SRH vs RCB Live Score IPL 2023: ಆರ್​ಸಿಬಿಗೆ ಇದು ಅಳಿವು ಉಳಿವಿನ ಪಂದ್ಯ

SRH vs RCB Live Score Sunrisers Hyderabad vs Royal Challengers Bangalore IPL 2023 match scorecard online in Kannada

ಆರ್​ಸಿಬಿ ಇಂದು ಸನ್ ರೈಸರ್ಸ್ ಹೈದರಾಬಾದ್ ವಿರುದ್ಧ ಅಳಿವು ಉಳಿವಿನ ಪಂದ್ಯದಲ್ಲಿ ಮುಖಾಮುಖಿ ಆಗಿದೆ. ಪ್ಲೇ ಆಫ್​ ರೇಸ್​ನಲ್ಲಿ ಆರ್​ಸಿಬಿ ಜೀವಂತವಾಗಿರಬೇಕು ಅಂದ್ರೆ, ಹೈದರಾಬಾದ್ ತಂಡವನ್ನು ಬಗ್ಗು ಬಡಿಯಲೇಬೇಕು. ಆಡಿರೋ 12 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದಿರುವ ಆರ್​ಸಿಬಿ 12 ಪಾಯಿಂಟ್​ಗಳನ್ನು ಸಂಪಾದಿಸಿದೆ. ಡುಪ್ಲೆಸಿ ಪಡೆ, ಪ್ಲೇ ಆಫ್​ಗೆ ಪ್ರವೇಶಿಸಬೇಕು ಅಂದ್ರೆ, 16 ಪಾಯಿಂಟ್ ಸಂಪಾದಿಸಲೇಬೇಕು. ಅಂದ್ರೆ ಇನ್ನುಳಿದ ಎರಡೂ ಪಂದ್ಯಗಳನ್ನು ಗೆಲ್ಲಲೇಬೇಕಿದೆ. ಹೀಗಾಗಿ ಇಂದು ಹೈದರಾಬಾದ್ ವಿರುದ್ಧ ಗೆದ್ರೆ ಮಾತ್ರ, ಆರ್​ಸಿಬಿ ಪ್ಲೇ ಆಫ್ ರೇಸ್​ನಲ್ಲಿ ಜೀವಂತವಾಗಿರಲಿದೆ. ಮತ್ತೊಂದೆಡೆ ಹೈದರಾಬಾದ್ ತಂಡ ಈ ಟೂರ್ನಿಯಲ್ಲಿ ಈಗಾಗಲೇ ಪ್ಲೇ ಆಫ್ ರೇಸ್​ನಿಂದ ಹೊರಬಿದ್ದಿದೆ. ಹೈದರಾಬಾದ್, ಬೆಂಗಳೂರು ವಿರುದ್ಧ ಸೋತ್ರೂ ಗೆದ್ರೂ, ಕಳೆದುಕೊಳ್ಳುವಂತಹದ್ದೇನು ಇಲ್ಲ. ಹೀಗಾಗಿ ಹೈದರಾಬಾದ್ ತಂಡ ಯಾವುದೇ ಒತ್ತಡವಿಲ್ಲದೆ ಆಡಲಿದ್ದು ಆರ್​ಸಿಬಿಗೆ ತನ್ನ ಮೇಲಿರುವ ಒತ್ತಡವೇ ಅಪಾಯವಾಗುವ ಸಾಧ್ಯತೆಯಿದೆ.

source https://tv9kannada.com/sports/cricket-news/srh-vs-rcb-live-score-sunrisers-hyderabad-vs-royal-challengers-bangalore-ipl-2023-match-scorecard-online-in-kannada-psr-581798.html

Leave a Reply

Your email address will not be published. Required fields are marked *