
ವರದಿ ಮತ್ತು ಪೋಟೋ ವೇದಮೂರ್ತಿ ಭೀಮ ಸಮುದ್ರ
ಭೀಮಸಮುದ್ರ: ಭೀಮಸಮುದ್ರ ಗ್ರಾಮದಲ್ಲಿ ಮಂಗಳವಾರ ರಾತ್ರಿ 9:00 ಗಂಟೆಯಿಂದ ಬುಧವಾರ ಬೆಳಗ್ಗೆವರೆಗೂ 12 ಗಂಟೆವರೆಗೆ ಲಾರಿಗಳನ್ನು ನಿಲ್ಲಿಸಿ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಲಾರಿ ಸಂಚರಿಸುವನ್ಯ ನಿಯಮ ರಾತ್ರಿ 3:00 ಗಂಟೆ ಯಿಂದ 6:00 ಬೆಳಗ್ಗೆ ಒಳಗಾಗಿ ಕಾಲಿ ಲಾರಿಗಳು ಸಂಚರಿಸಬೇಕು ತದನಂತರ ಬೆಳಗ್ಗೆ 11:00 ಗಂಟೆ ಯಿಂದ ಸಂಜೆ 5:00 ವರೆಗೂ ಗ್ರಾಮದೊಳಗೆ ಹೋಗಬೇಕು ಇದನ್ನು ಬಿಟ್ಟು ದಿನವಿಡೀ ಲಾರಿಗಳು ಓಡಾಡುತ್ತವೆ ಇದರಿಂದ ಲಾರಿಗಳನ್ನು ನಿಲ್ಲಿಸಿ ಸಾರ್ವಜನಿಕರು ಬೇಸರ ವ್ಯಕ್ತಪಡಿಸಿದ್ದಾರೆ
ಸಮಸ್ಯೆ
1.ಅದಿರು ತುಂಬಿದ ಲಾರಿಯ ಮೇಲೆ ತಾಡ್ಪಲ್ ಹಾಕುವುದಿಲ್ಲ
2 ಲಾರಿಗಳಿಂದ ಶಾಲೆ ಕಾಲೇಜಿಗೆ ಓಡಾಡುವ ಮಕ್ಕಳ ತೊಂದರೆ ಆಗುತ್ತಿದೆ
3.ಮನೆಯ ಒಳಗಡೆ ಧೂಳಿನಿಂದ ಆಹಾರ ಪದಾರ್ಥ ಊಟ ಮಾಡಲು ಸಾಧ್ಯವಾಗುತ್ತಿಲ್ಲ.
- ಭೀಮಸಮುದ್ರದಿಂದ ವಿ ಪಾಳ್ಯದವರೆಗೆ ರಸ್ತೆ ಅದಗೆಟ್ಟಿದೆ 5.ಬೈಕ್ ಸವಾರರ ಮೇಲೆ ಧೂಳು ಹೆಚ್ಚಾಗುತ್ತಿದ್ದು ಸಾರ್ವಜನಿಕರ ದೂರು
ಸರ್ಕಾರಕ್ಕೆ ಗಣಿಗಾರಿಕೆಯಿಂದ ಅನುಕೂಲವಾಗುತ್ತದೆ ಆದರೆ ಸಾರ್ವಜನಿಕನ ಮೇಲೆ ದಿನನಿತ್ಯ ಕಿರಿಕಿರಿ ಗೊತ್ತಾಗುವುದಿಲ್ಲ ಸರ್ಕಾರ ಹಾಗೂ ಅಧಿಕಾರಿಗಳು ಇದರ ಬಗ್ಗೆ ಗಮನ ಹರಿಸಬೇಕು ದಿನನಿತ್ಯ ಲಾರಿಗಳಿಂದ ತೊಂದರೆಯಾಗುತ್ತಿರುವುದನ್ನು ತಕ್ಷಣ ಬಗೆಹರಿಸಬೇಕು ಎಂದು ತಿಳಿಸಿದ್ದಾರೆ ಸರ್ಕಾರದವರು ಗ್ರಾಮದ ಹೊರಗಡೆ ರಸ್ತೆ ಮಾಡಿ ಲಾರಿ ಸಂಚರಿಸಿದರೆ ಅನುವು ಮಾಡಿಕೊಡಲಿ ಇಲ್ಲದಿದ್ದರೆ ಸಾರ್ವಜನಿಕರು ಅನಾರೋಗ್ಯದಿಂದ ನರಳುವ ಪರಿಸ್ಥಿತಿ ಬರುತ್ತದೆ ಹಾಗೆ ಶಾಲಾ ಕಾಲೇಜಿಗೆ ಹೋಗುವ ಮಕ್ಕಳು ವೃದ್ಧರು ಬೈಕ್ ಸವಾರರ ಮೇಲೆ ಲಾರಿ ಓಡಾಡುವಾಗ ದೂಳು ಕಣ್ಣಿಗೆ ಬರುತ್ತದೆ ಎಂದು ತಿಳಿಸಿದ್ದಾರೆ