
ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817
ಚಿತ್ರದುರ್ಗ: ನಾಲ್ಕು ದಶಕಗಳಿಂದ ಜನಪರ ಚಳವಳಿಗಳಲ್ಲಿ ಸಕ್ರಿಯವಾಗಿರುವ ಚಿಂತಕ, ಹೋರಾಟಗಾರ ಬಂಜಗೆರೆ ಜಯಪ್ರಕಾಶ್ ಅವರ
ಸಾಹಿತ್ಯ ಮತ್ತು ಸಾಂಸ್ಕೃತಿಕ ಕೊಡುಗೆ ಎಂಬ ಬಂಜಗೆರೆ ಜಯಪ್ರಕಾಶ್ ವಿಷಯದ ಕುರಿತು ರಾಜ್ಯ ಮಟ್ಟದ ವಿಚಾರಸಂಕಿರಣವನ್ನು
ಫೆ.11ರಂದು ಬೆಳಿಗ್ಗೆ 10ಕ್ಕೆ ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಹಮ್ಮಿಕೊಳ್ಳಲಾಗಿದೆ’ ಎಂದು ಚಿತ್ರದುರ್ಗ ಗೆಳೆಯರ ಬಳಗ
ತಿಳಿಸಿದೆ.
ಕಾರ್ಯಕ್ರಮವನ್ನು ಮಂಗಳವಾರ ಬೆಳಗ್ಗೆ 10.30ಕ್ಕೆ ನಾಡೋಜ ಪ್ರೊ. ಬರಗೂರು ರಾಮಚಂದ್ರಪ್ಪ ಉದ್ಘಾಟಿಸುವರು. ಡಾ.ಕೆ.
ಮರುಳಸಿದ್ದಪ್ಪ ಅಧ್ಯಕ್ಷತೆ ವಹಿಸುವರು. ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್, ಕನ್ನಡ ಅಭಿವೃದ್ಧಿ
ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ, ಸ್ವಾಮಿ ಆನಂದ್, ರವಿಕುಮಾರ್ ಬಾಗಿ ವಿಷಯ ಮಂಡಿಸುವರು.
ಲೇಖಕರೊಂದಿಗೆ ಸಂವಾದದಲ್ಲಿ ಪ್ರಕಾಶ್ ಮಂಟೇದ, ಹುಲಿಕುಂಟೆ ಮೂರ್ತಿ, ಟಿ.ಎಚ್. ಲವಕುಮಾರ್, ರೇಣುಕಾರಾಧ್ಯ,
ಎಸ್.ಪವಿತ್ರಾ, ಎಸ್. ಮಂಜುನಾಥ್, ಕಿರಣ್ ಕುಮಾರಿ, ಕರಿ ಸ್ವಾಮಿ ಭಾಗವಹಿಸಲಿದ್ದಾರೆ’ ಸಾಹಿತಿ ಸಿದ್ದನಗೌಡ ಪಾಟೀಲ
ಸಮಾರೋಪ ನುಡಿ ಆಡುವರು. ಪ್ರೊ.ಎಸ್.ಜಿ. ಸಿದ್ದರಾಮಯ್ಯ ಅಧ್ಯಕ್ಷತೆ ವಹಿಸುವರು ಎಂದು ತಿಳಿಸಿದ್ದಾರೆ.
ಪದ ಸಂಸ್ಥೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕನ್ನಡ ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ
ಅಕಾಡೆಮಿ ಸಹಯೋಗದಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಚಿತ್ರದುರ್ಗ ಜಿಲ್ಲೆಯವರಾದ ಬಂಜಗೆರೆ ಜಯಪ್ರಕಾಶ್ ಅವರು ಜಿಲ್ಲೆಯ ನಾನಾ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ರಾಜ್ಯ
ಮತ್ತು ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಹೋರಾಟದಲ್ಲಿ ತಮ್ಮದೇ ಆದಂತ ಛಾಪು ಮೂಡಿಸಿದ್ದಾರೆ. ಸಾಹಿತ್ಯ ರಚನೆ,
ಅನುವಾದ ಮತ್ತು ಅವರ ಬರಹಗಳು ಯುವ ಪೀಳಿಗೆಗೆ ಪ್ರೇರಣೆಯಾಗಿದೆ.
ಚಿತ್ರದುರ್ಗ ಜಿಲ್ಲೆಯ ಯುವ ಬರಹಗಾರರು, ಹೋರಾಟಗಾರರು, ಸಾಹಿತ್ಯಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು
ಬಂಜಗೆರೆ ಜಯಪ್ರಕಾಶ್ ಸಾಹಿತ್ಯ ಮತ್ತು ಸಾರ್ವಜನಿಕ ಬದುಕಿನ ಅವಲೋಕನಕ್ಕೆ ಸಾಕ್ಷಿಯಾಗಬೇಕು ಎಂದು ಕರ್ನಾಟಕ ಮಾಧ್ಯಮ
ಅಕಾಡೆಮಿ ಸದಸ್ಯರಾದ ಅಹೋಬಳಪತಿ, ಡಾ. ಕರಿಯಪ್ಪ ಮಾಳಿಗೆ, ಗೌನಹಳ್ಳಿ ಗೋವಿಂದಪ್ಪ, ಉಪನ್ಯಾಸಕರಾದ
ಡಾ.ತಿಪ್ಪೇಸ್ವಾಮಿ ಕೆರೆಯಾಗಳಹಳ್ಳಿ, ಪೆನ್ನಯ್ಯ.ಟಿ, ನಾಗರಾಜ್ ಬೆಳಗಟ್ಟ, ವಸಂತ್ ಕುಮಾರ್ ಪ್ರಾಚಾರ್ಯರಾದ ಡಾ.ಮಂಜಪ್ಪ,
ಹನುಮಂತರಾಯ ಶಿಕ್ಷಕರಾದ ತಿಪ್ಪೇಸ್ವಾಮಿ .ಸಿ, ರೇವಣ್ಣ, ಎಸ್.ಆರ್.ರಂಗಸ್ವಾಮಿ ತಿಪ್ಪೇಸ್ವಾಮಿ ಪಾಡೀಗಟ್ಟೆ ತಿಳಿಸಿದರು.