Symptoms Of Kidney Disease: ಈ ರೋಗಲಕ್ಷಣಗಳು ದುರ್ಬಲ ಮೂತ್ರಪಿಂಡದ ಸಂಕೇತವಾಗಿರಬಹುದು!

ಕಿಡ್ನಿ ಕಾಯಿಲೆಯ ಲಕ್ಷಣಗಳು: ಮೂತ್ರಪಿಂಡವು ದೇಹದ ಅತ್ಯಂತ ಪ್ರಮುಖವಾದ ಅಂಗವಾಗಿದೆ. ಒಂದು ವೇಳೆ ಎರಡೂ ಕಿಡ್ನಿಗಳು ಕೆಲಸ ಮಾಡುವುದನ್ನು ನಿಲ್ಲಿಸಿದರೆ 24 ಗಂಟೆಯೊಳಗೆ ವ್ಯಕ್ತಿ ಸಾಯುತ್ತಾನೆ. ಆದರೆ ಮೂತ್ರಪಿಂಡ ದುರ್ಬಲವಾದಾಗ ನಮ್ಮ ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ ಎಂಬುದು ನಿಮಗೆ ತಿಳಿದಿದೆಯೇ?

Symptoms Of Kidney Disease: ನಮ್ಮ ದೇಹದಲ್ಲಿ 2 ಕಿಡ್ನಿಗಳಿವೆ. ಕಿಡ್ನಿ ದೇಹದ ಬಹುಮುಖ್ಯ ಅಂಗ. ಇದು ಮೂತ್ರದ ಮೂಲಕ ದೇಹದಲ್ಲಿನ ವಿಷಕಾರಿ ವಸ್ತುಗಳನ್ನು ಹೊರಹಾಕುತ್ತದೆ. ಎರಡೂ ಮೂತ್ರಪಿಂಡಗಳು ಕೆಲಸ ಮಾಡುವುದನ್ನು ನಿಲ್ಲಿಸಿದ ನಂತರ ವ್ಯಕ್ತಿ 24 ಗಂಟೆಗಳಲ್ಲಿ ಸಾವನ್ನಪ್ಪುತ್ತಾನೆ. ಇದಕ್ಕಾಗಿಯೇ ಮೂತ್ರಪಿಂಡವನ್ನು ಆರೋಗ್ಯವಾಗಿಡುವುದು ಬಹಳ ಮುಖ್ಯ. ಆದರೆ ಇಂದಿನ ದಿನಗಳಲ್ಲಿ ಕಂಡುಬರುತ್ತಿರುವ ಆಹಾರ ಪದಾರ್ಥಗಳು, ಎಲ್ಲದರಲ್ಲೂ ರಾಸಾಯನಿಕಗಳನ್ನು ಬೆರೆಸಲಾಗಿದೆ. ಅದಕ್ಕಾಗಿಯೇ ಮೂತ್ರಪಿಂಡವು ಸಮಯಕ್ಕೆ ಮುಂಚಿತವಾಗಿ ದುರ್ಬಲಗೊಳ್ಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ ನೀವು ಮೂತ್ರಪಿಂಡಕ್ಕೆ ಸಂಬಂಧಿಸಿದ ಕಾಯಿಲೆಗೆ ತುತ್ತಾಗುತ್ತೀರಿ. ಮೂತ್ರಪಿಂಡ ದುರ್ಬಲವಾದಾಗ ನಮ್ಮ ದೇಹವು ಕೆಲವು ಸಂಕೇತಗಳನ್ನು ನೀಡುತ್ತದೆ ಎಂದು ನಿಮಗೆ ತಿಳಿದಿದೆಯೇ? ನೀವು ಯಾವುದನ್ನೂ ನಿರ್ಲಕ್ಷಿಸಬಾರದು.

