
ವಿಜಯನಗರ: ಹಗರಿಬೊಮ್ಮನಹಳ್ಳಿಯಲ್ಲಿ ಇಂದು ಕಾಂಗ್ರೆಸ್ ಭೀಮಾ ನಾಯಕ ‘ಸಾರ್ಥಕ ನಮನ’ ಎಂಬ ಕಾರ್ಯಕ್ರಮವನ್ನು ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ ಅವರು, ಮಾತನಾಡುತ್ತಾ ಸಿಎಂ ಬೊಮ್ಮಾಯಿ ಅವರ ಮೇಲೆ ಕಿಡಿಕಾರಿದ್ದಾರೆ. ಪ್ರಧಾನಿ ಮೋದಿಯವರನ್ನು ಕಂಡರೆ ಗಢ.. ಗಢ.. ಅಂತ ನಡುಗುತ್ತೀರಿ ಎಂದು ಗೇಲಿ ಮಾಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಮುಂದೆ ಸಿಎಂ ಬೊಮ್ಮಾಯಿ ಅವರು ನಾಯಿ ಮರಿ ಥರ ಇರುತ್ತೀರಾ. ಅವರ ಮುಂದೆ ಗಢ ಗಢ ಅಂತ ನಡುಗುತ್ತೀರಾ. ಸಿಎಂ ಬಸವರಾಜ್ ಬೊಮ್ಮಾಯಿ ಅವರಿಗೆ ತಾಕತ್ ಇದ್ರೆ 5,495 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರದಿಂದ ತರಬೇಕಾಗಿತ್ತು. ಅದು ಲ್ಯಾಪ್ಸ್ ಆಯಿತು. ಕೇಂದ್ರ ಸಚಿವೆ ನಿರ್ಮಲಾ ಸೀತರಾಮನ್ ಅವರಿಂದ ನಮ್ಮ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದಿದ್ದಾರೆ.
15ನೇ ಹಣಕಾಸು ಆಯೋಗದ ಪ್ರಕಾರ 5,495 ಕೋಟಿ ರೂಪಾಯಿಯನ್ನು ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ಕೊಡಬೇಕಾಗಿತ್ತು. ಆದ್ರೆ ನಮ್ಮ ರಾಜ್ಯದಿಂದ ಹೋದ ಹಣಕಾಸು ಸಚಿವೆ ನಿರ್ಮಲಾ ಸೀತರಾಮನ್ ಅವರಿಂದ ಈ ಅನುದಾನ ಕೊಡಲು ಸಾಧ್ಯವಿಲ್ಲ ಎಂದಿದ್ದಾರೆ.
The post ಮೋದಿ ಕಂಡರೆ ಗಢ..ಗಢ ಅಂತೀರಾ : ಸಿಎಂ ಬಗ್ಗೆ ಸಿದ್ದರಾಮಯ್ಯ ಗೇಲಿ..! first appeared on Kannada News | suddione.
from ರಾಜ್ಯ ಸುದ್ದಿ – Kannada News | suddione https://ift.tt/HLIjEBN
via IFTTT