ಬೇಸಿಗೆ ಶಿಬಿರಗಳು ಮಕ್ಕಳ ಸಂಸ್ಕಾರವಂತ ಜೀವನದ ಬುನಾದಿ. _ ಶ್ರೀಮತಿ ಸುಜಾತ ಲಿಂಗಾರೆಡ್ಡಿ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817


ಚಿತ್ರದುರ್ಗ: ಏ.11 ಮಕ್ಕಳ ಶಿಬಿರಗಳು ಕೇವಲ ಮೋಜಿನ ಚಟುವಟಿಕೆಗಳಿಗೆ ಸೀಮಿತವಾಗಿರದೆ,ಬೇಸಿಗೆ ಶಿಬಿರಗಳು ಮಕ್ಕಳ ಸಂಸ್ಕಾರವಂತ ಜೀವನದ ಬುನಾದಿಯಾಗಿವೆ ಜೀವನಕ್ಕೆ ಉಪಯುಕ್ತವಾದ ಅನೇಕ ಮೌಲ್ಯಗಳು ಮತ್ತು ಕೌಶಲ್ಯಗಳನ್ನು ಕಲಿಸುತ್ತವೆ. ಶಿಬಿರದಲ್ಲಿ ಕಲಿತದ್ದನ್ನು ಮಕ್ಕಳು ತಮ್ಮ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಪೋಷಕರು ಮತ್ತು ಶಿಬಿರ ಆಯೋಜಕರ ಶ್ರಮ ಸಾರ್ಥಕಗೊಳ್ಳುತ್ತದೆ ಎಂದು ಚಿತ್ರದುರ್ಗದ ಎಸ್ ಆರ್ ಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ಶ್ರೀಮತಿ ಸುಜಾತಲಿಂಗಾರೆಡ್ಡಿ ಅಭಿಪ್ರಾಯಪಟ್ಟರು.


