

ಇಂದು ಉಪ್ಪಲ್ ಕ್ರೀಡಾಂಗಣದಲ್ಲಿ ನಡೆಯಲ್ಲಿರುವ 2ನೇ ಪಂದ್ಯದಲ್ಲಿ ಪಂಜಾಜ್ ಕಿಂಗ್ಸ್ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗುತ್ತಿವೆ. ಐಪಿಎಲ್-16ರಲ್ಲಿ ಸತತ ಎರಡು ಗೆಲುವಿನೊಂದಿಗೆ ಈಗಾಗಲೇ ರೋಲ್‌ನಲ್ಲಿರುವ ಪಂಜಾಬ್ ಕಿಂಗ್ಸ್ ತಂಡವನ್ನು ಸನ್‌ರೈಸರ್ಸ್ ಹೈದರಾಬಾದ್ ಎದುರಿಸಲಿದೆ. ಇಂದಿನ ಪಂದ್ಯ ಆಡಲು ಎರಡೂ ತಂಡಗಳು ಹೈದರಾಬಾದ್‌ಗೆ ಆಗಮಿಸಿ ಸಾಕಷ್ಟು ಅಭ್ಯಾಸ ನಡೆಸಿವೆ.ಎಸ್‌ಆರ್‌ಎಚ್ ಸತತ ಎರಡು ಸೋಲುಗಳನ್ನು ಅನುಭವಿಸಿದ್ದುಮ ಇಂದಿನ ಪಂದ್ಯದಲ್ಲಿ ಗೆಲುವಿನ ಖಾತೆ ತೆರೆಯಲು ಪ್ರಯತ್ನಿಸಲಿದೆ. ಹೈದರಾಬಾದ್ ತಂಡ ಮೊದಲ ಪಂದ್ಯದಲ್ಲಿ ರಾಜಸ್ಥಾನ ವಿರುದ್ಧ ಮತ್ತು ಎರಡನೇ ಪಂದ್ಯದಲ್ಲಿ ಲಕ್ನೋ ಸೂಪರ್‌ಜೈಂಟ್ಸ್ ವಿರುದ್ಧ ಸೋತಿತ್ತು.
Views: 0