RBIನಿಂದ ಮಧ್ಯಮ ವರ್ಗದವರಿಗೆ ಶಾಕ್ : ಸಾಲ, EMI ಮೇಲೆ ಹೊರೆ ಜಾಸ್ತಿ..!

ನವದೆಹಲಿ: ಆರ್ಬಿಐ ಕಳೆದ ಮೇ ತಿಂಗಳಿನಿಂದ ಸತತವಾಗಿ ಆರನೇ ಬಾರಿಗೂ ಬಡ್ಡಿ ದರವನ್ನು ಏರಿಕೆ ಮಾಡಿದೆ. ಬಡ್ಡಿ ದರವನ್ನು 250 bps ನಷ್ಟು ಆರ್ಬಿಐ ಹೆಚ್ಚಳ ಮಾಡಿದೆ. ವಿತ್ತೀಯ ನೀತಿ ಸಮಿತಿಯು ಆರ್ಬಿಐ ನ ಮೂವರು ಸದಸ್ಯರು ಮತ್ತು ಮೂವರು ಬಾಹ್ಯ ಸದಸ್ಯರನ್ನು ಒಳಗೊಂಡಿದ್ದು, ಪ್ರಮುಖ ಸಾಲದ ದರ ಅಥವಾ ರೆಪೊ ದರವನ್ನು 6.50%ಕ್ಕೆ ಏರಿಸಿದೆ.

ಆರ್ಬಿಐ ಆರನೇ ಸಾರಿ ಸಾಲದ ಬಡ್ಡಿ ದರ ಹೆಚ್ಚಳವಾಗಿರುವುದು ದೇಶದ ಮಧ್ಯಮ ವರ್ಗದವರ ಮೇಲೆ ಹೆಚ್ಚು ಹೊರೆಯಾಗಲಿದೆ ಎಂದು ತಜ್ಞರು ಹೇಳಿದ್ದಾರೆ. ಇದರಿಂದಾಗಿ ಪ್ರತಿ ತಿಂಗಳು ಇಎಂಐ ಕಟ್ಟುವವರು ಸಂಕಷ್ಟಕ್ಕೆ ಸಿಲುಕುತ್ತಾರೆಂಬ ಮಾತುಗಳು ಕೇಳಿ ಬರುತ್ತಿವೆ.

ಈ ಬಗ್ಗೆ ಮಾತನಾಡಿರಯವ ಆರ್ಬಿಐ ಗವರ್ನರ್ ಶಕ್ತಿಕಾಂತ್ ದಾಸ್, ಹಣದುಬ್ಬರವು ಅತ್ಯಂತ ಗಂಭೀರ ವಿಚಾರವಾಗಿದೆ. ನಾವೂ ಹಣದುಬ್ಬರದಲ್ಲಿ ನಿರ್ಣಾಯಕವಾಗಿ ಯಾವುದು ಹೆಚತಚು ಉತ್ತಮ ಎಂಬುದನ್ನು ನೋಡಬೇಕಾಗಿದೆ. ಹಣದುಬ್ಬರವನ್ನು ತಗ್ಗಿಸುವ ನಮ್ಮ ಬದ್ಧತೆಯಲ್ಲಿ ನಾವೂ ಅಚಲವಾಗಿ ಉಳಿಯಬೇಕಾಗಿದೆ ಎಂದಿದ್ದಾರೆ.

The post RBIನಿಂದ ಮಧ್ಯಮ ವರ್ಗದವರಿಗೆ ಶಾಕ್ : ಸಾಲ, EMI ಮೇಲೆ ಹೊರೆ ಜಾಸ್ತಿ..! first appeared on Kannada News | suddione.

from ರಾಷ್ಟ್ರೀಯ ಸುದ್ದಿ – Kannada News | suddione https://ift.tt/GYPUAXI
via IFTTT

Leave a Reply

Your email address will not be published. Required fields are marked *