Causes of breathlessness while climbing stairs:ಕೆಲವರು ಕೆಲವೇ ಕೆಲವು ಮೆಟ್ಟಿಲುಗಳನ್ನು ಹತ್ತಿದರೂ ಸುಸ್ತಾಗುತ್ತಾರೆ. ಉಸಿರಾಟದ ತೊಂದರೆ ಎದುರಿಸುತ್ತಾರೆ. ಕೆಲವರು ಈ ಸಮಸ್ಯೆಯನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಇದು ಪ್ರಮುಖ ಕಾಯಿಲೆಯ ಸಂಕೇತವೂ ಆಗಿರಬಹುದು.
- ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಗೆ ಬಹಳ ಮಹತ್ವ ನೀಡುತ್ತಾರೆ.
- ಇತ್ತೀಚಿನ ದಿನಗಳಲ್ಲಿ ಜನರು ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತಾರೆ.
- ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಯಾಕೆ ಕಾಣಿಸುತ್ತದೆ

Causes of breathlessness while climbing stairs:ಇತ್ತೀಚಿನ ದಿನಗಳಲ್ಲಿ ಜನರು ಫಿಟ್ನೆಸ್ ಗೆ ಬಹಳ ಮಹತ್ವ ನೀಡುತ್ತಾರೆ. ಆದರೂ ಜನರು ಚಿಕ್ಕ ವಯಸ್ಸಿನಲ್ಲೇ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಸ್ವಲ್ಪ ಕೆಲಸ ಮಾಡಿದರೂ ಸುಸ್ತಾಗುತ್ತಾರೆ. ಇನ್ನು ಕೆಲವರು ಕೆಲವೇ ಕೆಲವು ಮೆಟ್ಟಿಲುಗಳನ್ನು ಹತ್ತಿದರೂ ಸುಸ್ತಾಗುತ್ತಾರೆ. ಉಸಿರಾಟದ ತೊಂದರೆ ಎದುರಿಸುತ್ತಾರೆ. ಕೆಲವರು ಈ ಸಮಸ್ಯೆಯನ್ನು ನಿರ್ಲಕ್ಷಿಸಿ ಬಿಡುತ್ತಾರೆ. ಆದರೆ ಇದು ಪ್ರಮುಖ ಕಾಯಿಲೆಯ ಸಂಕೇತವೂ ಆಗಿರಬಹುದು.
ಮೆಟ್ಟಿಲುಗಳನ್ನು ಹತ್ತುವಾಗ ಉಸಿರಾಟದ ತೊಂದರೆ ಯಾಕೆ ಕಾಣಿಸುತ್ತದೆ :
ಹೃದ್ರೋಗ :
ಕೆಲವೇ ಮೆಟ್ಟಿಲುಗಳನ್ನು ಹತ್ತಿದ ಕೂಡಲೇ ಉಸಿರಾಟದ ತೊಂದರೆ ಎದುರಾದರೆ, ಅದು ಹೃದ್ರೋಗದ ಸಂಕೇತವಾಗಿರುತ್ತದೆ. ಆದ್ದರಿಂದ, ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಕಾಣಿಸಿಕೊಂಡರೆ ಅದನ್ನು ಲಘುವಾಗಿ ಪರಿಣಮಿಸಬಾರದು.
ಅಸ್ತಮಾ ಸಮಸ್ಯೆ :
ಮೆಟ್ಟಿಲು ಹತ್ತುವಾಗ ಉಸಿರಾಟದ ತೊಂದರೆ ಉಂಟಾದರೆ ಅದು ಅಸ್ತಮಾದ ಲಕ್ಷಣವಾಗಿರಬಹುದು. ಏಕೆಂದರೆ ಅಸ್ತಮಾದಿಂದ ಶ್ವಾಸಕೋಶದ ಸ್ಥಿತಿ ಹದಗೆಡುತ್ತದೆ. ಇದರಿಂದಾಗಿ ಉಸಿರಾಟಕ್ಕೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಉಂಟಾಗುತ್ತವೆ.
ಸ್ಥೂಲಕಾಯತೆ :
ಸ್ಥೂಲಕಾಯತೆಯಿಂದಾಗಿ ಈ ಸಮಸ್ಯೆ ಎದುರಾಗುತ್ತದೆ. ಹೆಚ್ಚುವರಿ ದೇಹದ ತೂಕದಿಂದಾಗಿ, ಉಸಿರಾಟದ ತೊಂದರೆಯೂ ಪ್ರಾರಂಭವಾಗುತ್ತದೆ. ಸ್ಥೂಲಕಾಯತೆಯಿಂದಾಗಿ ದೇಹದಲ್ಲಿ ಇತರ ಸಮಸ್ಯೆಗಳು ಉಂಟಾಗುತ್ತವೆ.
COPD:
ಅತಿಯಾಗಿ ಧೂಮಪಾನ ಮಾಡುವ ಜನರು ಶ್ವಾಸಕೋಶದ ಕಾಯಿಲೆಯ ಸಮಸ್ಯೆಯನ್ನು ಹೊಂದಿರುತ್ತಾರೆ. ಇದರಿಂದಾಗಿ ಉಸಿರಾಟದ ತೊಂದರೆ ಪ್ರಾರಂಭವಾಗುತ್ತದೆ. ಏಕೆಂದರೆ ದೀರ್ಘಕಾಲದವರೆಗೆ ಧೂಮಪಾನ ಮಾಡುವುದರಿಂದ ಶ್ವಾಸಕೋಶ ಹಾನಿಯಾಗುತ್ತದೆ.
ಸೂಚನೆ: ಇಲ್ಲಿ ನೀಡಲಾದ ಎಲ್ಲಾ ಮಾಹಿತಿಯು ಕೆಲವು ಸಂಶೋಧನೆ ಹಾಗೂ ಸಾಮಾನ್ಯ ಮಾಹಿತಿಗಳನ್ನು ಆಧರಿಸಿದೆ. ಸಮಗ್ರ ಸುದ್ದಿ ಇದನ್ನು ಖಚಿತಪಡಿಸುವುದಿಲ್ಲ.
Source: https://zeenews.india.com/kannada/health/this-can-be-the-reason-for-shortness-of-breath-171080
ನಮ್ಮ ಸಮಗ್ರ ಸುದ್ದಿಗಳಿಗಾಗಿ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
WhatsApp Group : https://chat.whatsapp.com/KnDIfiBURQ9G5sLEJLqshk
Facebook page: https://www.facebook.com/samagrasudii
Sharechat: https://sharechat.com/profile/edu514826335?d=n
Twitter: https://twitter.com/SuddiSamagra
Threads: https://www.threads.net/@samagrasuddi.co.in
Instagram: https://www.instagram.com/samagrasuddi.co.in/
Telegram: https://t.me/+E1ubNzdguQ5jN2Y1