ಚಿತ್ರದುರ್ಗ ಆ. 31
ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್
ನವೆಂಬರ್ ಕ್ರಾಂತಿ ಏನೇನೂ ಇಲ್ಲ. ಎಲ್ಲವೂ ಬಿಜೆಪಿ ಊಹೆ.ಬಿಜೆಪಿಯಲ್ಲಿ ಐದು ಗುಂಪುಗಳಾಗಿವೆ ಅದನ್ನು ನೋಡಿಕೊಳ್ಳಲಿ.2028ರವರೆಗೆ ಸಿದ್ಧರಾಮಯ್ಯ ಮುಖ್ಯಮಂತ್ರಿ ಆಗಿರುತ್ತಾರೆ..ರಾಜ್ಯದಲ್ಲಿ ಈಗ ಮುಖ್ಯಮಂತ್ರಿ ಕುರ್ಚಿ ಖಾಲಿ ಇಲ್ಲ.ಸಂಪುಟ ಪುನರಚನೆ ಚಿಂತನೆ ಇದೆ.ಇದರ ಬಗ್ಗೆ ಹೈಕಮಾಂಡ್ ತೀರ್ಮಾನಿಸುತ್ತದೆ ಎಂದು ಅಲ್ಪಸಂಖ್ಯಾತ ಕಲ್ಯಾಣ ಮತ್ತು ವಸತಿ ಸಚಿವ ಬಿ.ಝಡ್. ಜಮೀರ್ ಅಹಮದ್‍ಖಾನ್ ತಿಳಿಸಿದರು.
ಚಿತ್ರದುರ್ಗ ನಗರಕ್ಕೆ ಭೇಟಿ ನೀಡಿದ್ದ ಅವರು ಭೇಟಿಯಾದ ಮಾಧ್ಯಮದವರೊಂದಿಗೆ ಮಾತನಾಡಿದ ಅವರುಸಿದ್ದರಾಮಯ್ಯ ಹಾಗೂ ಡಿ.ಕೆ ಶಿವಕುಮಾರ್ ಮಧ್ಯೆ ಸಿಎಂ ವಾರ್ ಕುರಿತು ಪ್ರತಿಕ್ರಿಯಿಸಿ ಸಿಎಂ ಆಗಬೇಕು ಅಂತಾ ಎಲ್ಲರಿಗೂ ಆಸೆ ಇದೆ… ಸಿದ್ಧರಾಮಯ್ಯ ಸಿಎಂ ಕುರ್ಚಿಯಲ್ಲಿ ಕೂತಿದಾರೆ.2028ರ ವರೆಗೆ ಅವರೇ ಸಿಎಂ ಆಗಿ ಮುಂದುವರಿಯುತ್ತಾರೆ.. ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಅಂತಾ ನಮಗೂ ಆಸೆ ಇದೆ.2028ರ ನಂತರ ಡಿ.ಕೆ ಶಿವಕುಮಾರ್ ಸಿಎಂ ಆಗಬೇಕು ಅಂತಾ ನಾವೂ ಬಯಸುತ್ತೇವೆ ಎಂದರು.
ನವೆಂಬರ್‍ನಲ್ಲಿ ಕ್ರಾಂತಿ ಇಲ್ಲ.ಏನೂ ಇಲ್ಲ.ಸಿದ್ದರಾಮಯ್ಯ ಡಿ.ಕೆ ಶಿವಕುಮಾರ್ ಅಣ್ಣ ತಮ್ಮಂದಿರಂತೆ ಜೊತೆಗೇ ಹೋಗುತ್ತಾರೆ.ಡಿ.ಕೆ ಶಿವಕುಮಾರ್ ಸಿಎಂ ಆಗದಿದ್ದರೆ ಬಿಜೆಪಿಗೆ ಹೋಗುತ್ತಾರೆ ಎಂಬ ವಿಚಾರಕ್ಕೆ ಪ್ರತಿಕ್ರಿಯಿಸಿ ನಾನೂ ಬೇರೆ ಪಕ್ಷದಿಂದ ಬಂದಿರಬಹುದು.ನಾನು ಜನತಾದಳದಿಂದ ಕಾಂಗ್ರೆಸ್ ಪಕ್ಷಕ್ಕೆ ಬಂದಿರೋದು ಆದರೆ ಡಿ.ಕೆ ಶಿವಕುಮಾರ್ ಬ್ಲಡ್ಡೇ ಕಾಂಗ್ರೆಸ್.ಅದನ್ನು ಚೇಂಚ್ ಮಾಡಕ್ಕೆ ಆಗಲ್ಲ ಎಂದರು.
Views: 16