ವಿಶ್ವ ಸುಂದರಿ ಸ್ಪರ್ಧೆಗೆ ಈ ಬಾರಿ ಭಾರತದಿಂದ ಕಣಕ್ಕೆ ಇಳಿಯುತ್ತಿರುವ ಉಡುಪಿಯ ಸುಂದರಿ ಸಿನಿ ಶೆಟ್ಟಿ.

30 ದಶಕಗಳ ಬಳಿಕ ವಿಶ್ವ ಸುಂದರಿ ಸ್ಪರ್ಧೆಯನ್ನು ಭಾರತದಲ್ಲಿ ಆಯೋಜಿಸಲಾಗಿದೆ. 28 ವರ್ಷಗಳ ಹಿಂದೆ ಬೆಂಗಳೂರಿನಲ್ಲಿ ಮೊದಲ ಬಾರಿಗೆ ಈ ಸ್ಪರ್ಧೆ ನಡೆದಿತ್ತು. ಈ ವರ್ಷ ಮಿಸ್ ವರ್ಲ್ಡ್ ಗ್ರ್ಯಾಂಡ್ ಫಿನಾಲೆ ಮುಂಬೈನ ಜಿಯೋ ವರ್ಲ್ಡ್ ಕನ್ವೆನ್ಷನ್ ಸೆಂಟರ್‌ನಲ್ಲಿ ಮಾರ್ಚ್ 9 ರಂದು ಅದ್ಭುತ ಕಾರ್ಯಕ್ರಮದೊಂದಿಗೆ ಮುಕ್ತಾಯಗೊಳ್ಳಲಿದೆ.

71ನೇ ವಿಶ್ವ ಸುಂದರಿ ಸ್ಪರ್ಧೆ ಆರಂಭವಾಗಿದೆ. ಈ ಈವೆಂಟ್​​​​ ಫೆಬ್ರವರಿ 18 ರಿಂದ ಮಾರ್ಚ್ 9 ರವರೆಗೆ ಭಾರತದಲ್ಲಿ ನಡೆಯಲಿದೆ. ಸುಮಾರು 28 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಿದೆ. ಈ ಆಚರಣೆಗಳು ನವದೆಹಲಿಯಲ್ಲಿ ನಡೆಯುತ್ತಿವೆ. ಈ ಬಾರಿಯ ವಿಶ್ವ ಸುಂದರಿ ಸ್ಪರ್ಧೆಯಲ್ಲಿ ಭಾರತವನ್ನು ಕನ್ನಡತಿ ಸಿನಿ ಶೆಟ್ಟಿ (21) ಪ್ರತಿನಿಧಿಸುತ್ತಿದ್ದಾರೆ.

ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (ಐಟಿಡಿಸಿ) ಮಂಗಳವಾರ 71ನೇ ವಿಶ್ವ ಸುಂದರಿ ಕಾರ್ಯಕ್ರಮದ ಉದ್ಘಾಟನೆಯನ್ನು ಗುರುತಿಸಲು ನವದೆಹಲಿಯ ದಿ ಆಶಿಕ್‌ನಲ್ಲಿ ‘ದಿ ಓಪನಿಂಗ್ ಸೆರಮನಿ’ ಮತ್ತು ‘ಇಂಡಿಯಾ ವೆಲ್ಕಮ್ಸ್ ದಿ ವರ್ಲ್ಡ್ ಗಾಲಾ’ ಅನ್ನು ಆಯೋಜಿಸಲಿದೆ. ಫ್ಯಾಷನ್ ಡಿಸೈನರ್ ಅರ್ಚನಾ ಕೊಚ್ಚರ್ ಅವರು 71 ನೇ ವಿಶ್ವ ಸುಂದರಿ ಸ್ಪರ್ಧೆಯ ಅಧಿಕೃತ ಫ್ಯಾಷನ್ ಡಿಸೈನರ್ ಆಗಿದ್ದಾರೆ.

