
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ ಸೆ. 5: ಚಿತ್ರದುರ್ಗ ಜಿಲ್ಲೆ ಹಿರಿಯೂರು ತಾಲ್ಲೂಕಿನ ಐಮಂಗಲ ಗ್ರಾಮದಲ್ಲಿ ಶ್ರೀಮಹಾ ಶಿವಶರಣ ಹರಳಯ್ಯ ಗುರುಪೀಠ, ಶ್ರೀ ಮಹಾಶಿವಶರಣ ಹರಳಯ್ಯ ಶಿಕ್ಷಣ ಸಂಸ್ಥೆ. (ರಿ)ಹಾಗೂ ಶ್ರೀ ಮಹಾಶಿವಶರಣ ಹರಳಯ್ಯ ಆಂಗ್ಲ ಮಾದ್ಯಮ ಕಿರಿಯ ಪ್ರಾಥಮಿಕ ಶಾಲೆ. ಶ್ರೀ ಬಸವ ಹರಳಯ್ಯ ಮಹಾಸ್ವಾಮಿಜಿ ರವರು ರಾಧಾಕೃಷ್ಣನ್ ರವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿದರು. ಶಿಕ್ಷಕರು ವಿದ್ಯಾರ್ಥಿಗಳ ಸೂರ್ಯನಂತೆ ಏಕೆಂದರೆ ಸೂರ್ಯ ಸದಾ ಹಿತವನ್ನು ಕಾಪಾಡುತ್ತಾನೆ ಬೆಳಕನ್ನು ಕೊಡುತ್ತೇನೆ ಹಾಗೆ ಸೂರ್ಯನ
ಜೊತೆಗೆ ವಿದ್ಯಾರ್ಥಿಗಳು ನಕ್ಷತ್ರಗಳಾಗಿ ಉಳಿಯುತ್ತವೆ.

ಕಾರ್ಯಕ್ರಮದ ಅತಿಥಿಗಳಾಗಿ ಭಾಗವಹಿಸಿದ್ದ ಎಸ್ಒಐ ವಿದ್ಯಾಸಂಸ್ಥೆಯ ಕಾರ್ಯದರ್ಶಿಯಾದ ಪ್ರವೀಣ್ ರವರು ಶಿಕ್ಷಕರಾದವರು ಸಮುದ್ರದ
ಉಪ್ಪು ನೀರಿನಂತಾಗದೆ ಸಿಹಿನೀರಿನಂತಾಗಬೇಕು ಎಂದು ಹೇಳಿದರು. ನಿರ್ಮಿತಿ ಕೇಂದ್ರದ ಂಇಇ ಮಲ್ಲಿಕಾರ್ಜುನ ಸಮಾಜವನ್ನು ರೂಪಿಸುವಲ್ಲಿ ಶಿಕ್ಷಕರ ಮಹತ್ವದ ಪಾತ್ರವಿದೆ ಎಂದರು. ಪ್ರತಿಭಾ ಕಾರಂಜಿಯಲ್ಲಿ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ಹಾಗೂ ಅಭಿನಂದನೆಯನ್ನು ಸಲ್ಲಿಸಲಾಯಿತು