ಚಿತ್ರದುರ್ಗದಲ್ಲಿ ಸ್ವದೇಶಿ ಮೇಳ 2025: ದೇಸಿ ಸಂಸ್ಕೃತಿ, ಸಾವಯವ ಕೃಷಿ, ಆಯುರ್ವೇದ, ಮತ್ತು ಸ್ವಾವಲಂಬನೆಯ ಮಹೋತ್ಸವ.

ಚಿತ್ರದುರ್ಗ ನ. 11

ಪೋಟೋ ಮತ್ತು ವರದಿ ಸುರೇಶ್ ಪಟ್ಟಣ್


ನ. 12ರಿಂದ 16ರವರೆಗೆ ಮುರುಘರಾಜೇಂದ್ರ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಸ್ವದೇಶಿ ಮೇಳವನ್ನು ಜಾಗರಣ ಮಂಚ್ ಆಯೋಜಿಸಿದ್ದು ಈಗಾಗಲೇ ಮೇಳದ ಉದ್ಘಾಟನೆಗೆ ಸಕಲ ತಯಾರಿಯನ್ನು ನಡೆಸಲಾಗಿದೆ ಮಳಿಗೆಗಳನ್ನು ನಿರ್ಮಾಣ ಮಾಡಲಾಗಿದ್ದು, ಸಮಾವೇಶಗಳಿಗೆ ವೇದಿಕೆಯನ್ನು ಸಿದ್ದ ಪಡಿಸಲಾಗಿದೆ ಎಂದು ಸ್ವದೇಶಿ ಮೇಳದ ಸಂಯೋಜಕರಾದ ಕೆ.ಎಸ್.ನವೀನ್ ತಿಳಿಸಿದರು.

samagrasuddi.co.in


ಮೇಳ ನಡೆಯುವ ಜಾಗದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಮೇಳದ ಯಶಸ್ವಿಗೆ ಹಲವಾರು ತಂಡಗಳು ಹಲವಾರು ದಿನಗಳಿಂದ ಕೆಲಸವನ್ನು ನಿರ್ವಹಿಸುತ್ತಿವೆ. ದೇಸಿ ಸಂಸ್ಕೃತಿ, ದೇಸಿ ಆಟ, ಆಹಾರ, ಕ್ರೀಡೆ, ಸಾವಯವ ಕೃಷಿ, ಆಯುರ್ವೇದ ಚಿಕಿತ್ಸೆ, ದೇಸಿ ಉತ್ಪನ್ನಗಳ ಮಾರಾಟ ಹಾಗೂ ಪ್ರದರ್ಶನಗಳ ನ್ನೊಳಗೊಂಡ ಸ್ವಾವಲಂಬನೆಯ ಪರಿಕಲ್ಪನೆಯಾದ ಸ್ವದೇಶಿ ಮೇಳವನ್ನು ಕೋಟಿನಗರಿಯಲ್ಲಿ ಹಮ್ಮಿಕೊಳ್ಳ ಲಾಗಿದೆ. ಮೇಳದಲ್ಲಿ ದೇಶದ ವಿವಿಧೆಡೆಯಿಂದ ಸ್ವದೇಶಿ ಉತ್ಪನ್ನಗಳನ್ನು ತಯಾರಿಸುವ ಕರಕುಶಲಕರ್ಮಿಗಳು ಭಾಗವಹಿಸಲಿದ್ದಾರೆ. ಇದರಲ್ಲಿ  ಸ್ಥಳೀಯರಿಗೆ ತರಬೇತಿ, ಪ್ರಾತ್ಯಕ್ಷಿಕೆ ನಡೆಸಿಕೊಡಲಿದ್ದಾರೆ. ಜಿಲ್ಲೆಯ ಮಕ್ಕಳು, ಮಹಿಳೆಯರು, ವಿದ್ಯಾರ್ಥಿಗಳು, ಯುವಜನರು, ರೈತರು, ಯುವ ಉದ್ಯಮಿಗಳಿಗೆ ವಿವಿಧ ರೀತಿಯ ಚಟುವಟಿಕೆ ಆಯೋಜಿಸಲಾಗಿದೆ ಎಂದರು.


