Sunrisers Hyderabad Vs Lucknow Super Giants : ಐಪಿಎಲ್ 2024ರ 57ನೇ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡ, ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು 10 ವಿಕೆಟ್‌ಗಳಿಂದ ಸೋಲಿಸಿದೆ. 166 ರನ್ಗಳ ಗುರಿಯನ್ನು ತಂಡವು 9.4 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಬೆನ್ನಟ್ಟಿತು.

ಸನ್‌ರೈಸರ್ಸ್ ಹೈದರಾಬಾದ್ ತಂಡ ಟೂರ್ನಿಯಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರಿಸಿದೆ. ಇಂದಿನ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಬೌಂಡರಿ ಸಿಕ್ಸರ್ಗಳ ಸುರಿಮಳೆಗೈದು, 166ರನ್ಗಳ ಗುರಿಯನ್ನ ಕೇವಲ 9.4 ಓವರ್‌ಗಳಲ್ಲಿ ತಲುಪುವ ಮೂಲಕ ಭರ್ಜರಿ ಜಯ ಸಾಧಿಸಿದೆ.
ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೋ ಸೂಪರ್ ಜೈಂಟ್ಸ್ ತಂಡ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತ್ತು. ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 165 ರನ್‌ಗಳಿಸಿತ್ತು. ಈ ಗುರಿ ಬೆನ್ನತ್ತಿದ್ದ ಕಮಿನ್ಸ್ ಪಡೆ ಕೇವಲ 58 ಎಸೆತಗಳಲ್ಲೇ ತಲುಪಿ ಇತಿಹಾಸ ಸೃಷ್ಟಿಸಿತು.
ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ ತಲಾ 8 ಬೌಂಡರಿ ಹಾಗೂ 8 ಸಿಕ್ಸರ್ಗಳ ಸಹಿತ 89 ರನ್ಗಳಿಸಿದರೆ, ಅಭಿಷೇಕ್ ಶರ್ಮಾ 28 ಎಸೆತಗಳಲ್ಲಿ 8 ಬೌಂಡರಿ ಹಾಗೂ 6 ಸಿಕ್ಸರ್ಗಳ ಸಹಿತ ಅಜೇಯ 75 ರನ್ಗಳಿಸಿದರು,
ಆದರೆ ಇಂದಿನ ಪಂದ್ಯದಲ್ಲಿ 10 ಓವರ್ಗಳಿಗೆ ಇನ್ನೂ 2 ಎಸೆತಗಳಿರುವಂತೆ ಹೈದರಾಬಾದ್ 167 ರನ್ಗಳಿಸಿ ವಿಶ್ವದಾಖಲೆ ಬರೆಯಿತು. ವಿಶೇಷವೆಂದರೆ ಸನ್‌ರೈಸರ್ಸ್ ಹೈದರಾಬಾದ್ 10 ಓವರ್‌ಗಳಲ್ಲಿ ಹೆಚ್ಚು ರನ್ಗಳಿಸಿದ ಮೊದಲ ಮೂರು ದಾಖಲೆಯನ್ನು ತನ್ನ ಹೆಸರಲ್ಲೇ ಬರೆದುಕೊಂಡಿದೆ. ಇದೇ ಮುಂಬೈ ಇಂಡಿಯನ್ಸ್ ವಿರುದ್ಧ 148 ರನ್‌ಗಳಿಸಿತ್ತು.
2024ರ ಆವೃತ್ತಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಹಲವು ವಿಶ್ವದಾಖಲೆಗಳನ್ನು ನಿರ್ಮಿಸಿದೆ. ಇದೇ ಆವೃತ್ತಿಯಲ್ಲಿ ಹೈದರಾಬಾದ್ ತಂಡ 287ರನ್ ಸಿಡಿಸುವ ಮೂಲಕ ಐಪಿಎಲ್ನ ಗರಿಷ್ಠ ಮೊತ್ತ ದಾಖಲಿಸಿದೆ. ಐಪಿಎಲ್ನಲ್ಲಿ ಮಾತ್ರವಲ್ಲಿ ಟಿ20 ಕ್ರಿಕೆಟ್ನಲ್ಲೇ ಇದು ವಿಶ್ವದಾಖಲೆಯಾಗಿದೆ. 2ನೇ ಗರಿಷ್ಠ ಮೊತ್ತ (277) ಕೂಡ ಹೈದರಾಬಾದ್ ಹೆಸರಿನಲ್ಲಿದೆ.
10 ವಿಕೆಟ್‌ಗಳ ಜಯ
ಸನ್‌ರೈಸರ್ಸ್ ಹೈದರಾಬಾದ್ ತಂಡ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ 10 ವಿಕೆಟ್‌ಗಳಿಂದ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಅಭಿಷೇಕ್ ಶರ್ಮಾ ಮತ್ತು ಟ್ರಾವಿಸ್ ಹೆಡ್ ಬಿರುಸಿನ ಬ್ಯಾಟಿಂಗ್ ಮಾಡಿ ಅಜೇಯ ಅರ್ಧಶತಕ ಸಿಡಿಸಿ ತಂಡವನ್ನು 9.4 ಓವರ್‌ಗಳಲ್ಲಿ ಗೆಲುವಿನ ದಡ ಸೇರಿಸಿದರು.