SRH vs DC: ಆರೆಂಜ್‌ ಆರ್ಮಿ ಎದುರು ತಲೆಬಾಗಿದ ಡೆಲ್ಲಿ ಕ್ಯಾಪಿಟಲ್ಸ್‌‌! SRH ಗೆ 67 ರನ್‌ಗಳ ಭರ್ಜರಿ ಗೆಲುವು!

Cricket: ಪವರ್ ಪ್ಲೇನಲ್ಲೇ ಅತೀ ಹೆಚ್ಚು ರನ್‌ಗಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಸ್‌ಆರ್‌ಹೆಚ್‌‌. ಕೊನೆಯದಾಗಿ ಎಸ್‌‌ಆರ್‌‌ಹೆಚ್‌ 266 ರನ್‌ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌‌ಗೆ ಬಿಗ್‌ ಟಾರ್ಗೆಟ್‌ ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌‌ ಎಡವಿದೆ.

ಟಫ್‌ ಫೈಟ್‌ ಕೊಟ್ಟ ಡೆಲ್ಲಿ ಬ್ಯಾಟರ್ಸ್!

ಬಿಗ್‌ ಟಾರ್ಗೆಟ್‌ ಚೇಸ್‌ ಮಾಡೋಕೆ ಬಂದ ಡೆಲ್ಲಿ ಕ್ಯಾಪಿಟಲ್ಸ್‌ಗೆ ಆರಂಭಿಕ ಆಘಾತ ಎದುರಾಯ್ತು. ವಾಷಿಂಗ್ಟನ್ ಸುಂದರ್ ಎಸೆದ ಮೊದಲ ಓವರ್‌ನ ಐದನೇ ಎಸೆತದಲ್ಲಿ ಪೃಥ್ವಿ ಶಾ ವಿಕೆಟ್ ಪತನವಾಯ್ತು. ಸತತ ನಾಲ್ಕು ಎಸೆತಗಳಲ್ಲಿ ನಾಲ್ಕು ಬೌಂಡರಿಸಿ ಪೃಥ್ವಿ ಔಟಾದರು. ಡೆಲ್ಲಿ ತಂಡಸ ಬಿಗ್‌ ಹಿಟ್ಟರ್‌ ಡೇವಿಡ್ ವಾರ್ನರ್ ಮತ್ತೊಮ್ಮೆ ನಿರಾಸೆ ಮೂಡಿಸಿದ್ರು ಕೇವಲ ಒಂದು ರನ್‌‌ಗಳಿಸಿ ಔಟಾದ್ರು.

ಇಂದು ಐಪಿಎಲ್ 2024ರ 35ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ (Delhi Capitals) ತಂಡ ಸನ್ ರೈಸರ್ಸ್ ಹೈದರಾಬಾದ್ (Sunrisers Hyderabad) ತಂಡವನ್ನು ಎದುರಿಸಿತು. ಉಭಯ ತಂಡಗಳ ನಡುವಿನ ಈ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ (Arun Jetly Stadium) ನಡೀತು. ಟಾಸ್ ಗೆದ್ದ ಡೆಲ್ಲಿ ನಾಯಕ ರಿಷಬ್ ಪಂತ್ ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದ್ದರು. ಪಂತ್‌ ನಿರ್ಧಾರವನ್ನು ಸನ್‌ರೈರ್ಸಸ್‌ ಬ್ಯಾಟರ್ಸ್‌ ಬುಡಮೇಲು ಮಾಡಿಬಿಟ್ಟರು. ಪವರ್ ಪ್ಲೇನಲ್ಲೇ ಅತೀ ಹೆಚ್ಚು ರನ್‌ಗಳಿಸಿ ಹೊಸ ದಾಖಲೆ ನಿರ್ಮಿಸಿದೆ ಎಸ್‌ಆರ್‌ಹೆಚ್‌‌. ಕೊನೆಯದಾಗಿ ಎಸ್‌‌ಆರ್‌‌ಹೆಚ್‌ 266 ರನ್‌ಗಳಿಸುವ ಮೂಲಕ ಡೆಲ್ಲಿ ಕ್ಯಾಪಿಟಲ್ಸ್‌‌ಗೆ ಬಿಗ್‌ ಟಾರ್ಗೆಟ್‌ ನೀಡಿತು. ಈ ಗುರಿಯನ್ನು ಬೆನ್ನತ್ತುವಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌‌ ಎಡವಿದೆ. 19.1 ಓವರ್‌ಗಳಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌  10 ವಿಕೆಟ್‌‌ ಕಳೆದುಕೊಂಡು ಸೋಲಪ್ಪಿಕೊಂಡಿತು.

