ರಾಜ್ಯದ ಪ್ರೌಢಶಾಲೆ ಶಿಕ್ಷಕರ ಬೇಸಿಗೆ ರಜೆಗಾಗಿ `ವಿಶೇಷ ತರಗತಿ’, ‘SSLC’ ಪರೀಕ್ಷೆ-2 ಮುಂದೂಡಿಕೆ : ರಾಜ್ಯ ಸರ್ಕಾರ ಆದೇಶ.

ವಿಷಯಕ್ಕೆ ಸಂಬಂಧಿಸಿದಂತೆ ಉಲ್ಲೇಖದಲ್ಲಿ 2024ರ ಮಾರ್ಚ್-ಏಪ್ರಿಲ್ ರಲ್ಲಿ ನಡೆದ ಎಸ್.ಎಸ್.ಎಲ್.ಸಿ. ಪರೀಕ್ಷೆ-1 ರಲ್ಲಿ ಅನುತ್ತೀರ್ಣರಾದ ಹಾಗೂ C ಮತ್ತು C+ ಪಡೆದ ವಿದ್ಯಾರ್ಥಿಗಳ ಫಲಿತಾಂಶ ಸುಧಾರಣೆಗಾಗಿ 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-2ರಲ್ಲಿ ಉತ್ತೀರ್ಣರಾಗಲು ತಯಾರಿಗೊಳಿಸಲು ಆಯಾ ಶಾಲೆಯ ವಿಷಯ ಬೋಧನಾ ಶಿಕ್ಷಕರಿಂದ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ໖:15.05.2024 ರಿಂದ ದಿನಾಂಕ:05.06.2024ರವರೆಗೆ ನಡೆಸಲು ಸುತ್ತೋಲೆ ಹೊರಡಿಸಲಾಗಿತ್ತು.

ಸದರಿ ವಿಶೇಷ ಪರಿಹಾರ ಬೋಧನಾ ತರಗತಿಗಳನ್ನು ಸರ್ಕಾರದ ಸೂಚನೆಗಳನ್ನಯ ಮುಂದೂಡಲಾಗಿದ್ದು, ಇವುಗಳನ್ನು ದಿನಾಂಕ: 29/05/2024 ರಿಂದ ದಿನಾಂಕ: 13/06/2024 ರವರೆಗೆ ನಡೆಸಲು ತಿಳಿಸಿದೆ. 2024ರ ಎಸ್.ಎಸ್.ಎಲ್.ಸಿ. ಪರೀಕ್ಷೆ-02ನ್ನು ದಿನಾಂಕ: 14/06/2024 ರಿಂದ ಪ್ರಾರಂಭಿಸಲಾಗುವುದು. ಸದರಿ ಪರೀಕ್ಷೆಯ ಪರಿಷ್ಕೃತ ವೇಳಾಪಟ್ಟಿಯನ್ನು ಅಧ್ಯಕ್ಷರು, ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿ, ಇವರು ಪ್ರತ್ಯೇಕವಾಗಿ ಹೊರಡಿಸುತ್ತಾರೆ.

 

Source : https://m.dailyhunt.in/news/india/kannada/kannadanewsnow-epaper-kanowcom/raajyadha+proudhashaale+shikshakara+besige+rajegaagi+vishesha+taragati+sslc+parikshe+2+mundudike+raajya+sarkaara+aadesha-newsid-n609595906?listname=topicsList&topic=for%20you&index=11&topicIndex=0&mode=pwa&action=click

Leave a Reply

Your email address will not be published. Required fields are marked *