Success Story: UPSCಯಲ್ಲಿ ಸಾಧನೆಗೈದು IAS-IPS ಆಗಿರುವ ಒಡಹುಟ್ಟಿದವರು

UPSC Success Story: ಕಬ್ಬಿಣದ ಕಡಲೆಯಾಗಿರುವ ಯುಪಿಎಸ್‌ಸಿ ಸಿವಿಲ್ ಸರ್ವೀಸಸ್ ಪರೀಕ್ಷೆಯನ್ನು ಒಟ್ಟಿಗೆ ಕ್ರಾಕ್ ಮಾಡಿದ ಈ 4 ಒಡಹುಟ್ಟಿದವರ ಯಶಸ್ಸಿನ ಕಥೆಯನ್ನು ಓದಿರಿ.

ನವದೆಹಲಿ: ನಾವು ಪ್ರತಿದಿನ ಅನೇಕ UPSC ಯಶಸ್ಸಿನ ಕಥೆಗಳನ್ನು ಓದುತ್ತೇವೆ. ಯುಪಿಎಸ್‌ಸಿ ಪರೀಕ್ಷೆಯಲ್ಲಿ ಪ್ರತಿಯೊಬ್ಬ ಐಎಎಸ್ ಮತ್ತು ಐಪಿಎಸ್ ಅಧಿಕಾರಿ ಎದುರಿಸುವ ವಿವಿಧ ಅಡೆತಡೆಗಳ ಬಗ್ಗೆ ನಾವು ಓದುತ್ತೇವೆ. ಅವರ ಸಮರ್ಪಣೆ ಮತ್ತು ಶ್ರಮ ಅನೇಕರಿಗೆ ಪ್ರೇರಣೆಯಾಗಿದೆ. ಒಡಹುಟ್ಟಿದ ಅಕ್ಕ-ತಂಗಿಯರು ಯುಪಿಎಸ್‍ಸಿ ಪರೀಕ್ಷೆಯಲ್ಲಿ ಸಾಧನೆಗೈದು ಐಎಎಸ್-ಐಪಿಎಸ್ ಆಗಿದ್ದಾರೆ.   

ಸಿಮ್ರಾನ್ ಮತ್ತು ಸೃಷ್ಟಿ ಉತ್ತರಪ್ರದೇಶದ ಆಗ್ರಾದ ಇಬ್ಬರು ಸಹೋದರಿಯರು. ಇವರಿಬ್ಬರೂ 2020ರಲ್ಲಿ UPSC ಸಿವಿಲ್ ಸರ್ವಿಸಸ್ ಪರೀಕ್ಷೆಯಲ್ಲಿ ತೇರ್ಗಡೆಯಾದರು. ಸಿಮ್ರಾನ್ ತನ್ನ 3ನೇ ಪ್ರಯತ್ನದಲ್ಲಿ 474 ರ್ಯಾಂಕ್ ಪಡೆದುಕೊಂಡರೆ, ಅವರ ತಂಗಿ ಸೃಷ್ಟಿ 373 ರ್ಯಾಂಕ್ ನೊಂದಿಗೆ ತನ್ನ ಮೊದಲ ಪ್ರಯತ್ನದಲ್ಲಿ IAS ಪರೀಕ್ಷೆಯಲ್ಲಿ ಯಶಸ್ಸು ಕಂಡರು.

ಈ ಸಹೋದರಿಯರು ಜೋಡಿ ಉತ್ತರಪ್ರದೇಶದ ಆಗ್ರಾದವರು. ಅಂಕಿತಾ ಜೈನ್ ಐಎಎಸ್ ಪರೀಕ್ಷೆಯಲ್ಲಿ 3ನೇ ರ್ಯಾಂಕ್ ಗಳಿಸಿದ್ರೆ, ಅವರ ಸಹೋದರಿ ವೈಶಾಲಿ 21ನೇ ರ್ಯಾಂಕ್ ಗಳಿಸಿದ್ದಾರೆ. ಅಂಕಿತಾ ಐಪಿಎಸ್ ಅಧಿಕಾರಿ ಅಭಿನವ್ ತ್ಯಾಗಿ ಅವರನ್ನು ವಿವಾಹವಾಗಿದ್ದಾರೆ.

ಅಂಜಲಿ ಮೀನಾ ಮತ್ತು ಅನಾಮಿಕಾ ಮೀನಾ ರಾಜಸ್ಥಾನದ ದೌಸಾ ಜಿಲ್ಲೆಯಿವರು. 2019ರಲ್ಲಿ ಮೀನಾ ಸಹೋದರಿಯರು ತಮ್ಮ ಮೊದಲ ಪ್ರಯತ್ನದಲ್ಲಿ UPSC CSEಯನ್ನು ಭೇದಿಸಿದರು. ಅನಾಮಿಕಾ 116ನೇ ರ್ಯಾಂಕ್ ಹಾಗೂ ಅಂಜಲಿ 494ನೇ ರ್ಯಾಂಕ್ ಗಳಿಸಿದ್ದಾರೆ. ವಿಶೇಷವೆಂದರೆ ಅವರ ತಂದೆ ರಮೇಶ್ ಚಂದ್ರ ಮೀನಾ ಕೂಡ ತಮಿಳುನಾಡು ಕೇಡರ್‌ನ ಐಎಎಸ್ ಅಧಿಕಾರಿ.

ಈ ಸಹೋದರ ಜೋಡಿಯು ರಾಜಸ್ಥಾನದ ಜುಂಜುನು ಮೂಲದವರು. ಪಂಕಜ್ ಮತ್ತು ಅಮಿತ್ ಕುಮಾವತ್ 2019ರಲ್ಲಿ UPSC CSEಅನ್ನು ಭೇದಿಸಿದರು. ಇವರ ತಂದೆ ಟೈಲರ್ ಆಗಿ ಕೆಲಸ ಮಾಡುತ್ತಿದ್ದರು. ಇಂತಹ ವಿನಮ್ರ ಕುಟುಂಬದಿಂದ ಬಂದ ಅವರು UPSC ಪರೀಕ್ಷೆಗೆ ಯಾವುದೇ ತರಬೇತಿ ಪಡೆಯಲು ಅವಕಾಶವಿರಲಿಲ್ಲ. ವಿಶೇಷವೆಂದರೆ ಕುಮಾವತ್ ಸಹೋದರರು ಈ ಮೊದಲೇ 2018ರಲ್ಲಿ UPSC ಪರೀಕ್ಷೆಯಲ್ಲಿ ಯಶಸ್ಸು ಸಾಧಿಸಿದ್ದರು. ಆಗ ಪಂಕಜ್ ಮತ್ತು ಅಮಿತ್ ಕ್ರಮವಾಗಿ 443 ಮತ್ತು 600 ರ್ಯಾಂಕ್ ಪಡೆದುಕೊಂಡಿದ್ದರು. ಆದರೆ ಮತ್ತೊಮ್ಮೆ ಪ್ರಯತ್ನಿಸಲು ನಿರ್ಧರಿಸಿದ ಅವರು 2019ರಲ್ಲಿ ಪಂಕಜ್ 423ನೇ ರ್ಯಾಂಕ್ ಮತ್ತು ಅಮಿತ್ 424ನೇ ರ್ಯಾಂಕ್ ಪಡೆದರು.

Source : https://zeenews.india.com/kannada/photo-gallery/meet-siblings-who-cracked-the-upsc-civil-services-exam-together-141659/upsc-success-story-141661

Leave a Reply

Your email address will not be published. Required fields are marked *