ಕಿಡ್ನಿ ದುರ್ಬಲವಾದಾಗ ಮೂತ್ರದಲ್ಲಿ ತೊಂದರೆ ಉಂಟಾಗುತ್ತದೆ. ಇದರಿಂದ ಮೂತ್ರದ ಬಣ್ಣವೂ ಬದಲಾಗತೊಡಗುತ್ತದೆ. ಅದೇ ರೀತಿ ಮೂತ್ರದಿಂದ ವಾಸನೆ ಬರಲು ಪ್ರಾರಂಭಿಸುತ್ತದೆ. ಏಕೆಂದರೆ ಮೂತ್ರಪಿಂಡದಲ್ಲಿ ಸಮಸ್ಯೆ ಉಂಟಾದಾಗ, ಮೂತ್ರಪಿಂಡದ ಮೇಲೆ ಒತ್ತಡವಿರುತ್ತದೆ. ಇದರಿಂದಾಗಿ ಮೂತ್ರದಲ್ಲಿ ಹೆಚ್ಚಿನ ಪ್ರೋಟೀನ್ ಬರಲು ಪ್ರಾರಂಭಿಸುತ್ತದೆ. ಆದ್ದರಿಂದ ಈ ಸಮಸ್ಯೆ ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ.

ಹಸಿವು ಅನೇಕ ರೋಗಗಳ ಲಕ್ಷಣವಾಗಿದೆ. ಆದರೆ ಮೂತ್ರ ವಿಸರ್ಜನೆಯಲ್ಲಿ ತೊಂದರೆಯ ಜೊತೆಗೆ ಹಸಿವು ಕಡಿಮೆಯಾಗಿದ್ದರೆ, ಅದು ಮೂತ್ರಪಿಂಡದ ದುರ್ಬಲತೆಯ ಸಂಕೇತವಾಗಿದೆ. ಹೌದು ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ಹಸಿವು ಕಡಿಮೆಯಾಗಲು ಪ್ರಾರಂಭಿಸುತ್ತದೆ ಮತ್ತು ಹೊಟ್ಟೆಯಲ್ಲಿ ನೋವು ಕಾಣಿಸಿಕೊಳ್ಳುತ್ತದೆ.

ಮೂತ್ರಪಿಂಡವು ದುರ್ಬಲಗೊಳ್ಳಲು ಪ್ರಾರಂಭಿಸಿದರೆ ನೀವು ಅಧಿಕ ರಕ್ತದೊತ್ತಡ ಕಾಯಿಲೆಗೆ ಒಳಗಾಗುತ್ತೀರಿ. ನೀವು ಅಧಿಕ ರಕ್ತದೊತ್ತಡವನ್ನು ಹೊಂದಿದ್ದರೆ, ಮೂತ್ರಪಿಂಡವನ್ನು ಪರೀಕ್ಷಿಸಬೇಕು.

ಕಿಡ್ನಿ ಸಮಸ್ಯೆ ಹೆಚ್ಚಾದಾಗ ಎದೆನೋವಿನ ಕೂಡ ಬರುತ್ತದೆ. ಏಕೆಂದರೆ ಕಿಡ್ನಿಯಲ್ಲಿ ಸಮಸ್ಯೆ ಉಂಟಾದಾಗ ಕಿಡ್ನಿಯು ರಕ್ತವನ್ನು ಸರಿಯಾಗಿ ಶೋಧಿಸಲು ಸಾಧ್ಯವಾಗದೆ ಅದು ಹೃದಯದ ಒಳಪದರದ ಬಳಿ ಶೇಖರಣೆಗೊಂಡು ಎದೆನೋವು ಶುರುವಾಗುತ್ತದೆ. ಆದ್ದರಿಂದ ಎದೆ ನೋವು ಇದ್ದರೆ ಅದನ್ನು ನಿರ್ಲಕ್ಷಿಸಬೇಡಿ.

Source : https://zeenews.india.com/kannada/photo-gallery/these-symptoms-are-a-sign-of-weak-kidney-do-not-ignore-even-by-mistake-147055/symptoms-of-kidney-disease-147056

  

Leave a Reply

Your email address will not be published. Required fields are marked *