Smartphone ಬಳಕೆದಾರರೇ, ತಕ್ಷಣವೇ‌ ಈ ಕೆಲಸ ಮಾಡಿ.

News Rules 2024: ಮುಂದಿನ ವರ್ಷ 2024 ಜನವರಿ 1ರಿಂದ ಸ್ಮಾರ್ಟ್‌ ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳಾಗಲಿವೆ. ಈ ಬದಲಾವಣೆಗಳು ಸ್ಮಾರ್ಟ್‌ಫೋನ್ ಬಳಕೆದಾರರ ಮೇಲೆ ನೇರ ಪರಿಣಾಮ ಬೀರಬಹುದು.

 News Rules 2024: ಹೊಸ ವರ್ಷದ ಸಂಭ್ರಮಾಚರಣೆಗೆ ದಿನಗಣನೆ ಶುರುವಾಗಿದೆ.‌ ಈ ನಡುವೆ ಸ್ಮಾರ್ಟ್‌ಫೋನ್ ಬಳಕೆಗೆ ಹೊಸ ವರ್ಷದೊಂದಿಗೆ ಅನೇಕ ಹೊಸ ನಿಯಮಗಳು ಬರುತ್ತಿವೆ. 2024ರ ಜನವರಿ 1ರಿಂದ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಕೆಲವು ಪ್ರಮುಖ ಬದಲಾವಣೆಗಳು ಆಗಲಿವೆ. ಈ ಬದಲಾವಣೆಗಳು ನಿಮ್ಮ ಫೋನ್ ಮೇಲೆ ನೇರ ಪರಿಣಾಮ ಬೀರಬಹುದು. ಆದ್ದರಿಂದ, ಜನವರಿ 1ಕ್ಕೆ ಮೊದಲೇ ಈ 3 ಪ್ರಮುಖ ಕೆಲಸಗಳನ್ನು ಮಾಡಿ ಮುಗಿಸಬಿಟ್ಟರೆ ಒಳ್ಳೆಯದು.

ನಿಷ್ಕ್ರಿಯ UPI ಐಡಿ ಮತ್ತು ಸಂಖ್ಯೆಗಳಿಗೆ ಕುತ್ತು: 
ಭಾರತೀಯ ರಾಷ್ಟ್ರೀಯ ಪಾವತಿ ನಿಗಮ (NPCI) ಮಹತ್ವದ ನಿರ್ಧಾರ ಕೈಗೊಂಡಿದೆ. Google Pay,Paytm, Phonepe ಮತ್ತು ಬ್ಯಾಂಕ್‌ಗಳಂತಹ ಪಾವತಿ ಅಪ್ಲಿಕೇಶನ್‌ಗಳನ್ನು ಬಳಸುತ್ತಿರುವವರ ಪೈಕಿ UPI ಐಡಿಗಳು ಮತ್ತು ಒಂದು ವರ್ಷಕ್ಕೂ ಹೆಚ್ಚು ಕಾಲ ಸಕ್ರಿಯವಾಗಿರದ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಬೇಕೆಂದು ಭಾರತೀಯ ರಾಷ್ಟ್ರೀಯ ಪಾವತಿ ನಿಗಮ ಸೂಚನೆ ನೀಡಿದೆ. ಇದರರ್ಥ ಕಳೆದ ಒಂದು ವರ್ಷದಲ್ಲಿ ನಿಮ್ಮ UPI ಐಡಿಯೊಂದಿಗೆ ನೀವು ಯಾವುದೇ ವಹಿವಾಟು ಮಾಡದಿದ್ದರೆ, ನಿಮ್ಮ UPI ಐಡಿಯನ್ನು 31ನೇ ಡಿಸೆಂಬರ್ 2023ರ ಬಳಿಕ ಬಂದ್ ಮಾಡಲಾಗುವುದು. ಅರ್ಥಾತ್ 01 ಜನವರಿ 2024ರಿಂದ ಇಂತಹ ಯುಪಿಐ ಐಡಿಗಳು ಕಾರ್ಯನಿರ್ವಹಿಸುವುದಿಲ್ಲ.

ಸಿಮ್ ಕಾರ್ಡ್‌ಗೂ ಕಂಡೀಷನ್ಸ್: 
ಭಾರತ ಸರ್ಕಾರವು ಹೊಸ ದೂರಸಂಪರ್ಕ ಮಸೂದೆ 2023 ಅನ್ನು ಅಂಗೀಕರಿಸಿದೆ. ಈ ಮಸೂದೆ ಶೀಘ್ರವೇ ಕಾನೂನಾಗಲಿದೆ. ಹೊಸ ಸಿಮ್ ಕಾರ್ಡ್ ಪಡೆಯಲು ಗ್ರಾಹಕರು ಬಯೋಮೆಟ್ರಿಕ್ ವಿವರಗಳನ್ನು ನೀಡಬೇಕು ಎಂಬ ಮಹತ್ವದ ನಿಯಮವನ್ನು ಈ ಹೊಸ ಮಸೂದೆಯಲ್ಲಿ ಮಾಡಲಾಗಿದೆ.

ಈ Gmail ಖಾತೆಗಳನ್ನು ಅಳಿಸಲಾಗುತ್ತದೆ: 
ಗೂಗಲ್ ಸರ್ಚ್ ಇಂಜಿನ್ ಇನ್ನೊಂದು ಮಹತ್ವದ ನಿರ್ಧಾರವನ್ನು ತೆಗೆದುಕೊಂಡಿದೆ. ಒಂದು ಅಥವಾ ಎರಡು ವರ್ಷಗಳಿಂದ ಬಳಸದೆ ಇರುವ ಎಲ್ಲಾ ಜಿಮೈಲ್ ಖಾತೆಗಳನ್ನು ಗೂಗಲ್ ಅಳಿಸುತ್ತಿದೆ. ಅಂದರೆ ಕಳೆದ ಒಂದು ಅಥವಾ ಎರಡು ವರ್ಷಗಳಲ್ಲಿ ನಿಮ್ಮ Gmail ಖಾತೆಯಿಂದ ನೀವು ಯಾವುದೇ ಇಮೇಲ್ ಕಳುಹಿಸದಿದ್ದರೆ ಅಥವಾ ಸ್ವೀಕರಿಸದಿದ್ದರೆ ನಿಮ್ಮ Gmail ಖಾತೆಯು ಶೀಘ್ರದಲ್ಲೇ ಮುಚ್ಚಲ್ಪಡುತ್ತದೆ. 

ಹಾಗಾಗಿ  ಸಂಭಾವ್ಯ ತೊಡಕುಗಳನ್ನು ಗಮನದಲ್ಲಿಟ್ಟುಕೊಂಡು ಇನ್ನೆರಡು ದಿನಗಳಲ್ಲಿ ಈ ಸಂಬಂಧಿತ ಕೆಲಸಗಳನ್ನು ಪೂರ್ಣಗೊಳಿಸುವುದು ಉತ್ತಮ ಮಾರ್ಗವಾಗಿದೆ.

Source : https://zeenews.india.com/kannada/business/smartphone-users-complete-this-task-before-31st-december-2023-179587

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group : https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *