ತೋಟಗಾರಿಕೆ ಇಲಾಖೆ ಫಲ-ಪುಷ ಪ್ರದರ್ಶನಕ್ಕೆ ಆಗಮಿಸಿ, ಪ್ರದರ್ಶನವನ್ನು ವಿಕ್ಷಿಸಿ ಮಾತನಾಡಿದ: ಟಿ.ರಘುಮೂರ್ತಿ.

ವರದಿ ಮತ್ತು ಫೋಟೋ ಕೃಪೆ ಸುರೇಶ್ ಪಟ್ಟಣ್, ಮೊ : 98862 95817

ಚಿತ್ರದುರ್ಗ ಫೆ. ೧೭ ಕನ್ನಡದ ಮೊದಲ ದೊರೆ ಮಯೂರ ವರ್ಮನ ಪ್ರತಿಮೆ, ಸಾವಲಂಬಿ ರೈತ ಮಹಿಳೆ ಹಾಗೂ ರೈತನ ಪುತ್ಥಳಿ, ಎಲ್ಲಾ ಕ್ಷೇತ್ರಗಳಲ್ಲಿ ಸಾಧನೆ ಮಾಡಿರುವುದನ್ನು ಬಿಂಬಿಸಲು ಮಹಿಳೆಯ ಬೃಹತ್ ಮುಖದ ಆಕೃತಿ ಮತ್ತು ವಾಣಿವಿಲಾಸ ಸಾಗರದ ಮಾದರಿಗಳನ್ನು
ನೋಡಿ ನನಗೆ ಸಾಕಷ ಸಂತೋಷ ಮತ್ತು ಸಾರ್ಥಕ ಫಲಪುಷ್ಪ ಪ್ರದರ್ಶನ ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ ನಿಗಮದ ಅಧ್ಯಕ್ಷ
ಮತ್ತು ಚಳ್ಳಕೆರೆ ಶಾಸಕ ಟಿ.ರಘುಮೂರ್ತಿ ಬಣ್ಣಿಸಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ತೋಟಗಾರಿಕೆ ಇಲಾಖೆ, ಜಿಲ್ಲಾ ತೋಟಗಾರಿಕೆ ಸಂಘ ಹಾಗೂ ಕೃಷಿ ಇಲಾಖೆ
ಸಹಯೋಗದಲ್ಲಿ ಆಯೋಜಿಸಿದ್ದ ಫಲ-ಪುಷ ಪ್ರದರ್ಶನಕ್ಕೆ ಆಗಮಿಸಿ ತೋಟಗಾರಿಕೆ ಇಲಾಖೆ ಫಲಪುಷ್ಪ ಪ್ರದರ್ಶನವನ್ನು ವಿಕ್ಷಿಸಿ
ಮಾತನಾಡಿದರು.
೩೨ ನೇ ವಷದ ಫಲಪುಷ್ಪ ಪ್ರದರ್ಶನ ಸಾಕಷ ಅರ್ಥಪೂರ್ಣ ಮತ್ತು ಉಪಯುಕ್ತ ಸಾಕಷ ಮಾಹಿತಿಯನ್ನಯ ಒಳಗೊಂಡಿದೆ.
ವಿಶೇಷವಾಗಿ ಕಡಿಮೆ ಜಮೀನುಗಳನ್ನು ಹೊಂದಿರುವಂತಹ ರೈತರು ನಮ್ಮ ಜಿಲ್ಲೆಯಲ್ಲಿದ್ದು ಅವರಿಗೆ ಸಹಕಾರಿಯಾಗುವಂತಹ ಮಾಹಿತಿ
ಉಳ್ಳ ಸ್ವಾವಲಂಬಿ ರೈತನಾಗಲು ಅಗತ್ಯ ಮಾಹಿತಿ ನನಗೆ ಸಾಕಷ ಇಷ್ಟವಾಯಿತು.
ನಾನಾ ಜಾತಿಯ ಹೂಗಳು, ಹಣ್ಣುಗಳು ಮತ್ತು ಜಿಲ್ಲೆಯ ರೈತರು ಬೆಳೆದಿರುವ ಹಣ್ಣು ಮತ್ತು ತರಕಾರಿಗಳ ಪ್ರದರ್ಶನ, ಮಳಿಗೆ,
ಸ್ತ್ರೀಶಕ್ತಿ ಸಂಘಗಳ ಉತ್ಪನ್ನಗಳ ಮಾರಾಟಕ್ಕೂ ಅವಕಾಶ ಕಲ್ಪಿಸುವ ಮೂಲಕ ಜಿಲ್ಲಾ ಸಣ್ಣ ವ್ಯಾಪರಿಗಳಿಗೂ ತಮ್ಮ ಬ್ರಾಂಡ್
ಪ್ರಚಾರಕ್ಕೂ ಸಹ ಸಹಕಾರಿಯಾಗಿದೆ.
ನಮ್ಮ ಸಮಾಜದಲ್ಲಿ ಮಹಿಳೆಯರ ಮೇಲಿನ ಶೋಷಣೆ, ಅತ್ಯಾಚಾರ ನಿಂತಿಲ್ಲ ಎಂಬುದನ್ನು ಬಿಂಬಿಸಲು ಮಹಿಳೆಯ ಬೃಹತ್ ಮುಖದ
ಆಕೃತಿ ಜತೆಗೆ ನಾನಾ ಕ್ಷೇತ್ರಗಳಲ್ಲಿ ಸಾಧಕಿಯರ ಭಾವಚಿತ್ರ ಇರಿಸಲಾಗಿದ್ದು ಮಹಿಳೆ ಮನಸ್ಸು ಮಾಡಿದರೆ ಯಾವ ಸಾಧನೆಗೂ ಸೈ
ಎಂಬಂತೆ ಮಹಿಲೆಯರಿದ್ದು ಸಾಧಲಿಯರ ಫೋಟೋ ಪ್ರದರ್ಶನದಿಂದ ಸಾವಿರಾರು ಮಹಿಳೆಯರ ಆತ್ಮ ವಿಶ್ವಾಸ ಹೆಚ್ಚುತ್ತದೆ
ಎಂದರು.
ರೈತರು ತೋಟಗಾರಿಕೆ ಇಲಾಖೆಯ ಫಲಪುಷ್ಟ ಪ್ರದರ್ಶನಗಳಿಗೆ ಭಾಗವಹಿಸಿದರೆ ತಮ್ಮ ಶಕ್ತಿ ಹೆಚ್ಚುತ್ತದೆ. ಅನೇಕ ಯೋಜನೆಗಳ
ಮಾಹಿತಿ ದೊರೆಯುತ್ತದೆ. ಸರ್ಕಾರದ ಯೋಜನೆಯನ್ನು ಯಾವ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಮಾಹಿತಿ ಫಲಪುಷ್ಟ
ಪ್ರದರ್ಶನ ದೊರೆಯುವ ಕಾಲಕೃತಿ, ರೇಖಾಚಿತ್ರಗಳು, ಪುಷಗಳಲ್ಲಿ ದೊರೆಯುತ್ತದೆ. ಸ್ವಾವಲಂಬಿ ರೈತರಾಗಲು ಇಲಾಖೆ
ಕಾರ್ಯಕ್ರಮಗಳ ಉಪಯೋಗ ಪಡೆದುಕೊಂಡು ರೈತರು ಸಹ ಸದೃಢ ಬದುಕು ಕಟ್ಟಿಕೊಳ್ಳಬೇಕು ಎಂದು ಸಣ್ಣ ಕೈಗಾರಿಕೆ ಅಭಿವೃದ್ಧಿ
ನಿಗಮದ ಅಧ್ಯಕ್ಷರು, ಶಾಸಕರಾದ ಟಿ.ರಘುಮೂರ್ತಿ ತಿಳಿಸಿದರು.
ಈ ಸಂದರ್ಭದಲ್ಲಿ ತೋಟಗಾರಿಕೆ ಇಲಾಖೆ ಉಪ ನಿರ್ದೇಶಕಿ ಸವಿತಾ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರುಗಳಾದ
ದೇವರಾಜ್, ಲೋಕೇಶ್, ವಿರೂಪಾಕ್ಷಪ್ಪ ಮತ್ತು ಅಧಿಕಾರಿಗಳು ಇದ್ದರು.

Leave a Reply

Your email address will not be published. Required fields are marked *