ದಿನಾಂಕ 10/04//2025ರ ಗುರುವಾರ ಸಂಜೆ ನಗರದ ತುರುವನೂರು ರಸ್ತೆಯ ಶ್ರೀಪ್ರಸನ್ನ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಆವರಣದಲ್ಲಿ ಕಳೆದ ಹತ್ತು ದಿನಗಳಿಂದ ಆಯೋಜಿಸಿದ್ದ ಬಾಲಗೋಕುಲ-2025 (ಮಕ್ಕಳ ಬೇಸಿಗೆ ಶಿಬಿರದ) ಸಮಾರೋಪ ಕಾರ್ಯಕ್ರಮಕ್ಕೆ ಶ್ರೀಕೃಷ್ಣ ದೇವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಅವರು ಮಾತನಾಡುತ್ತಾ “ರಜಾ ವೇಳೆಯಲ್ಲಿ ಮೊಬೈಲ್, ಟಿವಿ ಗೀಳುಗಳಿಂದ ಮಕ್ಕಳನ್ನು ದೂರವಿಟ್ಟು ಇಂತಹ ಶಿಬಿರಗಳಿಗೆ ಸೇರ್ಪಡೆಗೊಳಿಸಿದಲ್ಲಿ ಅವರಿಗೆ ಹೊಸ ಕೌಶಲ್ಯಗಳನ್ನು ಕಲಿಯಲು, ಬೇರೆ ಬೇರೆ ಮಕ್ಕಳೊಡನೆ ಸ್ನೇಹ ಬೆಳೆಸಲು, ಸಂಪನ್ಮೂಲ ವ್ಯಕ್ತಿಗಳಿಂದ ಪಾಠ ಪಡೆಯಲು ಉತ್ತಮ ವೇದಿಕೆಯಾಗಲಿದೆ. ಮಕ್ಕಳನ್ನು ಇಂತಹ ಶಿಬಿರಗಳಲ್ಲಿ ಭಾಗವಹಿಸಲು ಪ್ರೇರೇಪಿಸುವಂತೆ ಮಕ್ಕಳ ಪೋಷಕರಿಗೆ ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ನಿವೃತ್ತ ಹಿರಿಯ ಪೋಲಿಸ್ ಅಧಿಕಾರಿ ಮಲ್ಲಿಕಾರ್ಜುನಚಾರ್ ಕೆ. ಶಿಬಿರದ ಮಕ್ಕಳಿಗೆ ಶಿಬಿರದ ಪ್ರಮಾಣಪತ್ರ ಹಾಗೂ ನೆನಪಿನ ಕಾಣಿಕೆಯನ್ನು ವಿತರಿಸಿ ಮಾತನಾಡಿ ” ಶಿಕ್ಷಕರಾದವರು ನಮಗೆ ಜ್ಞಾನವನ್ನು ನೀಡುತ್ತಾರೆ ಮತ್ತು ನಮ್ಮನ್ನು ಉತ್ತಮ ವ್ಯಕ್ತಿಗಳಾಗಿ ರೂಪಿಸುತ್ತಾರೆ. ಗುರುಗಳನ್ಜು ಗೌರವಿಸುವ ವಿಧ್ಯಾರ್ಥಗಳ ಜೀವನದಲ್ಲಿ ಸೋಲೆಂಬುದು ಇರುವುದಿಲ್ಲ ಜೀವನದಲ್ಲಿ ಎಂತಹ ಸವಾಲನ್ನಾದರೂ ಎದುರಿಸುವ ಧೈರ್ಯ ಲಭಿಸುತ್ತದೆ ಗುರುಗಳನ್ನಷ್ಟೇ ಅಲ್ಲದೆ ನಮ್ಮ ಹಿರಿಯರನ್ನೂ ಗೌರವಿಸುವುದರಿಂದ ನಾವು ಅವರಿಂದ ಹೆಚ್ಚಿನದನ್ನು ಕಲಿಯಲು ಮತ್ತು ಜೀವನದಲ್ಲಿ ಯಶಸ್ವಿಯಾಗಲು ಆತ್ಮಸ್ಥೈರ್ಯ ದೊರಕುತ್ತದೆ ಚಿತ್ರದುರ್ಗದ ಭಾರತೀಯ ಯೋಗ ಶಿಕ್ಷಣ ಸಂಸ್ಥೆಯು ಮಕ್ಕಳಿಗಾಗಿ ಅನೇಕ ಉಚಿತ ಯೋಗ ಶಿಬಿರಗಳು ಮತ್ತು ಬೇಸಿಗೆ ಶಿಬಿರಗಳನ್ನು ಆಯೋಜಿಸುವುದರ ಮೂಲಕ ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡುತ್ತಿರುವುದು ಶ್ಲಾಘನೀಯ ” ಎಂದು ಹೇಳಿದರು.
ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಮಕ್ಕಳು ಶಿಬಿರದಲ್ಲಿ ಕಳೆದ ಹತ್ತು ದಿನಗಳಿಂದ ಕಲಿತ ವಿಷಯಗಳನ್ನು ಶಿಬಿರದ ಅನುಭವಗಳನ್ನು ಹಂಚಿಕೊಂಡರು.
ಹಿರಿಯ ಯೋಗ ಸಾಧಕಿ ಶ್ರೀಮತಿ ವನಜಾಕ್ಷಮ್ಮ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮವನ್ನು ಶಿಬಿರದ ಸಂಯೋಜಕಿ ಶ್ರೀಮತಿ ನಾಗಲತಾ ಮಾತಾಜೀ ನಿರೂಪಿಸಿದರೆ ಸಂಸ್ಥೆಯ ಅಧ್ಯಕ್ಷ ರವಿ ಕೆ.ಅಂಬೇಕರ್ ಎಲ್ಲರನ್ನೂ ಸ್ವಾಗತಿಸಿದರು ಭಾವಸಾರ ಕ್ಷತ್ರಿಯ ಸಮಾಜದ ಮಹಿಳಾ ಮಂಡಳಿ ಅಧ್ಯಕ್ಷೆ ಶ್ರೀಮತಿ ಮಮತಬೇದ್ರೆ, ಚಿತ್ರಕಲಾವಿದೆ ಅರುಣ, ಯೋಗ ಸಾಧಕರಾದ ಶ್ರೀಮತಿ ತಿಪ್ಪಮ್ಮ, ರೇಣುಕಾ, ದುರ್ಗಾಂಬಿಕಾ ಸರಸ್ವತಿ, ಇನ್ನಿತರರು ಉಪಸ್ಥಿತರಿದ್ದರು.

ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 

WhatsApp Group:https://chat.whatsapp.com/KnDIfiBURQ9G5sLEJLqshk

Facebook page: https://www.facebook.com/samagrasudii

Sharechat: https://sharehat.com/profile/edu514826335?d=n

Twitter: https://twitter.com/SuddiSamagra

Threads: https://www.threads.net/@samagrasuddi.co.in

Instagram: https://www.instagram.com/samagrasuddi.co.in/

Telegram: https://t.me/+E1ubNzdguQ5jN2Y1

Leave a Reply

Your email address will not be published. Required fields are marked *