PRASAR BHARATI RECRUITMENT : ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ಎರಡು ವರ್ಷದ ಅವಧಿಗೆ ಅರೆಕಾಲಿಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ.

ಬೆಂಗಳೂರು: ದೂರದರ್ಶನದಲ್ಲಿ ಖಾಲಿ ಇರುವ ಸ್ಟ್ರಿಂಜರ್ (ಅರೆಕಾಲಿಕ ವರದಿಗಾರ) ಹುದ್ದೆಗಳ ಭರ್ತಿಗೆ ಅಧಿಸೂಚನೆ ಹೊರಡಿಸಲಾಗಿದೆ. ರಾಜ್ಯದ 29 ಜಿಲ್ಲೆಗಳಿಂದಲೂ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರಸಾರ ಭಾರತಿ ನಿಯಮಾವಳಿಯಂತೆ 2 ವರ್ಷದ ಅವಧಿಗೆ ನೇಮಕಾತಿ ಮಾಡಲಾಗುತ್ತದೆ.
ಗೌರವಧನ: ಸೂಚಿತ ಸ್ಥಳೀಯ ಸುದ್ದಿ ಪ್ರಸಾರಕ್ಕೆ 1,500, 2ನೇ ಸುದ್ದಿಗೆ 1,000 ಮತ್ತು ಹೊರ ಕೇಂದ್ರದ ಕವರೇಜ್ಗೆ 1,800 ರೂ ನೀಡಲಾಗುತ್ತದೆ. ಬೆಂಗಳೂರು ಕೇಂದ್ರದಲ್ಲಿ ವರ್ಷಕ್ಕೆ 5 ಲಕ್ಷ ರೂ ಹಾಗೂ ಜಿಲ್ಲಾ ಕೇಂದ್ರದಲ್ಲಿ 4 ಲಕ್ಷ ರೂ. ಒಳಗೆ ಗೌರವಧನ ಮಿತಿ ಮೀರದಂತೆ ಪಾವತಿ ನಿಗದಿಸಲಾಗಿದೆ.

ಅರ್ಹತೆ: ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಕ್ಯಾಮೆರಾ ಮತ್ತು ಅಗತ್ಯ ತಂತ್ರಜ್ಞಾನವನ್ನು ಹೊಂದಿರಬೇಕು. ಎಚ್ಡಿ/4ಕೆ/ಯುಎಚ್ಡಿ/ಎನ್ಎಕ್ಸ್ ಫಾರ್ಮೆಟ್ ವಿಡಿಯೋ ಕ್ಯಾಮೆರಾ ಹೊಂದಿರುವ ಜೊತೆಗೆ ಸುದ್ದಿ ಕಳುಹಿಸಲು ಬೇಕಾದ ಎಲ್ಲಾ ಸೌಲಭ್ಯ ಹೊಂದಿರಬೇಕು.
ವಿದ್ಯಾರ್ಹತೆ: ಪತ್ರಿಕೋದ್ಯಮದ ಅನುಭವ ಹೊಂದಿರಬೇಕು. ಸುದ್ದಿ ನೀಡುವ ಜೊತೆಗೆ ಉತ್ತಮ ಕ್ಯಾಮರಾ ಕೌಶಲ್ಯ ಹೊಂದಿರಬೇಕು.

ಅಧಿಸೂಚನೆ (ಪ್ರಸಾರ ಭಾರತಿ)
ಆಯ್ಕೆ: ಅಭ್ಯರ್ಥಿಗಳನ್ನು ಶಾರ್ಟ್ ಲಿಸ್ಟ್ ಮಾಡಿ, ಬಳಿಕ ಟೆಸ್ಟ್ ಕವರೇಜ್ ನಡೆಸಲಾಗುವುದು. ಬಳಿಕ ಸಂದರ್ಶನ ಮಾಡಲಾಗುವುದು. ಇದರ ಜೊತೆಗೆ ಸಾಧನ ಮತ್ತು ದಾಖಲಾತಿ ಪರಿಶೀಲನೆ ಮಾಡಿ, ಅಂತಿಮ ಪಟ್ಟಿ ಹೊರಡಿಸಲಾಗುವುದು.
ಅರ್ಜಿ ಸಲ್ಲಿಕೆ: ಅಭ್ಯರ್ಥಿಗಳು ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿಯಲ್ಲಿ ಯಾವ ಜಿಲ್ಲೆಗಳಿಗೆ ತಾವು ಹುದ್ದೆ ನಿರ್ವಹಣೆಗೆ ಇಚ್ಛಿಸುವುದಾಗಿ ಸ್ಪಷ್ಟವಾಗಿ ನಮೂದಿಸಬೇಕು.
ಅರ್ಜಿಯನ್ನು ಈ ಕೆಳಗಿನ ವಿಳಾಸಕ್ಕೆ ಅಂತಿಮ ದಿನಾಂಕಕ್ಕೆ ಮುನ್ನ ಸಲ್ಲಿಸಬೇಕು. ನಿರ್ದೇಶಕರು, ಪ್ರಾದೇಶಿಯ ಸುದ್ದಿ ಘಟಕ, ದೂರದರ್ಶನ ಕೇಂದ್ರ, ಜೆ.ಸಿ.ನಗರ, ಬೆಂಗಳೂರು, 56006.
1,180 ರೂ ಡಿಡಿಯನ್ನು ಅಧಿಸೂಚನೆಯಲ್ಲಿ ನೀಡಲಾಗಿರುವ ವಿಳಾಸಕ್ಕೆ ಪಾವತಿಸಿ, ಅರ್ಜಿ ಸಲ್ಲಿಸಬೇಕಿದೆ.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಮೇ 16.
ಈ ಕುರಿತ ಹೆಚ್ಚಿನ ಮಾಹಿತಿ ಮತ್ತು ಅಧಿಕೃತ ಅಧಿಸೂಚನೆಗೆ prasarbharati.gov.in ಇಲ್ಲಿಗೆ ಭೇಟಿ ನೀಡಿ.
Source : ETV Bharat
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group:https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharehat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1