ಚಿತ್ರದುರ್ಗ ಸೆ. 16
ವರದಿ ಮತ್ತು ಪೋಟೋ ಸುರೇಶ್ ಪಟ್ಟಣ್
ಸಂಸ್ಕಾರ ಭಾರತೀ (ರಿ), ಕರ್ನಾಟಕ ದಕ್ಷಿಣ ಪ್ರಾಂತ್ಯದ ಸಾಹಿತ್ಯ ವಿಭಾಗ ಹಾಗೂ ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿಯಿಂದ ಚಿತ್ರದುರ್ಗ ತಾಲ್ಲೂಕಿನ ದೊಡ್ಡಸಿದ್ದವ್ವನಹಳ್ಳಿಯ ಜ್ಞಾನಪೂರ್ಣ ಇಂಟರ್‍ನ್ಯಾಷನಲ್ ಶಾಲೆಯಲ್ಲಿ ಸೆ. 17 ರ ಬುಧವಾರ 10 ಗಂಟೆಗೆ ದಿ|| ಸಿದ್ದವ್ವನಹಳ್ಳಿ ಕೃಷ್ಣಶರ್ಮ ಅವರ ಕುರಿತಂತೆ ರಾಜ್ಯ ಮಟ್ಟದ ವಿಚಾರ ಸಂಕಿರಣ ನಡೆಯಲಿದೆ ಎಂದು ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾ ಸಮಿತಿಯ ಪ್ರಧಾನ ಕಾರ್ಯದರ್ಶಿ ಶಶಿಧರ್‍ರಾವ್ ತಿಳಿಸಿದ್ದಾರೆ.

ಈ ವಿಚಾರ ಸಂಕಿರಣದ ಉದ್ಘಾಟನೆಯನ್ನು ಕರ್ನಾಟಕ ಸಂಸ್ಕøತ ವಿಶ್ವ ವಿದ್ಯಾನಿಲಯದ ವಿಶ್ರಾಂತ ಉಪಕುಲ ಪತಿಗಳಾದ ಡಾ. ಮಲ್ಲೇಪುರಂ ಜಿ. ವೆಂಕಟೇಶ್ ನೇರವೇರಿಸಲಿದ್ದಾರೆ. ವಿಧಾನ ಪರಿಷತ್ ಸದಸ್ಯರಾದ ಕೆ.ಎಸ್ .ನವೀನ್, ಜ್ಞಾನಪೂರ್ಣ ಇಂಟರ್ ನ್ಯಾಷನಲ್ ಶಾಲೆಯ ಸಂಸ್ಥಾಪಕರಾದ ವೆಂಕಟೇಶ್‍ರೆಡ್ಡಿ, ಜಲತಜ್ಞರಾದ ಡಾ.ಎನ್.ಜೆ.ದೇವರಾಜ ರೆಡ್ಡಿ, ಶರಣ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷರಾದ ಕೆ.ಎಂ.ವಿರೇಶ್, ಸಂಸ್ಕಾರ ಭಾರತೀಯ ಪ್ರಾಂತ ಸಾಹಿತ್ಯ ವಿಭಾಗದ ಸಂಚಾಲಕರಾದ ಡಾ.ರಾಜೀವಲೋಚನ, ಸಾಹಿತ್ಯ ವಿಭಾಗ ಜಿಲ್ಲಾ ಸಂಚಾಲಕರಾದ ಶ್ರೀಮತಿ ಚಂದ್ರಿಕ ಸುರೇಶ್, ಪ್ರಾಂತ ಕಾರ್ಯದರ್ಶಿ ಮಾರುತಿ ಮೋಹನ್ ಉಪಸ್ಥಿತರಿದ್ದು, ಸಂಸ್ಕಾರ ಭಾರತೀ ಚಿತ್ರದುರ್ಗ ಜಿಲ್ಲಾಧ್ಯಕ್ಷರಾದ ಉಮೇಶ್ ವಿ ತುಪ್ಪದ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ.
ದಿ| ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಬದುಕು ಬರಹ ಇದರ ವಿಷಯ ಮಂಡನೆಯನ್ನು ಸಂಸ್ಕøತಿ ಚಿಂತಕರಾದ ಡಾ.ಜಿ.ಬಿ.ಹರೀಶ್ ಹಾಗೂ ದಿ| ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಪ್ರಮುಖ ಕೃತಿಗಳ ಅವಲೋಕನವನ್ನು ಡಾ.ತಾರಿಣಿ ಶುಭದಾಯಿಣಿ ಮತ್ತು ದಿ|| ಸಿದ್ದವ್ವನಹಳ್ಳಿ ಕೃಷ್ಣಶರ್ಮರ ಪತ್ರಿಕ ಬರಹಗಳ ಅವಲೋಕನವನ್ನು ಡಾ.ಸಿಬಂತಿ ಪದ್ಮನಾಭ ವಿಷಯ ಮಂಡನೆ ಮಾಡಲಿದ್ದಾರೆ.
ಸಮಾರೋಪ ಸಮಾರಂಭದಲ್ಲಿ ಲೇಖಕರಾದ ಶ್ರೀಮತಿ ರಾಧಾ ಟೀಕಲ್, ಬರಹಗಾರರಾದ ಡಾ.ಲೋಕೇಶ್ ಅಗಸನಕಟ್ಟೆ ಹಿರಿಯ ವಿದ್ಯಾರ್ಥಿಗಳ ಸಂಘದ ಅಧ್ಯಕ್ಷರಾದ ಡಾ.ಶಿವಮೂರ್ತಿ ಭಾಗವಹಿಸಲಿದ್ದಾರೆ.
ಸಂಸ್ಕಾರ ಭಾರತೀ (ರಿ). ಪ್ರಾಂತಮಟ್ಟದ ಪದಾಧಿಕಾರಿಗಳು, ಸಾಹಿತ್ಯಾಸಕ್ತರು, ಕಲಾಸಕ್ತರು, ಚಿಂತಕರು ಹಾಗೂ ಜಿಲ್ಲಾ ಸಮಿತಿಯ ಸದಸ್ಯರು ಭಾಗವಹಿಸುವಂತೆ ಶಶಿಧರ್ ರಾವ್ ಮನವಿ ಮಾಡಿದ್ದಾರೆ.
Views: 2