ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಲಾಭದಾಯಕ ಸೂರ್ಯ ನಮಸ್ಕಾರ

  • ಸೂರ್ಯ ನಮಸ್ಕಾರವು 12 ಯೋಗ ಆಸನಗಳ ಗುಂಪಾಗಿದೆ.
  • ಸೂರ್ಯ ನಮಸ್ಕಾರದಲ್ಲಿ ಮಾಡುವ ಆಸನಗಳು ದೇಹ, ಉಸಿರು ಮತ್ತು ಮನಸ್ಸು ಎಲ್ಲವನ್ನೂ ಒಟ್ಟಿಗೆ ತರುತ್ತವೆ.
  • ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಹೆಚ್ಚಿನ ಪ್ರಯೋಜನಗಳನ್ನು ಪಡೆಯಬಹುದು.

Surya Namaskar Benefits: ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ, ಸೂರ್ಯೋದಯದ ಸಮಯದಲ್ಲಿ ಸೂರ್ಯ ನಮಸ್ಕಾರ ಮಾಡುವುದರಿಂದ ಉತ್ತಮ ಆರೋಗ್ಯವನ್ನು ಪಡೆಯಬಹುದು. 12 ಶಕ್ತಿಯುತ ಯೋಗ ಭಂಗಿಗಳ ಅನುಕ್ರಮವೇ ಸೂರ್ಯ ನಮಸ್ಕಾರ. ಸೂರ್ಯ ಮಾಡುವುದರಿಂದ ದೇಹಕ್ಕಷ್ಟೇ ಅಲ್ಲ ಮನಸ್ಸಿನ ಆರೋಗ್ಯಕ್ಕೂ ಪ್ರಯೋಜನಕಾರಿ ಆಗಿದೆ. 

ಸೂರ್ಯ ನಮಸ್ಕಾರದಲ್ಲಿ (Surya Namaskar) ಮಾಡುವ ಆಸನಗಳು ದೇಹ, ಉಸಿರು ಮತ್ತು ಮನಸ್ಸು ಎಲ್ಲವನ್ನೂ ಒಟ್ಟಿಗೆ ತರುವ ಮೂಲಕ ಒಟ್ಟಾರೆ ಆರೋಗ್ಯಕ್ಕೆ ತುಂಬಾ ಲಾಭದಾಯಕವಾಗಿದೆ. ಸೂರ್ಯ ನಮಸ್ಕಾರದಿಂದ ಆರೋಗ್ಯಕ್ಕೆ ಸಿಗುವ ಐದು ಪ್ರಮುಖ ಪ್ರಯೋಜನಗಳು ಯಾವುವು ಎಂದು ನೋಡುವುದಾದರೆ… 

1) ತೂಕ ನಷ್ಟ: 
ಸೂರ್ಯ ನಮಸ್ಕಾರದಲ್ಲಿ ಮಾಡಲಾಗುವ ಕೆಲವು ಭಂಗಿಗಳು ಕಿಬ್ಬೊಟ್ಟೆಯ ಸ್ನಾಯುಗಳನ್ನು ಹಿಗ್ಗಿಸಲು ಸಹಾಯ ಮಾಡುತ್ತದೆ. ಇದು ಹೊಟ್ಟೆಯ ಸುತ್ತಲೂ ಶೇಖರಣೆಯಾಗಿರುವ ಕೊಬ್ಬನ್ನು ಕರಗಿಸಿ, ಆರೋಗ್ಯಕರವಾಗಿ ತೂಕ ಇಳಿಸಿಕೊಳ್ಳಲು (Weight Loss) ಸಹಾಯಕವಾಗಿದೆ. 

2)  ಸ್ನಾಯು ಶಕ್ತಿ: 
ನಿತ್ಯ ಸೂರ್ಯ ನಮಸ್ಕಾರ ಮಾಡುವುದರಿಂದ ಇದು  ಸ್ನಾಯುಗಳು, ಕೀಲುಗಳು, ಅಸ್ಥಿರಜ್ಜು ಮತ್ತು ಅಸ್ಥಿಪಂಜರದ ವ್ಯವಸ್ಥೆಯನ್ನು ಬಳಪಡಿಸಲು ಹಾಗೂ  ಬೆನ್ನುಮೂಳೆಯ ನಮ್ಯತೆಯನ್ನು ಸುಧಾರಿಸಲು ಪ್ರಯೋಜನಕಾರಿ ಆಗಿದೆ. 

3) ಚರ್ಮದ ಆರೋಗ್ಯ: 
ಸೂರ್ಯ ನಮಸ್ಕಾರ ಮಾಡುವುದರಿಂದ ಇದು ನಮ್ಮ ದೇಹದಲ್ಲಿ ರಕ್ತ ಪರಿಚಲನೆ ಸುಧಾರಿಸುತ್ತದೆ. ಈ ಮೂಲಕ ಮುಖದಲ್ಲಿ ನೈಸರ್ಗಿಕ ಹೊಳಪನ್ನು ತರುತ್ತದೆ. ಅಷ್ಟೇ ಅಲ್ಲ, ಚರ್ಮದ ಸುಕ್ಕುಗಳಾಗದಂತೆ ತಡೆಯುತ್ತದೆ. 

4) ಋತುಚಕ್ರ: 
ಅನಿಯಮಿತ ಋತುಚಕ್ರ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಿಗೆ ನಿತ್ಯ ಸೂರ್ಯ ನಮಸ್ಕಾರ ಮಾಡುವುದು ಹೆಚ್ಚು ಪ್ರಯೋಜನಕಾರಿ ಆಗಿದೆ. 

5) ಮಾನಸಿಕ ಆರೋಗ್ಯ: 
ಸೂರ್ಯ ನಮಸ್ಕಾರ ಮಾಡುವುದರಿಂದ ಮನಸ್ಸು ಶಾಂತಗೊಳ್ಳುತ್ತದೆ. ಇದರಿಂದ ಮಾನಸಿಕ ಆರೋಗ್ಯವೂ ಸುಧಾರಿಸುತ್ತದೆ. 

ಸೂಚನೆ: ಪ್ರಿಯ ಓದುಗರೇ, ಇಲ್ಲಿ ನೀಡಲಾದ ಮಾಹಿತಿಯು ಮನೆಮದ್ದುಗಳು ಮತ್ತು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ದಯವಿಟ್ಟು ಅದನ್ನು ಅಳವಡಿಸಿಕೊಳ್ಳುವ ಮೊದಲು ವೈದ್ಯಕೀಯ ಸಲಹೆಯನ್ನು ತೆಗೆದುಕೊಳ್ಳಿ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ. 

Source : https://zeenews.india.com/kannada/health/not-only-physical-health-surya-namaskara-also-beneficial-for-mental-health-224754

Leave a Reply

Your email address will not be published. Required fields are marked *