ಕಾಯಕರತ್ನ ಪ್ರಶಸ್ತ್ರಿಗೆ ಟಾರ್ಗೇಟ್ ಗ್ರೂಪ್ನ ಮುಖ್ಯಸ್ಥರಾದ ಸಿದ್ದರಾಜು ಜೋಗಿ ಆಯ್ಕೆ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಏ. ೨೭ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್‌ವತಿಯಿಂದ ನೀಡುವಂತ ಕಾಯಕರತ್ನ ಪ್ರಶಸ್ತ್ರಿಗೆ ಚಿತ್ರದುರ್ಗ ಜಿಲ್ಲೆಯಿಂದ ೨೦೨೫ನೇ ಸಾಲಿಗೆ ಚಿತ್ರದುರ್ಗದಲ್ಲಿ ವಿವಿಧೆಡೆ ಸಸಿಗಳನ್ನು ನಡೆವುದರ ಮೂಲಕ ಚಿತ್ರದುರ್ಗವನ್ನು ಹಸಿರಾಗಿಸುವ ಕನಸನ್ನು
ಕಂಡಿರುವ ಟಾರ್‌ಗೇಟ್ ಗ್ರೂಪ್‌ನ ಮುಖ್ಯಸ್ಥರಾದ ಸಿದ್ದರಾಜು ಜೋಗಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಜಿಲ್ಲಾ ವೈಜ್ಞಾನಿಕ
ಪರಿಷತ್‌ನ ಅಧ್ಯಕ್ಷರಾದ ನಾಗರಾಜ್ ಸಂಗಂ ಹಾಗೂ ಕಾರ್ಯದರ್ಶಿ ಪಿ.ಲೋಕೇಶ್ ತಿಳಿಸಿದ್ದಾರೆ.

ಈ ಬಗ್ಗೆ ಹೇಳಿಕೆಯನ್ನು ನೀಡಿರುವ ಅವರು ಸಿದ್ದರಾಜು ಜೋಗಿಯವರ ತಂಡ ೨೦೧೬ರಲ್ಲಿ ಚಿತ್ರದುರ್ಗದ ವಿವಿಧೆಡೆಗಳಲ್ಲಿ ಸಸಿಗಳನ್ನು ನಡುವ ಕಾರ್ಯಕ್ಕೆ ಮುಂದಾಗಿತ್ತು ಇದಕ್ಕೆ ನಗರದ ಜನತೆಯೂ ಸಹಾ ಸಹಕಾರವನ್ನು ನೀಡಿದ್ದರ ಫಲವಾಗಿ ಇಂದು ಸುಮಾರು ೪೦ ಸಾವಿರ ಸಸಿಗಳನ್ನು ನಗರದ ವಿವಿಧ ಬಡಾವಣೆ, ಶಾಲಾ-ಕಾಲೇಜುಗಳ ಆವರಣ, ರಸ್ತೆಗಳ ಬದಿಗಳಲ್ಲಿ, ನಡೆವುದರ ಮೂಲಕ ಅವುಗಳ ಬೆಳವಣಿಗೆಗೆ ವಾರದಲ್ಲಿ ಒಂದು ದಿನ ಇದಕ್ಕಾಗಿ ಮೀಸಲಿಟ್ಟು ಅವುಗಳನ್ನು ಬೆಳಸಿದ್ದಾರೆ. ಇದರ ಅಂಗವಾಗಿ ಚಿತ್ರದುರ್ಗದಲ್ಲಿ ಟಾರ್‌ಗೆಟ್ ೧೦ ಥೌಜೆಂಡ್ ಎಂಬ ಗ್ರೂಪ್ ಮಾಡಿಕೊಂಡು ಸಸಿಗಳನ್ನು ನೆಟ್ಟು ಅವುಗಳನ್ನು ಬೆಳಸುತ್ತಿದ್ದಾರೆ ಇವರ ಕಾಯಕವನ್ನು
ಗುರುತಿಸಿದ ಕರ್ನಾಟಕ ರಾಜ್ಯ ವೈಜ್ಞಾನಿಕ ಸಂಶೋಧನಾ ಪರಿಷತ್ ೨೦೨೫ನೇ ಸಾಲಿಗೆ ಇವರನ್ನು ಕಾಯಕ ರತ್ನ ಪ್ರಶಸ್ತಿಗೆ ಆಯ್ಕೆ
ಮಾಡಿದೆ ಎಂದು ತಿಳಿಸಿದ್ದಾರೆ.


ಈ ಪ್ರಶಸ್ತಿ ಪ್ರಧಾನ ಸಮಾರಂಭವೂ ಮೇ.೧ ರಂದು ಬಾಗಲಕೋಟೆಯ ರಬಕವಿ ಗ್ರಾಮದಲ್ಲಿ ಬೆಳ್ಳಿಗೆ ೧೧ಕ್ಕೆ ನಡೆಯಲಿದೆ. ಈ
ಹಿಂದೆ ಇದೇ ರೀತಿಯ ಪ್ರಶಸ್ತಿಗೆ ಚಿತ್ರದುರ್ಗದಿಂದ ಟೈಗರ್ ತಿಪ್ಪೇಸ್ವಾಮಿ, ಕೆ.ಎಸ್.ಆರ್.ಟಿ.ಸಿಯ ಚಾಲಕ ಶಾಂತಕುಮಾರ್
ಹಾಗೂ ಕೋಟೆ ವಾಯು ವಿಹಾರದ ಅಧ್ಯಕ್ಷರಾದ ಸತ್ಯಣ್ಣ ರವರಿಗೆ ಪ್ರಧಾನ ಮಾಡಲಾಗಿತ್ತು. ಮೇ೧ ರಂದು ನಡೆಯಲಿರುವ ಈ
ಕಾರ್ಯಕ್ರಮದಲ್ಲಿ ಚಿತ್ರದುರ್ಗದ ಜಿಲ್ಲಾ ವೈಜ್ಞಾನಿಕ ಸಂಶೋಧನಾ ಪರಿಷತ್ ನ ಪದಾಧಿಕಾರಿಗಳು ಅಭಿಮಾನಿಗಳು ಭಾಗವಹಿಸಲಿದ್ದಾರೆ
ಎಂದು ನಾಗರಾಜ್ ಸಂಗಂ ತಿಳಿಸಿದ್ದಾರೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *