SRH vs RR Qualifier 2, IPL 2024: ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಅತ್ಯಂತ ಮಹತ್ವದ ಪಂದ್ಯ ನಡೆಯಿತು. ಕ್ವಾಲಿಫೈಯರ್ 2 ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶ ಈ ಪಂದ್ಯಕ್ಕೆ ಇದ್ದ ಕಾರಣ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಅದರಂತೆ ಪಂದ್ಯ ಗೆದ್ದು ಹೈದರಾಬಾದ್ ಪೈನಲ್ಗೆ ಎಂಟ್ರಿ ನೀಡಿದೆ.
![](https://samagrasuddi.co.in/wp-content/uploads/2024/05/image-230.png)
ಐಪಿಎಲ್ 2024ರಲ್ಲಿ ರಾಜಸ್ಥಾನ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ (SRH vs RR) ನಡುವೆ ಕ್ವಾಲಿಫೈಯರ್ 2 ಪಂದ್ಯ ಚೆನ್ನೈನ ಎಂ ಚಿದಂಬರಂ ಮೈದಾನದಲ್ಲಿ ನಡೆಯಿತು. ಈ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ರಾಯಲ್ಸ್ ತಂಡದ ನಾಯಕ ಸಂಜು ಸ್ಯಾಮ್ಸನ್ ಮೊದಲಿಗೆ ಬೌಲಿಂಗ್ ಆಯ್ಕೆ ಮಾಡಿಕೊಂಡರು. ಹೀಗಾಗಿ ಮೊದಲು ಬ್ಯಾಟಿಂಗ್ ಮಾಡಿದ ಸನ್‌ರೈಸರ್ಸ್ ಹೈದರಾಬಾದ್ 9 ವಿಕೆಟ್ ಕಳೆದುಕೊಂಡು 175 ರನ್ ಗಳಿಸಿತು. ರಾಜಸ್ಥಾನಕ್ಕೆ ಫೈನಲ್ ತಲುಪಲು 176 ರನ್‌ಗಳ ಟಾರ್ಗೆಟ್ ನೀಡಿತು. ಈ ಟಾರ್ಗೆಟ್ ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡವು ನಿಗದಿತ 20 ಓವರ್‌ಗೆ 7 ವಿಕೆಟ್ ನಷ್ಟಕ್ಕೆ 138 ರನ್ ಗಳಿಸುವ ಮೂಲಕ 36 ರನ್ ಗಳಿಂದ ಸೋಲನ್ನಪ್ಪಿತು. ಈ ಭರ್ಜರಿ ಗೆಲುವಿನೊಂದಿಗೆ ಹೈದರಾಬಾದ್ ತಂಡವು ಓಐನಲ್‌ಗೆ ಪ್ರವೇಶಿಸಿದ್ದು, ಮೇ 26ರಂದು ಕೋಲ್ಕತ್ತಾ ಮತ್ತು ಹೈದರಾಬಾದ್ ತಂಡಗಳು ಪ್ರಶಸ್ತಿಗಾಗಿ ಸೆಣಸಾಡಲಿದೆ.
ಬ್ಯಾಟಿಂಗ್‌ನಲ್ಲಿ ಎಡವಿದ ರಾಜಸ್ಥಾನ್:
ಇನ್ನು, ರಾಜಸ್ಥಾನ್ ರಾಯಲ್ಸ್ ತಂಡವು ಮಹತ್ವದ ಪಂದ್ಯದಲ್ಲಿ ಟಾಸ್ ಗೆದ್ದ ತಕ್ಷಣವೇ ತಪ್ಪು ಮಾಡಿತು. ಬಳಿಕ ಬ್ಯಾಟಿಂಗ್‌ನಲ್ಲಿಯೂ ಎಡವಿದ ರಾಜಸ್ಥಾನ್ ಪಂದ್ಯವನ್ನು ಸೋಲನ್ನಪ್ಪಿತು. ರಾಜಸ್ಥಾನ್ ತಂಡದ ಪರ ಯಶಸ್ವಿ ಜೈಸ್ವಾಲ್ 42 ರನ್, ಕ್ಯಾಡ್‌ಮೋರ್ 10 ರನ್, ನಾಯಕ ಸಂಜು ಸ್ಯಾಮ್ಸನ್ 10 ರನ್, ರಿಯಾನ್ ಪರಾಗ್ 6 ರನ್, ರವಿಚಂದ್ರನ್ ಅಶ್ವಿನ್ ಶೂನ್ಯ, ಹಿಟ್ಮಾಯರ್ 4 ರನ್, ರೋಮನ್ ಪೋವೆಲ್ 6 ರನ್ ಗಳಿಸಿದರು. ಆದರೆ ಕೊನೆಯವರೆಗೂ ರಾಜಸ್ಥಾನ್ ಪರ ದ್ರುವ್ ಜುರೇಲ್ ಏಕಾಂಗಿಯಾಗಿ ಹೋರಾಟ ನಡೆಸಿದರೂ ಸಹ ಕೊನೆಯಲ್ಲಿ ಪಂದ್ಯವನ್ನು ಗೆಲ್ಲಿಸಲು ಸಾಧ್ಯವಾಗಲಿಲ್ಲ. ಈ ವೇಳೆ ಜುರೇಲ್ ಆಕರ್ಷಕ ಅರ್ಧಶತಕ ಸಿಡಸಿ ಮಿಂಚಿದರು. ಜುರೇಲ್ 56 ರನ್ ಗಳಿಸಿ ಅಬ್ಬರಿಸಿದರು.
ಉತ್ತಮ ಬ್ಯಾಟಿಂಗ್ ಮಾಡಿದ ಹೈದರಾಬಾದ್:
ಚೆನ್ನೈನ ಚೆಪಾಕ್ ಸ್ಟೇಡಿಯಂನಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ನಡುವೆ ಅತ್ಯಂತ ಮಹತ್ವದ ಪಂದ್ಯ ನಡೆಯಿತು. ಕ್ವಾಲಿಫೈಯರ್ 2 ಪಂದ್ಯದಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ ಪ್ರವೇಶಿಸುವ ಅವಕಾಶ ಈ ಪಂದ್ಯಕ್ಕೆ ಇದ್ದ ಕಾರಣ ಈ ಪಂದ್ಯದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಈ ಪಂದ್ಯಕ್ಕೂ ಮುನ್ನ ರಾಜಸ್ಥಾನ ರಾಯಲ್ಸ್ ಟಾಸ್ ಗೆದ್ದು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರೆ, ಸನ್‌ರೈಸರ್ಸ್ ಹೈದರಾಬಾದ್ ಮೊದಲು ಬ್ಯಾಟಿಂಗ್ ಮಾಡುವ ಸವಾಲನ್ನು ಪಡೆಯಿತು. ಹೈದರಾಬಾದ್ ಪರ ಟ್ರಾವಿಸ್ ಹೆಡ್ 34 ರನ್, ಅಭಿಷೇಕ್ ಶರ್ಮಾ 12 ರನ್, ರಾಹುಲ್ ತ್ರಿಪಾಠಿ 37 ರನ್, ಹೆನ್ರಿ ಕ್ಲಾಸೆನ್ 50 ರನ್, ಶಾಬಾಜ್ ಅಹ್ಮದ್ 18 ರನ್ ಗಳಿಸುವ ಮೂಲಕ ತಂಡದ ಮೊತ್ತವನ್ನು 9 ವಿಕೆಟ್‌ಗೆ 175 ರನ್ ಗಳಿಸಿತು.
ಉಳಿದಂತೆ ಹೈದರಾಬಾದ್ ಪರ ಅಡೇನ್ ಮಾರ್ಕರಮ್ 1 ರನ್, ನಿತೀಶ್ ಕುಮಾರ್ ರೆಡ್ಡಿ 5 ರನ್, ಅಬ್ದುಲ್ ಸಮದ್ ಶೂನ್ಯ, ನಾಯಕ ಪ್ಯಾಟ್ ಕಮೀನ್ಸ್ 5 ರನ್ ಮತ್ತು ಜಯದೇವ್ ಉನದ್ಕಟ್ 5 ರನ್ ಗಳಿಸಿದರು. ಚೆನ್ನೈನ ಬೌಲಿಂಗ್ ಪಿಚ್‌ನಲ್ಲಿ ಈ ಸ್ಕೋರ್ ಯಾವುದೇ ಡಿಫೆಂಡಿಂಗ್ ತಂಡಕ್ಕೆ ಒಂದು ದೈರ್ಯವನ್ನು ತರುತ್ತದೆ. ಅಂದುಕೊಂಡಂತೆ ಹೈದರಬಾದ್ ಸಹ ಪಂದ್ಯದ ಮೇಲೆ ಉತ್ತಮವಾಗಿ ಹಿಡಿತ ಸಾಧಿಸಿತು. ರಾಜಸ್ಥಾನದ ಬೌಲರ್‌ಗಳು ಈ ಬಾರಿ ಹೈದರಾಬಾದ್ ಬ್ಯಾಟ್ಸ್‌ಮನ್‌ಗಳನ್ನು ಒಂದು ಹಂತದವರೆಗೆ ಮಾತ್ರ ನಿಯಂತ್ರಿಸಲು ಸಾಧ್ಯವಾಯಿತು. ಬೌಲರ್ ಗಳಾದ ಟ್ರೆಂಟ್ ಬೌಲ್ಟ್ ಮತ್ತು ಅವೇಶ್ ಖಾನ್ ತಲಾ 3 ವಿಕೆಟ್ ಪಡೆದರೆ, ಸಂದೀಪ್ ಶರ್ಮಾ 2 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಸನ್‌ರೈಸರ್ಸ್ ಹೈದರಾಬಾದ್ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 175 ರನ್ ಗಳಿಸಿ ರಾಜಸ್ಥಾನಕ್ಕೆ 176 ರನ್‌ಗಳ ಸವಾಲನ್ನು ನೀಡಿತು.