ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ಕಾರ್ಯಕಾರಿಣಿ ಸಭೆ: ಸಂಘಟನೆ, ಬಲವರ್ಧನೆ ಹಾಗೂ ಹೊಸ ಕಾರ್ಯಯೋಜನೆಗೆ ಮಹತ್ವದ ನಿರ್ಣಯ.

ಚಿತ್ರದುರ್ಗ ಡಿ. 11

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಶ್ರೀ ಮಾದರ ಚನ್ನಯ್ಯ ಮಠದಲ್ಲಿ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿ ಚಿತ್ರದುರ್ಗ ಜಿಲ್ಲಾ ಘಟಕದ ಕಾರ್ಯಕಾರಿಣಿ ಸಭೆಯೂ ಬುಧವಾರ ಜರುಗಿತು.

ಈ ಸಭೆಯಲ್ಲಿ ಸ್ವಾಮೀಜಿಗಳ ಮುಖೇನ ನೇಮಿತರಾಗಿರುವ ಪದಾಧಿಕಾರಿಗಳ ಘೋಷಣೆ, ತಾಲೂಕು ಸಮಿತಿಗಳ ರಚನೆ, ಹೊಸ ಕಾರ್ಯಯೋಜನೆ, ಸಂಘಟನೆಯ ವಿಸ್ತರಣೆ ಹಾಗೂ ಸಮಾಜಮುಖಿ ಸೇವೆಗಳ ಬಲವರ್ಧನೆ ಕುರಿತು ಮಹತ್ವದ ನಿರ್ಣಯಗಳು ಕೈಗೊಳ್ಳಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಾದರ ಚನ್ನಯ್ಯ ಗುರುಪೀಠದ ಶ್ರೀ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳು ಇದು ಬೇರೆಯವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಾವು ಸಹಾ ಅವರಂತೆ ರಾಜಕಾರಣದಲ್ಲಿ ಮುಂದೆ ಬರಬೇಕು ಸಮಾಜಿಕವಾಗಿ ಮುಂದೆ ಬರಬೇಕು ಸಮಾನತೆಯಲ್ಲಿ ನಮ್ಮನ್ನು ನಾವು ಗುರುತಿಸಿಕೊಳ್ಳಬೇಕಿದೆ. ಇದರ ಬಗ್ಗೆ ಚಿಂತನೆಯನ್ನು ಮಾಡುವ ಉದ್ದೇಶದಿಂದ ಈ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದರು.

ಇದು ಯಾವುದೇ ಒಂದು ಸಂಘಟನೆಗೆ ಪರ್ಯಾಯವಾಗಲಿ ಅಲ್ಲ, ಯಾವುದೇ ರಾಜಕೀಯ ಪಕ್ಷಕ್ಕೂ ಸಹಾ ಪರ್ಯಾಯ ಎಂದು ಭಾವಿಸಬಾರದು, ಇದು ಶ್ರೀಮಠದ ಮಾರ್ಗದರ್ಶನದಲ್ಲಿ ನಡೆಯುವಂತ ಸಂಘಟನೆಯಾಗಿದೆ. ಇದರಲ್ಲಿ ಕೆಲಸ ಮಾಡುವವರು ಈ ಹಿಂದೆ ಯಾವ ಸಂಘಟನೆಯಲ್ಲಿ ಇದ್ದರು ಎಂದು ಈಗ ಯಾವ ಪಕ್ಷದಲ್ಲಿ ಇದ್ದಾರೆ ಮುಂದೆ ಎಲ್ಲಿ ಇರುತ್ತಾರೆ ಎಂಬ ಪ್ರಶ್ನೆ ಬೇಡ, ಇದರ ಅಗತ್ಯ ಇಲ್ಲ ನಾವುಗಳು ಎಲ್ಲೆ ಇರಲ್ಲಿ ನಮ್ಮ ಶ್ರೀ ಮಾದಾರ ಚನ್ನಯ್ಯ ಸೇವಾ ಸಮಿತಿಗೆ ಬದ್ದರಾಗಿರಬೇಕು ಎಂದರು.

ಈ ಸಂದರ್ಭದಲ್ಲಿ ಮಾತನಾಡಿದ ರವಿ ಮಲ್ಲಾಪುರ ಸಮುದಾಯದ ಅಸ್ತಿತ್ವ ಅಸ್ಮಿತೆಗೆ ಶ್ರೀ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿಗಳ ಸುಮಾರು ಎರಡೂವರೆ ದಶಕಗಳ ಸಾಧನೆ ಅನನ್ಯ. ಪರಮಪೂಜ್ಯರ ಮಾರ್ಗದರ್ಶನದಂತೆ ರಾಜ್ಯ,ಜಿಲ್ಲಾ,ತಾಲೂಕು ಮಟ್ಟದಲ್ಲಿ ಸೇವಾಸಮಿತಿಯ ಸಂಘಟನಾ ಬಲವರ್ಧನೆ ನಮ್ಮ ಮೊದಲ ಗುರಿಯಾಗಲಿದೆ.ಮತ್ತಿತರರು ಯುವಶಕ್ತಿಯ ಭಾಗವಹಿಸುವಿಕೆ, ಶಿಕ್ಷಣದ ಮಹತ್ವ, ಸಮುದಾಯ ಒಗ್ಗಟ್ಟು ಮತ್ತು ರಾಜಕೀಯ ಸಬಲೀಕರಣ ಕುರಿತು ಅಭಿಪ್ರಾಯ ಹಂಚಿಕೊಂಡರು.

ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಶ್ರೀ ಪರಶುರಾಮ್ ಪ್ರಧಾನ ಕಾರ್ಯದರ್ಶಿಯಾದ ರವಿ ಕುಮಾರ್ ಬ್ಯಾಲಹಾಳ್ ಖಜಾಂಚಿದ ನಾಗರಾಜಪ್ಪ ಎಲ್. ದೇವರಾಜ್. ಅನಂತ್. ಪೋಲಿಸ್ ಬೇಟೆ ಪ್ರಸನ್ನ. ರಾಮಾಂಜನೇಯ. ಶ್ರೀನಿವಾಸ್. ಶಿವಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *