾವಿರಾರು ಅಭಿಮಾನಿಗಳು ಮಾನ್ಯತಾ ಟೆಕ್​ ಪಾರ್ಕ್​ ಬಳಿಯಿರುವ ಶಿವಣ್ಣನ​ ಮನೆಮುಂದೆ ಜಮಾಯಿಸಿದ್ದರು.

ತಮ್ಮ ನೆಚ್ಚಿನ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕೆಂದು ಬಂದಿದ್ದ ಅಭಿಮಾನಿಗಳು ಶಿವಣ್ಣನ ಕೈಯಲ್ಲಿಯೇ ಕೇಕ್ ಕಟ್ ಮಾಡಿಸಿ ಖುಷಿಪಟ್ಟರು. ಶಿವಣ್ಣನ ಮನೆಸುತ್ತ ಪಟಾಕಿ ಸಿಡಿಸಿ, ಸಿಹಿ ಹಂಚುವ ಮೂಲಕ ಸಂಭ್ರಮಿಸಿದರು. ಬೆಂಗಳೂರಿನ ಪ್ರಮುಖ ಪ್ರದೇಶಗಳು ಸೇರಿದಂತೆ ಶಿವಣ್ಣನ ಮನೆಯ ಸುತ್ತಮುತ್ತ ಫ್ಲೆಕ್ಸ್, ಕಟೌಟ್‍ಗಳು ರಾರಾಜಿಸುತ್ತಿದ್ದವು.

ಘೋಸ್ಟ್ ಮತ್ತು ಜೈಲರ್‍ನಲ್ಲಿ ವಿಭಿನ್ನ ಪಾತ್ರ: ಶೀಘ್ರವೇ ಶಿವರಾಜಕುಮಾರ್ ಅಭಿನಯದ ಘೋಸ್ಟ್ ಮತ್ತು ಜೈಲರ್ ಸಿನಿಮಾಗಳು ಬಿಡುಗಡೆಯಾಗಲಿವೆ. ಈ 2 ಚಿತ್ರಗಳಲ್ಲಿ ಶಿವಣ್ಣ ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ.

ಹೊಸ ಚಿತ್ರದ ಟೈಟಲ್ ಬಿಡುಗಡೆ: ಶಿವಣ್ಣ ಹುಟ್ಟುಹಬ್ಬದ ಪ್ರಯುಕ್ತ ಇಂಡಿಯನ್ ಮೈಕಲ್ ಜಾಕ್ಸನ್ ಖ್ಯಾತಿಯ ಪ್ರಭುದೇವ ಕಾಂಬಿನೇಷನ್ ಇರುವ ಹೊಸ ಚಿತ್ರದ ಟೈಟಲ್ ಇಂದು ಅನಾವರಣವಾಗಲಿದೆ. ರಾಕ್‌ಲೈನ್ ವೆಂಕಟೇಶ್ ನಿರ್ಮಾಣದ ಈ ಸಿನಿಮಾವನ್ನು ಯೋಗರಾಜ್ ಭಟ್ ನಿರ್ದೇಶಿಸಲಿದ್ದು, ಹರಿಕೃಷ್ಣ ಸಂಗೀತ ನೀಡಲಿದ್ದಾರೆ.

Source : https://zeenews.india.com/kannada/entertainment/happy-birthday-shivarajkumar-century-star-shivarajkumar-celebrating-his-62nd-birthday-today-145165

Leave a Reply

Your email address will not be published. Required fields are marked *