ನ. 12ರಂದು ವಿಧ್ಯುಕ್ತವಾಗಿ ಮೇಳಕ್ಕೆ ಚಾಲನೆ ದೊರೆಯಲಿದೆ. ಅಂದು ಸ್ವಾವಲಂಬನೆ ಕಲ್ಪನೆಯ ಸ್ವದೇಶಿ ಮೇಳವನ್ನು ಪ್ಲಾಸ್ಟಿಕ್ ಮುಕ್ತವಾಗಿ ನಡೆಯುತ್ತಿರುವುದು ವಿಶೇಷವಾಗಿದೆ. ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ದೇಸಿ ಕ್ರೀಡಾ ಸ್ಪರ್ಧೆಗಳು ನಡೆಯಲಿವೆ. ಸ್ವದೇಶಿ ವಸ್ತುಗಳ ಉತ್ಪಾದನೆ, ಬಳಕೆ ಮಾಡುವುದರ ಕುರಿತು ಜನಸಾಮಾನ್ಯರಲ್ಲಿ ಅರಿವು ಮೂಡಿಸುವುದು ಮೇಳದ ಉದ್ದೇಶವಾಗಿದ್ದು, ಜಿಲ್ಲೆಯಾದ್ಯಂತ ಪ್ರತಿ ಮನೆಗಳಿಗೂ ಕರಪತ್ರಗಳನ್ನು ತಲುಪಿಸಲಾಗುತ್ತಿದೆ. ನ.12ರ ಮೇಳದ ಉದ್ಘಾಟನಾ ಸಮಾರಂಭದಲ್ಲಿ ಸಿರಿಗೆರೆಯ ಡಾ. ಶಿವಮೂರ್ತಿ ಶಿವಾಚಾರ್ಯ ಶ್ರೀಗಳು ಆಗಮಿಸಲಿದ್ದು ಮಾಜಿ ಮುಖ್ಯಮಂತ್ರಿಗಳು ಹಾಲಿ ಸಂಸದರಾದ ಬಸವರಾಜ್ ಬೊಮ್ಮಾಯಿ ಮೇಳವನ್ನು ಉದ್ಘಾಟನೆ ಮಾಡಲಿದ್ದಾರೆ.  ಪಂಚಾಚಾರ್ಯ ಕಲ್ಯಾಣ ಮಂಟಪ ದಿಂದ ವಿವಿಧ ಕಲಾತಂಡಗಳ ಮೂಲಕ ಗಣ್ಯರನ್ನು ವೇದಿಕೆಗೆ ಕರೆ ತರಲಾಗುವುದು. ನ.12ರ ಬೆಳಿಗ್ಗೆ ಗೋಪೂಜೆಯನ್ನು ನಡೆಸಲಾಗುವುದು ತದ ನಂತರ ದೇಶಿ ಕ್ರೀಡೆಗಳನ್ನು ನಡೆಸಲಾಗುವುದು. ನ.13ರಂದು ವಚನಾಂದ ಶ್ರೀಗಳಿಂದ ಯೋಗ ಪ್ರದರ್ಶನ ಕಾರ್ಯಕ್ರಮ ನಡೆಯಲಿದೆ. ಇದರಲ್ಲಿ ಚಿತ್ರದುರ್ಗದ ವಿವಿಧ ಯೋಗ ಸಂಸ್ಥೆಯ ಪದಾಧಿಕಾರಿಗಳು ಸೇರಿದಂತೆ ಸಾರ್ವಜನಿಕರು ಭಾಗವಹಿಸಲಿದ್ದಾರೆ ಎಂದರು.