ಡೆಲ್ಲಿಗೆ ಆಸರೆಯಾಗಿದ್ದು ಮೆಕ್‌ಗುರ್ಕ್!

ಡೆಲ್ಲಿ ಕ್ಯಾಪಿಟಲ್ಸ್ ಬ್ಯಾಟ್ಸ್‌ಮನ್ ಮೆಕ್‌ಗುರ್ಕ್ ಅದ್ಭುತ ಬ್ಯಾಟಿಂಗ್ ಮಾಡಿ 15 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಬಳಿಕ ಮೆಕ್‌ಗುರ್ಕ್ 18 ಎಸೆತಗಳಲ್ಲಿ 65 ರನ್ ಗಳಿಸಿ ಔಟಾದರು. ಪೊರೆಲ್ 22 ಎಸೆತಗಳಲ್ಲಿ 42 ರನ್ ಗಳಿಸಿ ಔಟಾದರು. ಸ್ಟಬ್ಸ್‌ ಕೂಡ 10 ರನ್‌‌ಗಳಿಸಿ ಔಟಾದ್ರು.

ಸನ್‌ರೈಸರ್ಸ್ ಹೈದರಾಬಾದ್

ಅಭಿಷೇಕ್ ಶರ್ಮಾ, ಟ್ರಾವಿಸ್ ಹೆಡ್, ಏಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್, ಅಬ್ದುಲ್ ಸಮದ್, ನಿತೀಶ್ ರೆಡ್ಡಿ, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ.ನಟರಾಜನ್.

ಇಂಪ್ಯಾಕ್ಟ್ ಪ್ಲೇಯರ್: ಉಮ್ರಾನ್ ಮಲಿಕ್, ಅನ್ಮೋಲ್ಪ್ರೀತ್ ಸಿಂಗ್, ಆಕಾಶ್ ಮಹಾರಾಜ್ ಸಿಂಗ್, ಗ್ಲೆನ್ ಫಿಲಿಪ್ಸ್, ವಾಷಿಂಗ್ಟನ್ ಸುಂದರ್.

ಡೆಲ್ಲಿ ಕ್ಯಾಪಿಟಲ್ಸ್

ಡೇವಿಡ್ ವಾರ್ನರ್, ಜಾಕ್ ಫ್ರೇಸರ್ ಮೆಕ್‌ಗುರ್ಕ್, ಅಭಿಷೇಕ್ ಪೊರೆಲ್, ರಿಷಬ್ ಪಂತ್ (ನಾಯಕ ಮತ್ತು ವಿಕೆಟ್ ಕೀಪರ್), ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್, ಲಲಿತ್ ಯಾದವ್, ಕುಲ್ದೀಪ್ ಯಾದವ್, ಅನ್ರಿಚ್ ನೋಕಿಯಾ, ಖಲೀಲ್ ಅಹ್ಮದ್, ಮುಖೇಶ್ ಕುಮಾರ್.

ಇಂಪ್ಯಾಕ್ಟ್ ಪ್ಲೇಯರ್: ಪೃಥ್ವಿ ಶಾ, ಶಾಯ್ ಹೋಪ್, ಪ್ರವೀಣ್ ದುಬೆ, ರಾಶಿಖ್ ದಾರ್ ಸಲಾಮ್, ಸುಮಿತ್ ಕುಮಾರ್.

Source: https://kannada.news18.com/news/sports/ipl-2024-srh-vs-dc-live-updates-sunrisers-hyderabad-won-by-67-runs-vddd-1663565.html

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group: https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *