ಸ್ವದೇಶಿ ಕಪ್ ಕಬಡ್ಡಿ: ಚಿತ್ರದುರ್ಗ ಸ್ಪೋರ್ಟ್ಸ್ ಕ್ಲಬ್ ಚಾಂಪಿಯನ್‌ಶಿಪ್.

ಚಿತ್ರದುರ್ಗ ನ. 18

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್

ಸ್ವದೇಶಿ ಜಾಗರಣ ಮಂಚ್- ಕರ್ನಾಟಕ ಪ್ರಾಂತ ವತಿಯಿಂದ ಚಿತ್ರದುರ್ಗದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳದ ಕೊನೆಯ ದಿನವಾದ ಭಾನುವಾರ ದೇಶಿಯ ಮಣ್ಣಿನ ಕ್ರೀಡೆ ಸ್ವದೇಶಿ ಕಪ್ ಕಬಡ್ಡಿ ಕ್ರೀಡಾಕೂಟದಲ್ಲಿ ಅಂತಿಮ ಹಣಾಹಣಿಗೆ ತಯಾರಾಗಿದ್ದ ಕಬಡ್ಡಿ ತಂಡಗಳಿಗೆ ಶ್ರೀ ಜಗದ್ಗುರು ಮುರುಘರಾಜೇಂದ್ರ ಮಠದ ಆಡಳಿತ ಮಂಡಳಿಯ ಸದಸ್ಯರಾದ ಶ್ರೀ ಬಸವಕುಮಾರ ಸ್ವಾಮೀಜಿಯವರು ಶುಭ ಹಾರೈಸಿದರು. ನಂತರ ಗೆದ್ದಂತಹ ತಂಡಗಳಿಗೆ ನಗದು ಮತ್ತು ಪಾರಿತೋಷಕವನ್ನು ವಿತರಿಸಿದರು. 
ಈ ಸಂದರ್ಭದಲ್ಲಿ ಕಾರ್ಯಕ್ರಮದ ಸಂಚಾಲಕರು ಹಾಗೂ ವಿಧಾನಪರಿಷತ್ ಸದಸ್ಯರಾದ ಕೆ.ಎಸ್. ನವೀನ್ ಹಾಗೂ ಸಂಚಾಲಕರಾದ ಶ್ರೀಮತಿ ಸೌಭಾಗ್ಯಬಸವರಾಜನ್‍ರವರು ಉಪಸ್ಥಿತರಿದ್ದು ಪಂದ್ಯಾವಳಿಯನ್ನು ವೀಕ್ಷಿಸಿದರು.

ಸ್ವದೇಶಿ ಕಪ್ ಕಬಡ್ಡಿ ಪಂದ್ಯಾವಳಿಯಲ್ಲಿ ಒಟ್ಟು ಇಪ್ಪತ್ತು ತಂಡಗಳು ಭಾಗವಹಿಸಿದ್ದವು. ತೀವ್ರ ಪೈಪೋಟಿಯಿಂದ ನಡೆದ ಅಂತಿಮ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್ ಮುಡಿಗೆರೆಸಿಕೊಂಡಿತು. ರಾಯಭಾರಿ ಸ್ಪೋಟ್ರ್ಸ್ ಕ್ಲಬ್ ದ್ವಿತೀಯ ಸ್ಥಾನವನ್ನು ಪಡೆಯಿತು.

ನಾಯಕನಹಟ್ಟಿ ಮತ್ತು ಬೊಮ್ಮೇನಹಳ್ಳಿ ತಂಡಗಳು ಕ್ರಮವಾಗಿ ತೃತೀಯ ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡವು. ರಾಯಭಾರಿ ತಂಡದ ರಂಗ ಪಂದ್ಯಾವಳಿಯ ಅತ್ಯುತ್ತಮ ದಾಳಿಗಾರನಾಗಿ ಬಹುಮಾನ ಪಡೆದರೆ, ನಾಯಕನಹಟ್ಟಿ ಸ್ಪೋರ್ಟ್‍ಕ್ಲಬ್‍ನ ಮಾರೇಶ್ ಅತ್ಯುತ್ತಮ ಹಿಡಿತಗಾರ ಬಹುಮಾನವನ್ನು ತಮ್ಮದಾಗಿಸಿ ಕೊಂಡರು. ಚಿತ್ರದುರ್ಗ ಸ್ಪೋಟ್ರ್ಸ್ ಕ್ಲಬ್‍ನ ಪ್ರವೀಣ್ ಕ್ರೀಡಾಕೂಟದ ಸರ್ವೋತ್ತಮ ಆಟಗಾರನಾಗಿ ಬಹುಮಾನ ಸ್ವೀಕರಿಸಿದರು. 

ಈ ಕ್ರೀಡಾಕೂಟದ ಸಂಘಟಕರಾದ  ಕೆ.ಎಂ.ಪರಶುರಾಮ್  ಕ್ರೀಡಾಕೂಟದ ಯಶಸ್ಸಿಗೆ ಕಾರಣರಾದ ಪಿ.ಸಿ. ಮುರುಗೇಶ್, ಕಬಡ್ಡಿ ತರಬೇತುದಾರರು ಹಾಗೂ ದೈಹಿಕ ಶಿಕ್ಷಣ ನಿರ್ದೇಶಕರು ಇವರ ತಂಡಕ್ಕೂ ಹಾಗೂ ಕ್ರೀಡಾಕೂಟಕ್ಕೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ತಿಳಿಸಿದರು. 

ಈ ಪಂದ್ಯಾವಳಿಯಲ್ಲಿ ನಗರದ ಹಿರಿಯ ಕಬಡ್ಡಿ ಕ್ರೀಡಾಪಟು ಹಾಗೂ ಬಿ.ಎಸ್.ಎನ್.ಎಲ್‍ನ ನಿವೃತ್ತ ಉದ್ಯೋಗಿ ನರಸಿಂಹರೆಡ್ಡಿ ಉಪಸ್ಥಿತರಿದ್ದರು. ದಾದಾಪೀರ್, ದೈಹಿಕ ಶಿಕ್ಷಣ ನಿರ್ದೇಶಕರಾದ ಶ್ರೀಮತಿ ಸುನಿತಾ ಮುರುಳಿ ಹಾಗೂ ಹಫೀಸ್ ಇನ್ನೂ ಹಲವಾರು ತೀರ್ಪುಗಾರರು ಪಂದ್ಯಾವಳಿಯಲ್ಲಿ ತೀರ್ಪುಗಾರರಾಗಿದ್ದರು.

Views: 31

Leave a Reply

Your email address will not be published. Required fields are marked *