ನ.17ರ ಸಮಾರೋಪ ಸಮಾರಂಭದಲ್ಲಿ ಜಗಳೂರಿನ ಕಣ್ವಕುಪ್ಪೆಯ ಶಾಂತಲಿಂಗೇಶ್ವರ ಶ್ರೀಗಳು, ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಷಿ ಸೇರಿದಂತೆ ಜಿಲ್ಲೆಯ ಸಚಿವರು ಶಾಸಕರು ಭಾಗವಹಿಸಲಿದ್ದಾರೆ. ಮೇಳದ ಅಂಗವಾಗಿ ನಗರದ ಆರು ಕಡೆಗಳಲ್ಲಿ ಮಹಾದ್ವಾರಗಳನ್ನು ನಿರ್ಮಾಣ ಮಾಡಲಾಗುವುದು ಇದಕ್ಕೆ ಎಸ್.ನಿಜಲಿಂಗಪ್ಪ, ರಾಜ ವೀರ ಮದಕರಿ, ಓನಕೆ ಒಬವ್ವ, ತರಾಸು, ಬಿಚ್ಚುಗತ್ತಿ ಭರಮಣ್ಣ ನಾಯಕರ ಹೆಸರನ್ನು ಇಡಲಾಗುವುದು ಇದ್ದಲ್ಲದೆ ಮೇಳದ ಮುಂದೆ ಮಹಾದ್ವಾರವನ್ನು ನಿರ್ಮಾಣ ಮಾಡಲಾಗುವುದು.  ಈ ಮೇಳದಲ್ಲಿ ಪ್ಲಾಸ್ಟಿಕ್  ಬಳಕೆಯನ್ನು ನಿಷೇಧ ಮಾಡಲಾಗಿದೆ ಇದರ ಬದಲು ಸ್ಟಿಲ್ ಲೋಟಗಳನ್ನು ಕುಡಿಯುವ ನೀರಿಗೆ ಬಳಕೆ ಮಾಡುವುದರ ಜೊತೆಗೆ ಅಡಿಕೆ ತಟ್ಟೆಗಳನ್ನು ಸಹಾ ಬಳಕೆ ಮಾಡಲಾಗುವುದು. ಮೇಳ ಪೂರ್ಣ ಪ್ರಮಾಣದಲ್ಲಿ ಪರಿಸರ ಸ್ನೇಹಿಯಾಗಿ ಮಾಡಲಾಗುವುದು. ಈ ಮೇಳದಲ್ಲಿ ಮಾರಾಟಗಾರರನ್ನು ಗ್ರಾಹಕರಿಗೆ ಪರಿಚಯಿಸುವ ಕಾರ್ಯವನ್ನು ಮಾಡಲಾಗುವುದು ಮೇಳದಲ್ಲಿ ಆಗುವ ವ್ಯಾಪಾರಕ್ಕಿಂತ ಮೇಳದ ನಂತರ ಹೆಚ್ಚಿನ ಪ್ರಮಾಣದಲ್ಲಿ ವಹಿವಾಟು ನಡೆಯುತ್ತಿದೆ ಎಂದು ನವೀನ್ ತಿಳಿಸಿದರು. 


ಗೋಷ್ಟಿಯಲ್ಲಿ ಸ್ವದೇಶಿ ಮೇಳದ ಸಂಘಟಕರಾದ ಜಗದೀಶ್, ಸಂಘಟಕರಾದ ರವೀಂದ್ರ, ಸಹ ಸಂಘಟಕರಾದ ಕೆ.ಟಿ.ಕುಮಾರಸ್ವಾಮಿ, ಸಹ ಸಂಚಾಲಕರಾದ ಹನುಮಂತೇಗೌಡ, ಸಂಪತ್ ಕುಮಾರ್ ವೆಂಕಟೇಶ್ ಯಾದವ್, ನಾಗರಾಜ್ ಬೇದ್ರೇ ಯಶವಂತ ಛಲವಾದಿ ತಿಪ್ಪೇಸ್ವಾಮಿ, ರವಿತೇಜ, ಪ್ರದೀಪ್, ಪರಶುರಾಮ್, ಸೇರಿದಂತೆ ಇನ್ನು ಅನೇಕರು ಪತ್ರಿಕಾಗೋಷ್ಠಿಯಲ್ಲಿದ್ದರು.

Leave a Reply

Your email address will not be published. Required fields are marked *