ನಗರದ ಅನುಪಮ ಇಂಟರ್ ನ್ಯಾಷನಲ್ ಪಬ್ಲಿಕ್ ಸ್ಕೂಲ್ ನಲ್ಲಿ ಪೂರ್ವ ಪ್ರಾಥಮಿಕ ಮುದ್ದು ಮಕ್ಕಳಿಂದ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾರಂಭ ಆಚರಿಸಲಾಯಿತು.

ಮುದ್ದು ಮಕ್ಕಳು ಶ್ರೀ ಕೃಷ್ಣ ಮತ್ತು ರಾಧೆಯರ ವೇಷಭೂಷಣವನ್ನು ಧರಿಸಿ ಸಡಗರದಿಂದ ಶಾಲೆಗೆ ಬಂದಿದ್ದರು. ಶಾಲಾ ಆವರಣದಲ್ಲಿ ರಾಧಾ ಕೃಷ್ಣ ರ ನಡುವೆ ಹಗ್ಗ ಜಗ್ಗಾಟ ನಡೆಯಿತು. ಪುಟಾಣಿ ಕೃಷ್ಣರು ಬೆಣ್ಣೆಯ ಮಡಿಕೆಯನ್ನು ಹೊಡೆದು ಸಂಭ್ರಮಿಸಿದರು. ಪೂರ್ವ ಪ್ರಾಥಮಿಕ ವಿಭಾಗದ ಶಿಕ್ಷಕಿಯರಾದ ಸ್ವಾತಿ, ಅನಿತ, ಮಂಗಳಗೌರಿ, ವರಲಕ್ಷ್ಮೀ,ಪುಷ್ಪವತಿ, ಕಾರ್ಯಕ್ರಮದ ನೇತೃತ್ವವನ್ನು ವಹಿಸಿದ್ದರು.

ಈ ಶ್ರೀ ಕೃಷ್ಣ ಜನ್ಮಾಷ್ಟಮಿ ಸಮಾರಂಭ ದಲ್ಲಿ ಶಾಲೆಯ ಅಧ್ಯಕ್ಷರಾದ ಎಸ್ ಭಾಸ್ಕರ್, ಕಾರ್ಯದರ್ಶಿಗಳಾದ ರಕ್ಷಣ್ ಎಸ್ ಬಿ, ಪ್ರಾಚಾರ್ಯ ರಾದ ಸಿ ಡಿ ಸಂಪತ್ ಕುಮಾರ್, ಮುಖ್ಯೋಪಾಧ್ಯಾಯರಾದ ವೆಂಕಟೇಶ್, ಹೆಡ್ ಕೋ ಆರ್ಡಿನೇಟರ್ ಬಸವರಾಜ್ ಕೆ ಮತ್ತು ಶಾಲೆಯ ಶಿಕ್ಷಕ – ಶಿಕ್ಷಕಿಯರು ಶಿಕ್ಷಕೇತರ ವರ್ಗದವರು ಭಾಗವಹಿಸಿದ್ದರು.
Views: 61