ಕರ್ನಾಟಕದ ಉಡುಪಿ ಮೂಲದ ಸಿನಿ ಶೆಟ್ಟಿ ಈ ಹಿಂದೆ ಮುಂಬೈನಲ್ಲಿ ನಡೆದ ‘ಫೆಮಿನಾ ಮಿಸ್ ಇಂಡಿಯಾ ವರ್ಲ್ಡ್‌-2022’ ‘ಮಿಸ್ ಇಂಡಿಯಾ’ ಕಿರೀಟ ಮುಡಿಗೇರಿಸಿಕೊಂಡಿದ್ದರು. ಸಿನಿ ಶೆಟ್ಟಿ ಅಕೌಂಟಿಂಗ್ ಮತ್ತು ಫೈನಾನ್ಸ್‌ನಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದಾರೆ. ಭರತನಾಟ್ಯ ನೃತ್ಯದಲ್ಲೂ ತರಬೇತಿ ಪಡೆದಿದ್ದಾರೆ.

ಪ್ರಸ್ತುತ ಅವರು ಮಾರ್ಕೆಟಿಂಗ್‌ನಲ್ಲಿ ಕೆಲಸ ಮಾಡುತ್ತಿದ್ದಾರೆ. ಸುಮಾರು 28 ವರ್ಷಗಳ ನಂತರ ಭಾರತವು ವಿಶ್ವ ಸುಂದರಿ ಸ್ಪರ್ಧೆಯನ್ನು ಆಯೋಜಿಸಲಿದೆ ಎಂದು ಸಿನಿ ಶೆಟ್ಟಿ ಸಂತಸ ವ್ಯಕ್ತಪಡಿಸಿದರು.

ಇದುವರೆಗೆ ಭಾರತದ ಆರು ಮಹಿಳೆಯರು ವಿಶ್ವ ಸುಂದರಿ ಕಿರೀಟವನ್ನು ಗೆದ್ದಿದ್ದಾರೆ. ರೀಟಾ ಫರಿಯಾ 1966 ರಲ್ಲಿ ಮೊದಲ ಬಾರಿಗೆ ಪ್ರತಿಷ್ಠಿತ ವಿಶ್ವ ಸುಂದರಿ ಪ್ರಶಸ್ತಿಯನ್ನು ಭಾರತಕ್ಕೆ ತಂದರು. 1994 ರಲ್ಲಿ ಐಶ್ವರ್ಯಾ ರೈ, 1997 ರಲ್ಲಿ ಡಯಾನಾ ಹೇಡನ್, 1999 ರಲ್ಲಿ ಯುಕ್ತಾ ಮುಖಿ ವಿಶ್ವ ಸುಂದರಿ ಕಿರೀಟವನ್ನು ಪಡೆದರು. 2006ರಲ್ಲಿ ಪ್ರಿಯಾಂಕಾ ಚೋಪ್ರಾ ಮತ್ತು 2017ರಲ್ಲಿ ಮಾನುಷಿ ಚಿಲ್ಲರ್ ಈ ಸಾಧನೆ ಮಾಡಿದವರಲ್ಲಿ ಪ್ರಮುಖರು.

ಈ ಸಮಾರಂಭಗಳನ್ನು 1951 ರಲ್ಲಿ ಯುನೈಟೆಡ್ ಕಿಂಗ್‌ಡಮ್‌ನಲ್ಲಿ ಎರಿಕ್ ಮೋರ್ಲೆ ಪ್ರಾರಂಭಿಸಿದರು. ಆ ಸಮಯದಲ್ಲಿ ಅವರು ದೂರದರ್ಶನ ನಿರೂಪಕರಾಗಿದ್ದರು. ಈ ಸ್ಪರ್ಧೆಗಳನ್ನು ಎರಿಕ್ ಮೊರ್ಲೆಯವರು ಹೆಚ್ಚು ಪ್ರಚಾರ ಮಾಡಿದರು. ಅಂದಿನಿಂದ ಪ್ರತಿ ವರ್ಷ ಈ ಸ್ಪರ್ಧೆಗಳು ಅತ್ಯಂತ ಅದ್ಧೂರಿಯಾಗಿ ನಡೆಯುತ್ತಿವೆ.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *